For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಯಶ್ ಜೊತೆ ಸುಮಲತಾ ಸುದ್ದಿಗೋಷ್ಠಿ

  |

  ಮಂಡ್ಯ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನಟಿ ಸುಮಲತಾ ಅಂಬರೀಶ್ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ತಮ್ಮ ರಾಜಕೀಯ ನಿರ್ಧಾರವನ್ನ ಘೋಷಿಸಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೊತೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್ ''ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ'' ಎಂದು ಘೋಷಿಸಿದ್ದಾರೆ.

  ದರ್ಶನ್ ನನ್ನ ದೊಡ್ಡ ಮಗ, ಯಶ್ ಮನೆ ಮಗ: ಸುಮಲತಾ

  ಇಂದು ಅಧಿಕೃತವಾಗಿ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ ಸುಮಲತಾ ಅಂಬರೀಶ್ ಅವರು, ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸುಮಲತಾ ಅವರಿಗೆ ಅಂಬರೀಶ್ ಅಭಿಮಾನಿಗಳು ಮತ್ತು ಚಿತ್ರರಂಗದವರು ಸಾಥ್ ನೀಡಲಿದ್ದಾರೆ.

  ''ನನ್ನ ಜೊತೆ ಅಂಬರೀಶ್ ಅಭಿಮಾನಿಗಳಿದ್ದಾರೆ, ನನ್ನ ಹಿತೈಷಿಗಳಿದ್ದಾರೆ ಎಂಬ ಆತ್ಮವಿಶ್ವಾಸದಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ'' ಎಂದು ಘೋಷಿಸಿದ್ದಾರೆ. ಸುಮಲತಾ, ಯಶ್, ದರ್ಶನ್ ಜೊತೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಉಪಸ್ಥಿತರಿದ್ದಾರೆ.

  English summary
  Kannada actress sumalatha ambarish, darshan, yash, doddanna, rockline venkatesh organized the press meet in banglore regarding about mandya lok sabha election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X