'ರಜನಿ-ಅಂಬಿ ಸ್ನೇಹದಲ್ಲಿ ನನ್ನದೂ ಚಿಕ್ಕ ಪಾಲಿದೆ': ತಲೈವಾಗೆ ಶುಭಕೋರಿದ ಸುಮಲತಾ

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸ್ನೇಹಜೀವಿ ಹಾಗು ನಿರ್ಮಾಪಕರ ನಟ ಎಂದು ಗುರುತಿಸಿಕೊಂಡಿರುವ ರಜನಿ, ಭಾಷೆಯ ಗಡಿ ಮೀರಿ ಬೆಳೆದಿರುವ ಸೂಪರ್ ಸ್ಟಾರ್.

ರಜನಿ ಬರ್ತಡೇಗೆ ಮಂಡ್ಯ ಸಂಸದೆ ಹಾಗು ನಟಿ ಸುಮಲತಾ ಅಂಬರೀಶ್ ವಿಶ್ ಮಾಡಿದ್ದಾರೆ. ತಲೈವಾಗೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿರುವ ಸುಮಲತಾ, 'ರಜನಿ ಹಾಗೂ ಅಂಬರೀಶ್ ನಡುವಿನ ವಿಶೇಷ ಸ್ನೇಹದಲ್ಲಿ ನನ್ನದೂ ಒಂದು ಚಿಕ್ಕ ಪಾಲಿದೆ' ಎಂದಿದ್ದಾರೆ.

''ಸರಳ ವ್ಯಕ್ತಿತ್ವದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರ ಹಾಗೂ ಅಂಬರೀಶ್ ನಡುವಿನ ವಿಶೇಷ ಸ್ನೇಹದಲ್ಲಿ ನನ್ನದೂ ಒಂದು ಚಿಕ್ಕ ಪಾಲಿದೆ. ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ, ಆಯಸ್ಸು ಮತ್ತು ಸಂತೋಷವನ್ನು ಭಗವಂತ ನೀಡಲಿ ಎಂದು ನಾನು, ಅಭಿ ಆಶಿಸುತ್ತೇವೆ'' ಎಂದು ಟ್ವಿಟ್ಟರ್ ಮೂಲಕ ಸುಮಲತಾ ಅಂಬರೀಶ್ ಆಶಿಸಿದ್ದಾರೆ.

sumalatha-ambarish-wishes-rajinikanth-on-his-birthday

ಅಂದ್ಹಾಗೆ, ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ರಜನಿಕಾಂತ್ ಬಹಳ ಆತ್ಮೀಯ ಸ್ನೇಹಿತರು. ವಿಷ್ಣು-ಅಂಬಿ-ರಜನಿ ಒಂದೇ ಸಮಕಾಲಿನಲ್ಲಿ ನಟನೆ ಆರಂಭಿಸಿದವರು. ಆಗಿನಿಂದಲೂ ಒಳ್ಳೆಯ ಬಾಂಧವ್ಯ ಉಳಿಸಿಕೊಂಡಿದ್ದಾರೆ. ರಜನಿ ತಮಿಳು ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆದರೂ ಸ್ನೇಹಿತರ ಪಾಲಿಗೆ ಶಿವಾಜಿ ಆಗಿಯೇ ಜೀವಿಸುತ್ತಿದ್ದಾರೆ.

ಬೆಂಗಳೂರಿಗೆ ಬಂದಾಗೆಲ್ಲ ಅಂಬರೀಶ್ ಅವರನ್ನು ಭೇಟಿ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ಅಂಬಿ ಉತ್ಸವದಲ್ಲಿ ರಜನಿಕಾಂತ್, ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಂಬಿ ಅಗಲಿದ ಸಮಯದಲ್ಲೂ ಅತಿಮ ದರ್ಶನ ಪಡೆದುಕೊಂಡಿದ್ದರು.

ಇನ್ನು ರಜನಿಕಾಂತ್ ರಾಜಕೀಯ ಪ್ರವೇಶ ಖಚಿತಪಡಿಸಿದ್ದಾರೆ. ಡಿಸೆಂಬರ್ 31 ರಂದು ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಘೋಷಣೆ ಮಾಡಿಸಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಜನಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ.

More from Filmibeat

English summary
Late actor Ambarish wife Sumalatha Wishes Rajinikanth on his 70th Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X