»   » 23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ನಟಿ ಸುಮಲತಾ ಅಂಬರೀಶ್ ಮಾತು

23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ನಟಿ ಸುಮಲತಾ ಅಂಬರೀಶ್ ಮಾತು

Posted By:
Subscribe to Filmibeat Kannada
Sumalatha Ambareesh wishes Sudeep in a different style on his Birthday | FIlmibeat Kannada

'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ನಿನ್ನೆ (ಸೆಪ್ಟೆಂಬರ್ 2) ಆಚರಿಸಿಕೊಳ್ಳಲಿಲ್ಲ.

ಆದರೂ, ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಸುದೀಪ್ ಹುಟ್ಟುಹಬ್ಬವನ್ನು 'ದೊಡ್ಡ ಹಬ್ಬದಂತೆ' ಆಚರಿಸಿದರು. ಅನೇಕರು ರಕ್ತದಾನ, ಅನ್ನದಾನ ಮಾಡುವ ಮೂಲಕ 'ನಲ್ಲ'ನ ಜನ್ಮದಿನವನ್ನ ಆಚರಿಸಿದರೆ, ಕೆಲವರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

Sumalatha Ambareesh wishes Kiccha Sudeep on his birthday in Twitter

'ಫೇಸ್ ಬುಕ್ ಲೈವ್'ನಲ್ಲಿ ವಿಲನ್ ಬಗ್ಗೆ ಎಕ್ಸ್ ಕ್ಲೂಸಿವ್ ವಿಷ್ಯ ಕೊಟ್ಟ ಸುದೀಪ್

ಇನ್ನೂ ಸೆಲೆಬ್ರಿಟಿಗಳು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಸುದೀಪ್ ಗೆ ಶುಭಾಶಯ ಕೋರಿದರು. ನಟಿ ಸುಮಲತಾ ಅಂಬರೀಶ್ ಕೂಡ ಸುದೀಪ್ ಗೆ 'ಟ್ವಿಟ್ಟರ್' ಮೂಲಕ ಶುಭ ಹಾರೈಸಿದರು.

ಸುದೀಪ್ ಬರ್ತ್ ಡೇಗೆ 'ಕಿರಿಕ್' ರಶ್ಮಿಕಾ ಹೇಗೆ ವಿಶ್ ಮಾಡಿದ್ರು ನೋಡಿ

23 ವರ್ಷಗಳ ಹಿಂದಿನ ಒಂದು ಫೋಟೋ ಶೇರ್ ಮಾಡುವ ಮೂಲಕ ಸುದೀಪ್ ಗೆ ಬರ್ತಡೇ ವಿಶ್ ಮಾಡಿದರು ನಟಿ ಸುಮಲತಾ ಅಂಬರೀಶ್.

Sumalatha Ambareesh wishes Kiccha Sudeep on his birthday in Twitter

''23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಮಿನುಗಬೇಕು ಎಂದು ಕಾಯುತ್ತಿದ್ದ ಯುವಕ ಇಂದು ತನ್ನದೇ ರೀತಿಯಲ್ಲಿ ಯಶಸ್ವಿ ಆಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತದೆ. ಸದಾ ಖುಷಿ ಆಗಿರಿ'' ಎಂದು 23 ವರ್ಷಗಳ ಹಿಂದೆ ಕ್ಲಿಕ್ ಆಗಿದ್ದ ಫೋಟೋ ಸಮೇತ ನಟಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

ಸುಮಲತಾ ಅಂಬರೀಶ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

English summary
Kannada Actress Sumalatha Ambareesh has taken her twitter account to wish Kiccha Sudeep on his birthday. Check out Sumalatha Ambareesh's tweet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada