twitter
    For Quick Alerts
    ALLOW NOTIFICATIONS  
    For Daily Alerts

    ಸಂಸತ್‌ನಲ್ಲಿ ಹಿಂದಿ ಹೇರಿಕೆ ಖಂಡಿಸಿದ ಸುಮಲತಾಗೆ ಭಾರಿ ಬೆಂಬಲ

    |

    ''ನಾವು ಕನ್ನಡಿಗರೂ ಭಾರತೀಯರೆ. ಹಿಂದಿನೂ ಇಷ್ಟ, ಆದರೆ ಕನ್ನಡದ ಮೇಲೆ ಪ್ರೀತಿ ಜಾಸ್ತಿ. ಯಾವುದೇ ಕಾರಣಕ್ಕೂ ನಮ್ಮ ಭಾಷೆಯನ್ನು ನಾವು ಬಿಟ್ಟುಕೊಡುವುದಿಲ್ಲ'' ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಿಂದಿ ಹೇರಿಕೆ ವಿರುದ್ಧ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ.

    ಸುಮಲತಾ ಅವರ ಭಾಷಣವನ್ನು ಕನ್ನಡಿಗರು ಸ್ವಾಗತಿಸಿದ್ದು, ಸಂಸತ್‌ನಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆ ಕರ್ನಾಟಕದಲ್ಲಿ ಭಾರಿ ವಿರೋಧವಿದೆ. ಇಂತಹದ್ರಲ್ಲಿ ಸಂಸತ್‌ನಲ್ಲಿ ಅದನ್ನು ವಿರೋಧಿಸಿದ ಸುಮಲತಾ ಅವರ ನಡೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ...

    ಸುಮಲತಾ ಹೇಳಿದ್ದೇನು?

    ಸುಮಲತಾ ಹೇಳಿದ್ದೇನು?

    'ನಾವು ಹಿಂದಿ ಭಾಷೆಯ ವಿರುದ್ಧವಲ್ಲ, ಆದ್ರೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇನೆ. ಕನ್ನಡ ಭಾಷೆಗೆ ಸಾವಿರ ವರ್ಷಗಳ ಇತಿಹಾಸವಿದೆ. ಕೇಂದ್ರ ಸರ್ಕಾರ ಸಹ ಶಾಸ್ತ್ರೀಯ ಭಾಷೆಯ ಮಾನ್ಯತೆ ನೀಡಿದೆ. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳಿಗೆ ಕನ್ನಡವೇ ಗೊತ್ತಿಲ್ಲ. ಇದರಿಂದ ಕನ್ನಡ ಮಾತ್ರ ಬಲ್ಲವರ ವ್ಯವಹಾರಕ್ಕೆ ಅಡಚಣೆಯಾಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯನ್ನು ಜನ ಸಾಮಾನ್ಯನು ಪಡೆಯಲು ಸಮಸ್ಯೆಯಾಗುತ್ತದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಹಿಂದಿ ಹೇರಿಕೆಗೆ ಖಂಡನೆ: 'ಹುಟ್ಟಿದಾಗಿನಿಂದ ಗೊತ್ತಿರುವುದು ಕನ್ನಡ ಒಂದೇ' ಎಂದ ವಿಜಯ್ಹಿಂದಿ ಹೇರಿಕೆಗೆ ಖಂಡನೆ: 'ಹುಟ್ಟಿದಾಗಿನಿಂದ ಗೊತ್ತಿರುವುದು ಕನ್ನಡ ಒಂದೇ' ಎಂದ ವಿಜಯ್

    ಇದನ್ನು ಒಪ್ಪಲು ಸಾಧ್ಯವಿಲ್ಲ

    ಇದನ್ನು ಒಪ್ಪಲು ಸಾಧ್ಯವಿಲ್ಲ

    ''ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯೇ ಈ ಯೋಜನೆಯ ಪ್ರಮುಖ ಧೋರಣೆಯಂತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ'' ಎಂದು ಸುಮಲತಾ ಹೇಳಿದ್ದಾರೆ. ''ವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವವನ್ನು ಕೇಂದ್ರ ಸರ್ಕಾರ ಅನುಸರಿಸಬೇಕಿದೆ. ಹಿಂದಿಯಂತೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು'' ಎಂದು ಸುಮಲತಾ ಶೂನ್ಯ ವೇಳೆ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.

    ಅನು ಪ್ರಭಾಕರ್ ಸ್ವಾಗತ

    ಅನು ಪ್ರಭಾಕರ್ ಸ್ವಾಗತ

    ''ನಿಮ್ಮ ಧ್ವನಿ ಕನ್ನಡವನ್ನ ಉಳಿಸೋದ್ರಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸುತ್ತೆ'' ಎಂದು ನಟಿ ಅನುಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಸತ್‌ನಲ್ಲಿ ಸುಮಲತಾ ಮಾತನಾಡಿರುವ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಅನು ಪ್ರಭಾಕರ್, ಮಂಡ್ಯ ಸಂಸದೆಯ ಅಭಿಪ್ರಾವನ್ನು ಸ್ವಾಗತಿಸಿದ್ದಾರೆ.

    'ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ': ಹಿಂದಿ ಹೇರಿಕೆ ಖಂಡಿಸಿದ ಡಿ-ಬಾಸ್'ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ': ಹಿಂದಿ ಹೇರಿಕೆ ಖಂಡಿಸಿದ ಡಿ-ಬಾಸ್

    Recommended Video

    ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
    ಇತರೆ ಸಂಸದರು ಏನು ಮಾಡುತ್ತಿದ್ದಾರೆ?

    ಇತರೆ ಸಂಸದರು ಏನು ಮಾಡುತ್ತಿದ್ದಾರೆ?

    ಸುಮಲತಾ ಅವರ ಪ್ರತಿಭಟನೆಗೆ ಕರ್ನಾಟಕದ ಜನ ಬೆಂಬಲ ಸೂಚಿಸಿದ್ದಾರೆ. ನಿಮ್ಮ ಧೈರ್ಯಕ್ಕೆ, ನಿಮ್ಮ ಮಾತಿಗೆ ನಾವು ಜೊತೆಯಾಗಿದ್ದೀವಿ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದ್ರೆ, ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು ಏನು ಮಾಡುತ್ತಿದ್ದಾರೆ, ಅವರಿಗೆ ಇದಕ್ಕು ಕೇಳುವ ಧೈರ್ಯ ಇಲ್ಲವೇ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

    English summary
    Mandya MP and Actress Sumalatha Ambarish in Parliament says, 'We love and respect Hindi but much more than that we love our mother tongue.'
    Sunday, September 20, 2020, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X