ಈ ಫೋಟೋ ನೋಡಿ ಸುಮಲತಾ ಮಾಡಿದ ಕಾಮೆಂಟ್ ಏನು?

Recommended Video

ದರ್ಶನ್ ಯಶ್ ಅಭಿಷೇಕ್ ಅಂಬರೀಷ್ ಫೋಟೋ ನೋಡಿ ಸುಮಲತಾ ಅಂಬರೀಶ್ ಹೇಳಿದ್ದೇನು?

ಬುಧವಾರ ಮಂಡ್ಯದಲ್ಲಿ ಸ್ವಾಭಿಮಾನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಸುಮಲತಾ ಮಂಡ್ಯ ಜನರಿಗೆ ಕೃತಜ್ಞತೆ ಹೇಳುವ ಸಲುವಾಗಿ ಅಂಬಿ ಹುಟ್ಟುಹಬ್ಬದ ದಿನವೇ ವೇದಿಕೆ ನಿರ್ಮಿಸಿದ್ದರು.

ಸುಮಲತಾ ಗೆಲುವಿಗಾಗಿ ಶ್ರಮಿಸಿದ್ದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಜೋಡೆತ್ತು ಖ್ಯಾತಿಯ ದರ್ಶನ್ ಮತ್ತು ಯಶ್ ಹಾಗೂ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಪ್ರಮುಖ ಆಕರ್ಷಣೆಯಾಗಿದ್ದರು.

ಕಾರ್ಯಕ್ರಮದುದ್ದಕ್ಕೂ ಅಂಬಿ ಪುತ್ರನನ್ನು ಬಿಟ್ಟುಕೊಡದ ದರ್ಶನ್ ಮತ್ತು ಯಶ್, ಅಮರ್ ಸಿನಿಮಾ ರಿಲೀಸ್ ಆಗುತ್ತಿದೆ, ಎಲ್ಲರೂ ಆಶೀರ್ವಾದ ಮಾಡಿ ಅಂಬರೀಶ್ ಅವರಂತೆ ಬೆಳಸಿ ಎಂದು ಕೇಳಿಕೊಂಡರು.

Sumalatha caption for Darshan and abhishek

ಇದಕ್ಕೂ ಮುಂಚೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದಾಗ ಅಭಿಷೇಕ್ ಅವರನ್ನ ದರ್ಶನ್ ಅಪ್ಪಿಕೊಂಡಿದ್ದರು. ಈ ಅದ್ಭುತ ಕ್ಷಣ ಫೋಟೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆದುಕೊಳ್ಳುತ್ತಿದೆ. ಇದೇ ಫೋಟೋವನ್ನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಸುಮಲತಾ ''ಈ ಪ್ರೀತಿ ಯಾವಾಗಲೂ ಇರಲಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.

ಅದೇ ರೀತಿ ಇನ್ನೊಂದು ಫೋಟೋವನ್ನ ಕೂಡ ಸುಮಲತಾ ಶೇರ್ ಮಾಡಿದ್ದಾರೆ. ಜೋಡೆತ್ತುಗಳ ಮಧ್ಯೆ ಯಂಗ್ ರೆಬಲ್ ಸ್ಟಾರ್ ಅಭಿ ಕುಳಿತುಕೊಂಡಿದ್ದು, ಪರಸ್ಪರ ಮೂವರು ಮಾತನಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದನ್ನ ಶೇರ್ ಮಾಡಿರುವ ಸುಮಲತಾ, ''ಜೋಡೆತ್ತುಗಳ ಮಧ್ಯೆ ಕಿರಿಯ ಸಹೋದರ'' ಎಂದು ಅಡಿಬರಹ ಹಾಕಿದ್ದಾರೆ.

Sumalatha caption for Darshan and abhishek

ಈ ಎರಡು ಫೋಟೋಗಳು ಮಾತ್ರವಲ್ಲ, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್ ಮತ್ತು ದರ್ಶನ್ ಅವರ ಆತ್ಮೀಯತೆ ಹಾಗೂ ಅಭಿಷೇಕ್ ಮತ್ತು ಯಶ್ ಅವರ ವಾತ್ಸಲ್ಯ ಎಲ್ಲರ ಗಮನ ಸೆಳೆದಿದೆ.

More from Filmibeat

English summary
Mandya mp sumalatha shared some beautiful pictures of darshan, yash and abhishek and she loves this pics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X