ಅಂಬಿಯಲ್ಲಿದ್ದ ಆ ಗುಣ ದರ್ಶನ್‌ಗೂ ಇದೆ ; ಚಾಲೆಂಜಿಂಗ್ ಸ್ಟಾರ್ ಬಗ್ಗೆ ಹೇಳಿದ್ದೇನು ಸುಮಲತಾ..?
ಸುಮಲತಾ ಅಂಬರೀಶ್ ದರ್ಶನ್ ಅವರ ಪಾಲಿಗೆ ಮದರ್ ಇಂಡಿಯಾ. ಈ ಹಿಂದೆ ಹತ್ತು ಹಲವು ಬಾರಿ ಖುದ್ದು ಅಭಿಮಾನಿಗಳ ದಾಸ ಈ ಮಾತನ್ನ ಒಪ್ಪಿದ್ದು ಇದೆ. ಹೇಳಿದ್ದು ಇದೆ. ಇದು ನಿಮಗೆಲ್ಲ ಗೊತ್ತಿರುವುದೇ. ಆದರೆ ತಮ್ಮ ಮುದ್ದಿನ ಮಗ ದರ್ಶನ್ ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿ ಸುಮಲತಾ ಮಾತನಾಡಿದ್ದೇನು ? ಈ ವಿಚಾರ ನಿಮಗೆ ಗೊತ್ತಿರಲಿಕ್ಕಿಲ್ಲ. ಈ ಕಾರಣಕ್ಕೆ ಸುಮಲತಾ ಅಂಬರೀಶ್ ಅವರ ಭಾಷಣದ ಸಂಕ್ಷಿಪ್ತ ರೂಪವನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ
ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, ಮಂಡ್ಯದ ಮಣ್ಣಿನ ತಿಲಕ ಇಟ್ಟು ಅಂಬರೀಶ್‌ರನ್ನು ಬೀಳ್ಕೊಟ್ಟೆವು. ಸುಮಲತಾ ಕೂಡ ಈ ಮಣ್ಣನ್ನ ಬಿಡಲ್ಲ. ಮಂಡ್ಯವನ್ನ ಎಂದಿಗೂ ಬಿಡೋದಿಲ್ಲ ಎಂದು ಭಾವುಕರಾದರು. ನನ್ನ ಪ್ರೀತಿಯ ಹಿರಿಯ ಮಗ ದರ್ಶನ್, ನಿನ್ನೆಯಷ್ಟೇ ಹುಟ್ಟು ಆಚರಿಸಿಕೊಂಡಿದ್ದಾರೆ, ಇನ್ನೂ ನಿಮಗೆ ಗೊತ್ತು ಕಾಟೇರ ಪ್ರೀ ರಿಲೀಸ್ ಇವೆಂಟ್ ಮಂಡ್ಯದಲ್ಲಿ ನಡೆದಿತ್ತು ಎಂದ ಸುಮಲತಾ, ಈ ಸಿನೆಮಾ ದೊಡ್ಡ ಹಿಟ್ ಆಗುತ್ತೆ ಹಾಗೂ ಅದರ ಸಂಭ್ರಮವನ್ನೂ ಮಂಡ್ಯದಲ್ಲೇ ಮಾಡ್ತೀವಿ ಎಂದು ನಾನು ಅವತ್ತೇ ಹೇಳಿದ್ದೆ. ಅದ್ರಂತೆ ಇಂದು 'ಕಾಟೇರ' ಸಿನಿಮಾ ಈಗ ದೊಡ್ಡ ಹಿಟ್ ಆಗಿದೆ. 'ಕಾಟೇರ' ದರ್ಶನ್ ಅವರನ್ನು ಎಲ್ಲಗೋ ಕರೆದುಕೊಂಡು ಹೋಗಿ ಕೂರಿಸಿದೆ. ಅವರು ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದಾರೆ. ಅದು ಸಣ್ಣ ಸಾಧನೆಯಲ್ಲ ಎಂದು ಸುಮಲತಾ ಹೇಳಿದರು.

ಇನ್ನೂ ಇದೇ ಸಮಯದಲ್ಲಿ ಆ ದಿನಗಳನ್ನ ಮೆಲಕು ಹಾಕಿದ ಸುಮಲತಾ, 25 ವರ್ಷಗಳ ಹಿಂದೆ ದರ್ಶನ್ ಮೊದಲ ಸಿನಿಮಾ 'ಮೆಜೆಸ್ಟಿಕ್' ಮುಹೂರ್ತಕ್ಕೆ ನಾನು ಹಾಗೂ ಅಂಬರೀಶ್ ಒಟ್ಟಿಗೆ ಹೋಗಿದ್ದೆವು. ನಮ್ಮ ಬೆಂಗಳೂರಿನ ಮನೆಯ ಬಳಿಯ ದೇವಾಲಯದಲ್ಲಿ ಮುಹೂರ್ತ ನಡೆದಿತ್ತು. ದರ್ಶನ್ ಆಗಿನ್ನು 22-23 ವರ್ಷದ ಯುವಕ. ಈಗ ನೋಡಿದರೆ 25 ವರ್ಷ ಪೂರೈಸಿದ್ದಾನೆ. ಈಗಲೂ ನನಗೆ ಅವನು 25-27 ವರ್ಷದ ಯುವಕನಂತೆ ಕಾಣುತ್ತಾನೆ. ಅಮ್ಮನಿಗೆ ಮಕ್ಕಳು ಯಾವಾಗಲೂ ಚಿಕ್ಕವರೇ ಆಗಿರುತ್ತಾರೆ' ಎಂದರು ಸುಮಲತಾ.
ಮಿಕ್ಕಂತೆ ದರ್ಶನ್ ಬದುಕಿನಲ್ಲಿ ಸವಾಲು ಎದುರಿಸಿ ಬೆಳೆದ ವ್ಯಕ್ತಿ. ಶ್ರಮದಿಂದ ಬೆಳೆದು ಅಭಿಮಾನಿಗಳ ಪ್ರೀತಿಗಳಿಸಿದ್ದಾನೆ. ಸಾರ್ವಜನಿಕ ಜೀವನದಲ್ಲಿ ಇರುವವರು ಮಾದರಿಯಾಗ ಬೇಕು. ದರ್ಶನ್ ಕಷ್ಟಪಟ್ಟು ಬೆಳೆದ ರೀತಿ ನಿಮಗೆಲ್ಲರಿಗೂ ಸ್ಪೂರ್ತಿ ಆಗಬೇಕು. ಬರ್ತಡೇ ಆಚರಣೆ ಬದಲು ಬಡವರಿಗೆ ಸಹಾಯ ಮಾಡಲು ದರ್ಶನ್ ಕೋರಿದ್ದರು, ಅವರಿಗೆ ಅದನ್ನೆಲ್ಲ ಮಾಡಲಾಗದೆ ಹಾಗೆ ಮಾಡಿದ್ದಲ್ಲ, ನಿಮಗೂ ಆ ಅಭ್ಯಾಸ ಬರಲಿ ಎಂಬ ಕಾರಣಕ್ಕೆ ಮಾಡಿದ್ದು, ಮಕ್ಕಳ ಯಶಸ್ಸು ತಾಯಿಗೆ ಸಂತೋಷ. ಅಂಬರೀಶ್ ಹೋದ ಮೇಲೆ ನಮ್ಮ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಅಭಿಷೇಕ್‌ಗೆ ದರ್ಶನ್ ಗೈಡ್ ಮಾಡ್ತಾನೆ, ಅಭಿಷೇಕ್‌ಗೆ ದರ್ಶನ್ ದೊಡ್ಡ ಅಣ್ಣನಂತೆ ಇದ್ದಾನೆ. ನಾನು ಸಹ ಹೆಚ್ಚು ಹೊಗಳಿದರೆ ನಾಳೆ ಮನೆಗೆ ಬಂದು ಬೈತಾನೆ' ಎಂದು ನಕ್ಕರು ಸುಮಲತಾ.
ಇದೇ ಸಮಯದಲ್ಲಿ ನಡೆದು ಬಂದ ದಾರಿ ಯಾವತ್ತೂ ಮರೆಯಬಾರದು. ಅದು ದರ್ಶನ್‌ಗೆ ಇದೆ. ಆ ಕಾರಣಕ್ಕಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಅಭಿ ಅಥವಾ ಸಚ್ಚಿಗೆ ಟಿಕೆಟ್ ಕೇಳ್ತೀರಾ ಅಂದ್ರೆ. ನಾನು ಸಚ್ಚಿದಾನಂದಗೆ ಟಿಕೆಟ್ ಕೇಳ್ತೀನಿ. ಸಚ್ಚಿ ನನ್ನ ಪರ ಎಲೆಕ್ಷನ್ ಮಾಡಿದ್ದಾನೆ. ನನ್ನ ಪರ ನಿಂತವರನ್ನ, ನಾವು ನಡೆದು ಬಂದ ದಾರಿ ಯಾವತ್ತು ಮರೆಯಬಾರದು. ಆ ಗುಣ ದರ್ಶನ್‌ನಲ್ಲಿದೆ. ಎಲ್ಲರನ್ನು ಜೊತೆಗೂಡಿಸಿಕೊಂಡು ಬೆಳೆಸುವ ಗುಣ ದರ್ಶನ್‌ಗೆ ಇದೆ. ಅಂಬರೀಶ್ ಅವರಲ್ಲಿ ಬಿಟ್ಟರೆ ಆ ಗುಣ ಕಂಡದ್ದು ದರ್ಶನ್‌ನಲ್ಲಿ ಮಾತ್ರ ಎಂದ ಸುಮಲತಾ ನನ್ನ ಜೊತೆ ಅಂಬರೀಶ್ ಇದ್ದಾರೆ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. 5 ವರ್ಷ ನಿಮ್ಮ ಪ್ರೀತಿಗಳಿಸಿದ್ದೇನೆ ಎಂದು ಜನರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು


Click it and Unblock the Notifications











