For Quick Alerts
  ALLOW NOTIFICATIONS  
  For Daily Alerts

  ಸುಮಲತಾ-ಅಂಬರೀಶ್ 29ನೇ ವಿವಾಹ ವಾರ್ಷಿಕೋತ್ಸವ

  |

  ಕನ್ನಡ ಚಿತ್ರರಂಗದ ತಾರಾಜೋಡಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ವಿವಾಹವಾಗಿ ಇಂದಿಗೆ 29 ವರ್ಷ ಪೂರೈಸಿದ್ದಾರೆ. ಈ ವಿಶೇಷವಾಗಿ ಅಂಬಿ ಅಭಿಮಾನಿಗಳು ಸುಮ ಮತ್ತು ಅಂಬಿ ದಂಪತಿಗೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

  ಅಂಬಿ-ಸುಮ ವಿವಾಹ ದಿನದ ವಿಶೇಷವಾಗಿ ಅಭಿಮಾನಿಯೊಬ್ಬ ಫ್ಯಾನ್ ಮೇಡ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದನ್ನು ತಮ್ಮ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಸುಮಲತಾ, ಅಂಬಿಯನ್ನು ನೆನೆದಿದ್ದಾರೆ.

  ಮಂಡ್ಯದ ಗಂಡಿಗೆ ಮದ್ದೂರಿನಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು

  ''ಇಂದಿಗೆ 29 ವರುಷ... ನನ್ನ ನಿಮ್ಮ ಪ್ರೇಮದ ಪಯಣ ನಿರಂತರ... ಸುಂದರ ಕ್ಷಣಗಳನ್ನು ನಮ್ಮ ವಿವಾಹ ವಾರ್ಷಕೋತ್ಸವಕ್ಕೆ ಒಲವಿನ ಉಡುಗೊರೆಯಾಗಿ ಈ ವಿಡಿಯೋ ಮಾಡಿರುವ ಅಭಿಮಾನಿಗೆ ಧನ್ಯವಾದಗಳು.'' ಎಂದು ತಿಳಿಸಿದ್ದಾರೆ.

  1991 ಡಿಸೆಂಬರ್ 8 ರಂದು ಅಂಬರೀಶ್ ಹಾಗೂ ಸುಮಲತಾ ಮದುವೆ ಆಗಿದ್ದರು. ಚಿತ್ರರಂಗದಲ್ಲಿ ಸ್ನೇಹಿತ ಸ್ನೇಹಿತೆ ಆಗಿದ್ದ ಇಬ್ಬರು ಪ್ರೀತಿ ಮಾಡಿದರು. ನಂತರ ಈ ಜೋಡಿ ಮದುವೆ ಮಾಡಿಕೊಂಡರು.

  ರವಿಚಂದ್ರನ್ ಮೆಗಾ ಪ್ರಾಜೆಕ್ಟ್‌ನಲ್ಲಿ ಮಂಡ್ಯ ಸಂಸದೆ ಸುಮಲತಾ ನಟನೆ

  ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada

  ಅಂದ್ಹಾಗೆ, ಅಂಬರೀಶ್ ಅವರ ಅಗಲಿ ಎರಡು ವರ್ಷ ಕಳೆದಿದೆ. ಅಂಬಿ ಇಲ್ಲದೇ ಎರಡು ವರ್ಷ ಕಳೆದ ಸುಮಲತಾ, ಪ್ರೀತಿ ಪೂರ್ವಕ ವ್ಯಕ್ತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನವೆಂಬರ್ 24, 2018 ರಂದು ಅಂಬರೀಶ್ ಅವರು ನಿಧನರಾದರು.

  English summary
  Kannada actress and Mandya MP Sumalatha Ambaressh posted fan made video on the occasion of her 29th wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X