ಅಂಬಿ ಅಭಿಮಾನಿಗಳ ಬಲದೊಂದಿಗೆ ನಾಮಪತ್ರ ಸಲ್ಲಿಸಿದ ಸುಮಲತಾ
Recommended Video

ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ ಸಲ್ಲಿಕೆ
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವ ಅಂಬರೀಶ್ ಪತ್ನಿ ನಟಿ ಸುಮಲತಾ ಅಂಬರೀಶ್, ಇಂದು ಮಂಡ್ಯದ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮಂಡ್ಯದ ಕೆಲವು 'ಅಹಿಂದ' ನಾಯಕರು ಹಾಗೂ ನೂರಾರು ಅಂಬರೀಶ್ ಅಭಿಮಾನಿಗಳ ಜೊತೆ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ, ಉಮೇದುವಾರಿಕೆ ಸಲ್ಲಿಸಿದರು.

ಅದಕ್ಕೂ ಮುಂಚೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸುಮಲತಾ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು. ನಂತರ ಅಲ್ಲಿಂದ ನೇರವಾಗಿ ಮಂಡ್ಯದ ಡಿಸಿ ಕಚೇರಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಇದಾದ ಬಳಿಕ ಮಂಡ್ಯದ ಸಿಲ್ವರ್ ಜ್ಯೂಬ್ಲಿ ಪಾರ್ಕ್ ನಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸಾವಿರಾರು ಅಭಿಮಾನಿಗಳ ಜೊತೆ ರೋಡ್ ಶೋ ಮೂಲಕ ವೇದಿಕೆಗೆ ಆಗಮಿಸಲಿದ್ದಾರೆ. ನಟ ದರ್ಶನ್, ಯಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
More from Filmibeat
English summary
Ambarish wife Sumalatha has filed nomination for mandya lok sabha election today at Dc Office in Mandya.


Click it and Unblock the Notifications











