ಹೊಸ ಫೇಸ್ ಬುಕ್ ಖಾತೆ ತೆರೆದ ಸುಮಲತಾ, ಮೊದಲ ಪೋಸ್ಟ್ ಏನು?

Recommended Video

ಹೊಸ ಫೇಸ್ ಬುಕ್ ಖಾತೆ ತೆರೆದ ನಟಿ ಸುಮಲತಾ | FILMIBEAT KANNADA

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ತಯಾರಿ ನಡೆಸುತ್ತಿರುವ ನಟಿ ಸುಮಲತಾ ಈಗಾಗಲೇ ಪ್ರಚಾರವನ್ನ ಜೋರಾಗಿಯೇ ಮಾಡ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಂಡ್ಯದಲ್ಲೇ ಬೀಡುಬಿಟ್ಟಿರುವ ಸುಮಲತಾ ಮಂಡ್ಯ ಜನರ ಮನಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಈ ಮಧ್ಯೆ ಚುನಾವಣೆ ದಿನಾಂಕವೋ ಘೋಷಣೆಯಾಗಿದ್ದು, ಈಗ ಸುಮಲತಾ ಅವರ ಚುನಾವಣೆ ಪ್ರಕ್ರಿಯೆ ಮತ್ತಷ್ಟು ಚುರುಕಾಗಿದೆ. ಸದ್ಯ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಖಾತೆ ಹೊಂದಿರುವ ಸುಮಲತಾ, ಜನರ ಜೊತೆ ಸಂಪರ್ಕ ಸಾಧಿಸಲು ಮತ್ತು ಅವರ ಸಲಹೆ, ಕಷ್ಟಗಳ ಬಗ್ಗೆ ಸ್ಪಂದಿಸಲು ಹೊಸ ಖಾತೆಯನ್ನ ತೆರೆದಿದ್ದಾರೆ.

ಸುಮಲತಾ ಅಮರ್ ನಾಥ್ ಎಂಬ ಹೆಸರಿನಲ್ಲಿ ಖಾಸಗಿ ಫೇಸ್ ಬುಕ್ ಖಾತೆ ಹೊಂದಿರುವ ಸುಮಲತಾ, ಈಗ ಸುಮಲತಾ ಅಂಬರೀಶ್ ಎಂದು ಮತ್ತೊಂದು ಪೇಜ್ ತೆರೆದಿದ್ದಾರೆ. ಈ ಖಾತೆಯಲ್ಲಿ ಎಲ್ಲರಿಗೂ ನಾನು ಸಂಪರ್ಕಕ್ಕೆ ಸಿಗುತ್ತೇನೆ ಎಂದು ತಿಳಿಸಿದ್ದಾರೆ.

Sumalatha creates new account in facebook

''ಆತ್ಮೀಯರೇ ನಮಸ್ಕಾರ, ನಾನು ಮಂಡ್ಯದ ಮನೆಮಗಳು ಸುಮಲತಾ ಅಂಬರೀಶ್, ಸಾಮಾಜಿಕ ಜಾಲತಾಣದಲ್ಲೂ ಸಹ Sumalatha Ambareesh Official Page, ತಮ್ಮೆಲ್ಲರ ಸಂಪರ್ಕದಲ್ಲಿ ನಾನಿರುತ್ತೇನೆ, ತಮ್ಮ ಸಲಹೆ ಮಾರ್ಗದರ್ಶನ ಸಹಕಾರ ಹೀಗೆ ನಿರಂತರವಾಗಿರಲಿ..'' ಎಂದು ಮೊದಲ ಪೋಸ್ಟ್ ಮಾಡಿದ್ದಾರೆ.

ಈಗಾಗಲೇ 3 ಸಾವಿರಕ್ಕೂ ಅಧಿಕ ಜನರು ಸುಮಲತಾ ಅವರ ಹೊಸ ಖಾತೆಯನ್ನ ಫಾಲೋ ಮಾಡ್ತಿದ್ದಾರೆ. ಜೊತೆಗೆ ನೀವು ಮಂಡ್ಯದಲ್ಲೇ ಸ್ಪರ್ಧೆ ಮಾಡಿ ಗೆಲುವು ಖಂಡಿತಾ ಎಂದು ಧೈರ್ಯ ತುಂಬುತ್ತಿದ್ದಾರೆ. ಇದು ಸಹಜವಾಗಿ ಸುಮಲತಾ ಅವರಿಗೆ ಮಾನಸಿಕ ಧೈರ್ಯ ತುಂಬುತ್ತಿದೆ.

More from Filmibeat

English summary
Sumalatha ambarish opened new facebook account in social media. she is contesting lok sabha election from mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X