twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲವೂ ಕೂಡಿ ಬಂದರೆ ಕಾಂಗ್ರೆಸ್ ಪಕ್ಷದಿಂದಲೇ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ.!

    |

    Recommended Video

    Lok Sabha Elections 2019:ಅಭಿಮಾನಿಗಳ ಆಸೆ ಸೋಲಬಾರದು, ರಾಜಕೀಯ ಪ್ರವೇಶ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ..!

    'ಮಂಡ್ಯದ ಗಂಡು' ಎಂದೇ ಕರೆಯಿಸಿಕೊಳ್ಳುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಸ್ಥಾನವನ್ನು ಮಂಡ್ಯ ಜಿಲ್ಲೆಯಲ್ಲಿ ತುಂಬಲು ಪತ್ನಿ ಸುಮಲತಾ ಅಂಬರೀಶ್ ಮಾತ್ರರಿಂದಲೇ ಸಾಧ್ಯ ಎಂಬುದು ಅಭಿಮಾನಿಗಳ ಮಾತು.

    ಅಭಿಮಾನಿಗಳ ಆಸೆ, ಪ್ರೀತಿ, ಇಚ್ಛೆಗೆ ನೋವುಂಟು ಮಾಡದಿರಲು ನಿರ್ಧರಿಸಿರುವ ಸುಮಲತಾ ಅಂಬರೀಶ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ''ಅಭಿಮಾನಿಗಳ ಪ್ರೀತಿಯಿಂದ ಗೆಲುವಾಗಬೇಕು'' ಎಂದು ಬಯಸಿರುವ ಸುಮಲತಾ ಅಂಬರೀಶ್.. ಎಲ್ಲವೂ ಕೂಡಿ ಬಂದರೆ ಕಾಂಗ್ರೆಸ್ ಪಕ್ಷದಿಂದಲೇ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಮುಂದೆ ಓದಿರಿ...

    ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಸುಮಲತಾ ಅಂಬರೀಶ್

    ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಸುಮಲತಾ ಅಂಬರೀಶ್

    ಇತ್ತೀಚೆಗಷ್ಟೇ ಆದಿಚುಂಚನಗಿರಿಗೆ ಪುತ್ರ ಅಭಿಷೇಕ್ ಜೊತೆಗೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು. ಕಾಲಭೈರವೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

    ಸುಮಲತಾ ಲೋಕಸಭಾ ಚುನಾವಣೆಗೆ: ಪ್ರಚಾರ ಜವಾಬ್ದಾರಿ ದರ್ಶನ್ ಹೆಗಲಿಗೆ.!ಸುಮಲತಾ ಲೋಕಸಭಾ ಚುನಾವಣೆಗೆ: ಪ್ರಚಾರ ಜವಾಬ್ದಾರಿ ದರ್ಶನ್ ಹೆಗಲಿಗೆ.!

    ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ ಸುಮಲತಾ.?

    ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ ಸುಮಲತಾ.?

    ವಿಶೇಷ ಪೂಜೆ ಸಲ್ಲಿಸಿದ ಬಳಿಕ, ''ಚುನಾವಣೆಯಲ್ಲಿ ಅಭಿಮಾನಿಗಳ ಇಚ್ಛೆಯಂತೆ ಸುಮಲತಾ ಕಣಕ್ಕೆ ಇಳಿಯುತ್ತಾರಾ.?'' ಎಂಬ ಪ್ರಶ್ನೆ ಮಾಧ್ಯಮಗಳಿಂದ ತೂರಿ ಬಂತು. ಅದಕ್ಕೆ, ''ಅಂಬರೀಶ್ ಜೀವನದಲ್ಲಿ ಯಾರೇ ಗೆಲ್ಲಿಸಿದ್ದರೂ, ಸೋಲಿಸಿದ್ದರೂ.. ಅಭಿಮಾನಿಗಳು ಮಾತ್ರ ಅವರ ಜೊತೆಯಲ್ಲಿ ಸದಾ ಕಾಲ ಇದ್ದರು. ಅಭಿಮಾನಿಗಳ ಆಸೆ ನೆರವೇರಿಸಬೇಕು ಎಂಬ ಆಸೆ ನನಗೂ ಇದೆ. ಅಭಿಮಾನಿಗಳ ಪ್ರೀತಿಯನ್ನು ಬಿಟ್ಟುಕೊಡಲು ನನಗೂ ಇಷ್ಟ ಇಲ್ಲ. ಅಭಿಮಾನಿಗಳ ಆಸೆ ಸೋಲಾಗಬಾರದು, ಗೆಲುವಾಗಬೇಕು ಎಂಬ ಇಚ್ಛೆ ನನಗಿದೆ. ಸದ್ಯಕ್ಕೆ ನಿರ್ಧಾರ ನನ್ನ ಕೈಯಲ್ಲಿ ಮಾತ್ರ ಇಲ್ಲ. ಎಲ್ಲವೂ ಕೂಡಿ ಬಂದರೆ ಹಂಡ್ರೆಡ್ ಪರ್ಸೆಂಟ್ ಆಗುತ್ತೆ. ಇಲ್ಲಾಂದ್ರೆ, ನಾನು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ'' ಎಂದು ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದರು.

    ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ.?ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ.?

    ಯಾವ ಪಕ್ಷದಿಂದ ಸುಮಲತಾ ಸ್ಪರ್ಧಿಸುತ್ತಾರೆ.?

    ಯಾವ ಪಕ್ಷದಿಂದ ಸುಮಲತಾ ಸ್ಪರ್ಧಿಸುತ್ತಾರೆ.?

    ''ಅಂಬರೀಶ್ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿದ್ದರು. ಹೀಗಾಗಿ ಹಂಡ್ರೆಡ್ ಪರ್ಸೆಂಟ್ ಕಾಂಗ್ರೆಸ್ ಪಕ್ಷದಿಂದಲೇ ಅಪೇಕ್ಷೆ ಪಡುತ್ತೇನೆ'' ಎಂದು ಸ್ಪಷ್ಟವಾಗಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಅಂಬಿ ಅಭಿಮಾನಿಯ ವಿಶಿಷ್ಟ ಪ್ರೀತಿ ಕಂಡು ಸಂತಸಗೊಂಡ ಸುಮಲತಾಅಂಬಿ ಅಭಿಮಾನಿಯ ವಿಶಿಷ್ಟ ಪ್ರೀತಿ ಕಂಡು ಸಂತಸಗೊಂಡ ಸುಮಲತಾ

    ಎಲ್ಲವೂ ಕೂಡಿ ಬರಬೇಕು ಅಷ್ಟೇ.!

    ಎಲ್ಲವೂ ಕೂಡಿ ಬರಬೇಕು ಅಷ್ಟೇ.!

    ಒಟ್ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಮಲತಾ ಅಂಬರೀಶ್ ರೆಡಿ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಕ್ಕರೆ, ಸುಮಲತಾ ಸ್ಪರ್ಧಿಸುವುದು ಗ್ಯಾರೆಂಟಿ.

    English summary
    Sumalatha Ambareesh wants to contest in Mandya Loksabha Election 2019 from Congress Party.
    Monday, February 11, 2019, 11:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X