ಅಜ್ಜಿ ಕಾಲಿಗೆ ಬಿದ್ದರೇನು? ಕರಗಲಿಲ್ಲ ಗತ್ತು: ಸಂಸದೆ ಸುಮಲತಾ ವಿಡಿಯೋ ಟ್ರೋಲ್!
ಸಿನಿಮಾ ಮತ್ತು ರಾಜಕೀಯ ಸದಾ ಒಂದಕ್ಕೊಂದು ಅಂಟಿಕೊಂಡಿರುತ್ತೆ. ಸಿನಿಮಾ ಮಂದಿ ರಾಜಕೀಯಕ್ಕೆ ಎಂಟ್ರಿ ಕೊಡುವುದು, ರಾಜಕೀಯದ ಮಂದಿ ಸಿನಿಮಾಗಳಲ್ಲಿ ಅಭಿನಯಿಸುವುದು ಸಹಜ. ಹೀಗೆ ಸಿನಿಮಾದಿಂದ ರಾಜಕೀಯಕ್ಕೆ ಬಂದು ಯಶಸ್ವಿ ಕಂಡವರಲ್ಲಿ ನಟಿ ಸುಮಲತಾ ಕೂಡ ಒಬ್ಬರು. ಈಗ ಸಂಸದೆ ಸ್ಥಾನದಲ್ಲಿ ಮಂಡ್ಯದ ಪ್ರತಿನಿಧಿಯಾಗಿದ್ದಾರೆ.
ಇತ್ತೀಚೆಗೆ ಸುಮಲತಾ ಅವರು ಸಿನಿಮಾ ವಿಚಾರಗಳಿಗಿಂತಲೂ, ರಾಜಕೀಯದ ವಿಚಾರಗಳಲ್ಲಿ ಹೆಚ್ಚು ಸುದ್ದಿ ಆಗುತ್ತಾರೆ. ರಾಜಕೀಯಕ್ಕೆ ಬಂದ ಬಳಿಕ ಅವರು ಅಲ್ಲೇ ಹೆಚ್ಚು ಬ್ಯುಸಿಯಾಗಿ ಇದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ.
ಸುಮಲತಾ ಅವರ ಬಗ್ಗೆ ಈಗ ಮಾತನಾಡಲು ಕಾರಣ, ಅವರ ಹೊಸದೊಂದು ವಿಡಿಯೋ. ಈ ವಿಡಿಯೋ ಮೂಲಕ ಸುಮಲತಾ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾ ಇದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ.
ಅಜ್ಜಿ ಕಾಲಿಗೆ ಬಿದ್ದರು ಕಡೆಗಣಿಸಿದ ಸಂಸದೆ ಸುಮಲತಾ!
ಸಂಸದೆ ಸಮಲತಾ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ. ಸಂಸದೆ ಪಟ್ಟದಲ್ಲಿ ಇರುವ ಸುಮಲತಾ ಅವರ ಮುಂದೆ ಜನ ಸಾಕಷ್ಟು ಬೇಡಿಕೆಗಳನ್ನು ಇಡುತ್ತಾರೆ. ಜೊತೆಗೆ ಅವರು ಎಲ್ಲಾದರೂ ಸಿಕ್ಕರೆ ಸಾಕು ತಮ್ಮ ಕಷ್ಟ, ಸಂಕಷ್ಟಗಳನ್ನು ಅವರ ಮುಂದೆ ತೆರೆದಿಡುತ್ತಾರೆ. ಹಾಗೆ ಮಂಡ್ಯದಲ್ಲಿ ಕಾಣಿಸಿಕೊಂಡ ಸುಮಲತಾ ಅವರ ಭೇಟಿಗೆ ಹಲವು ಜನ ಮುತ್ತಿಕೊಂಡಿದ್ದಾರೆ. ಅವರಲ್ಲಿ ಅಜ್ಜಿ ಒಬ್ಬರು ಸುಮಲತಾ ಅವರ ಕಾಲಿಗೆ ಬಿದ್ದಿದ್ದಾರೆ. ಆಗ ಸುಮಲತಾ ಅವರು ಸುಮ್ಮನ್ನೇ ನಿಂತು ಬಿಟ್ಟಿದ್ದಾರೆ.

ಸೌಜನ್ಯಕ್ಕೂ ಅಜ್ಜಿಯನ್ನು ಮುಟ್ಟಲಿಲ್ಲ ಸುಮಲತಾ!
ಈ ವಿಡಿಯೋದಲ್ಲಿ ಅಜ್ಜಿ ಒಬ್ಬರು, ಸುಮಲತಾ ಅವರ ಕಾಲಿಗೆ ನಮಸ್ಕರಿಸಿ ತಮ್ಮ ಸಂಕಟಗಳನ್ನು ಹೇಳುತ್ತಾ ಹೋಗುತ್ತಾರೆ. ಆದರೆ ಅವರ ಮತು ಕೇಳುವುದಿರಲಿ ಅಜ್ಜಿ ಕಾಲಿಗೆ ಬಿದ್ದಾಗ ಸಂಸದೆ ಸುಮಲತಾ ಅವರು ಬೇಡ ಎಂದು ಹೇಳಲಿಲ್ಲ, ಕಾಲಿಗೆ ಬಿದ್ದಾಗ ಅವರನ್ನು ಮುಟ್ಟಿ ನಮಸ್ಕರಿಸಲಿಲ್ಲ, ಸೌಜನ್ಯಕ್ಕೂ ಅಜ್ಜಿಯನ್ನು ಮುಟ್ಟಲಿಲ್ಲ. ಇದೀಗ ಈ ವಿಡಿಯೋ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಟ್ರೋಲ್ ಆಗುತ್ತಿರುವ ಸಂಸದೆ ಸುಮಲತಾ!
ಸಂಸದೆ ಆದ ಅವರಿಗೆ ಸಾಕಷ್ಟು ತಲೆ ಬಿಸಿ ಇರುತ್ತೆ, ಕೆಲಸಗಳು, ಜವಾಬ್ದಾರಿಗಳು, ಒತ್ತಡದ ಕಾರಣ ಹೀಗೆ ಸುಮ್ಮನಿದ್ದರೇನೋ ಗೊತ್ತಿಲ್ಲ. ಆದರೆ ಅದೇನೆ ಇದ್ದರು ಅಜ್ಜಿ ಕಾಲಿಗೆ ಬಿದ್ದಾಗ ಅವರನ್ನು ಮುಟ್ಟಿ ನಮಸ್ಕರಿಸುವ ಸೌಜನ್ಯ ಇಲ್ಲ ಎಂದು ಸುಮಲತಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗಿ ವೈರಲ್ ಆಗುತ್ತಾ ಇದೆ.

ಸ್ವಾಭಿಮಾನದ ಭಿಕ್ಷೆ ಕೇಳಿದ್ದ ಸಂಸದೆ ಸುಮಲತಾ!
ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸುಮಲತಾ ಅವರ ಹಳೆ ಹೇಳಿಕೆಗಳನ್ನು, ಸಂಸದೆ ಆಗುವ ಮುನ್ನ ಅವರು ನಡೆದುಕೊಂಡ ರೀತಿಯ ಬಗ್ಗೆ ಜನ ಮಾತನಾಡುತ್ತಾ ಇದ್ದಾರೆ. ಗೆಲ್ಲುವುದಕ್ಕೂ ಮುನ್ನ ಸೆರಗು ಒಡ್ಡಿ ಸ್ವಾಭಿಮಾನದ ಭಿಕ್ಷೆ ಕೇಳಿದ್ದರು. ಈಗ ಇವರು ಬದಲಾಗಿದ್ದಾರೆ ಎಂದೆಲ್ಲಾ ಕಮೆಂಟ್‌ಗಳು ಬರ್ತಿವೆ.


Click it and Unblock the Notifications











