For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಗೆ ಏನಾಗಿಲ್ಲ.! ಸುಮ್ನೆ ಗಾಳಿ ಸುದ್ದಿ ಹಬ್ಬಿಸ್ಬೇಡಿ..!

  By Harshitha
  |

  ಇಂದು ಮಧ್ಯಾಹ್ನದಿಂದ ಒಂದೇ ಗುಲ್ಲು. ರೆಬೆಲ್ ಸ್ಟಾರ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಅಂಬರೀಶ್ ಅವರನ್ನ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಂತ.

  ಕಾಡ್ಗಿಚ್ಚಿನಂತೆ ಹಬ್ಬಿದ ಈ ಸುದ್ದಿಯನ್ನ ಕೇಳಿ ಅಂಬರೀಶ್ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಆದ್ರೆ, ಯಾರೂ ಗಾಬರಿ ಪಡುವ ಅವಶ್ಯಕತೆ ಇಲ್ಲ. ಮಂಡ್ಯದ ಗಂಡು ಅಂಬರೀಶ್ ಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ.

  ಅಂಬರೀಶ್ ಪತ್ನಿ ಸುಮಲತಾ ಅವರಿಗೂ ಈ ಗಾಳಿ ಸುದ್ದಿ ಮುಟ್ಟಿದ ಪರಿಣಾಮ, ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. [ವಿಕ್ರಂ ಆಸ್ಪತ್ರೆಯಿಂದ ಅಂಬರೀಶ್ ಡಿಸ್ಚಾರ್ಜ್.!]

  ''ಇಂದು ನಮ್ಮ ಮನೆಯಲ್ಲಿ ನನ್ನ ಸಹೋದರಿಯ ಮೊಮ್ಮಗುವಿನೊಂದಿಗೆ ಅಂಬರೀಶ್ ಆಟವಾಡುತ್ತಿದ್ದಾರೆ. ಸುಮ್ಮನೆ ಗಾಳಿ ಸುದ್ದಿ ಹಬ್ಬಿಸುವುದನ್ನ ನಿಲ್ಲಿಸಿ. ಅಂಬರೀಶ್ 100% ಆರೋಗ್ಯವಾಗಿದ್ದಾರೆ'' ಅಂತ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

  ಜೊತೆಗೆ ಮನೆಯಲ್ಲಿ ಅಂಬರೀಶ್ ಕಾಲ ಕಳೆಯುತ್ತಿರುವ ಫೋಟೋ ಕೂಡ ಹಾಕಿದ್ದಾರೆ. ಇಷ್ಟು ಸಾಕಲ್ವಾ, ಅಂಬರೀಶ್ ಆರೋಗ್ಯದ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು ಸುಳ್ಳು ಅನ್ನೋಕೆ.

  English summary
  Kannada Actress, Wife of Kannada Actor Ambareesh, Sumalatha has taken her twitter account to clarify about the rumors on Ambareesh's Health. Sumalatha has clearly stated that Ambareesh is fit and fine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X