ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ನೀಡಿದ ಒಲವಿನ ಉಡುಗೊರೆ

ಮಂಡ್ಯದಲ್ಲಿ ನಿಖಿಲ್ ಕುಮಾರ್ ವಿರುದ್ಧ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸುಮಾರು ಲಕ್ಷಗಳ ಅಂತರದಲ್ಲಿ ಗೆಲುವು ಸಾಧಿಸಿದ ಸುಮಲತಾ ಸಂತಸಕ್ಕೆ ಪಾರವೆ ಇಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಏಕಾಂಗಿ ಹೋರಾಟ ಮಾಡಿ ಬರ್ಜರಿ ಗೆಲುವು ಸಾಧಿಸಿದ ಸಮಲತಾ ಅವರಿಗೆ ಈ ತಿಂಗಳು ತುಂಬಾನೆ ವಿಶೇಷ.

ಭಾರಿ ಕತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಸುಮಲತಾ ಮೊದಲ ಗೆಲುವು ಪಡೆದಿದ್ದಾರೆ. ಇದರ ಬೆನ್ನಲ್ಲೆ ಸುಮಲತಾ ಅಭಿನಯದ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.

ಇನ್ನು ವಿಶೇಷವಾಗಿ ಅಂಬರೀಶ್ ಹುಟ್ಟುಹುಟ್ಟ ಕೂಡ ಹತ್ತಿರ ಬರುತ್ತಿದೆ. ಜೊತೆಗೆ ಮಗನ ಮೊದಲ ಸಿನಿಮಾ ಇದೇ ತಿಂಗಳಲ್ಲಿ ತೆರೆಗೆ ಬರುತ್ತಿದೆ. ತಿಂಗಳ ಕೊನೆಯ ವಾರದಲ್ಲಿ ಒಂದರ ಹಿಂದೊಂದು ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಸುಮಲತಾ ಅವರಿಗೆ ಮೊದಲ ಗೆಲುವು ಸಿಕ್ಕಾಗಿದೆ. ಈ ರೋಚಕ ಗೆಲವು ಅಂಬಿ ಹುಟ್ಟುಹಬ್ಬದ ಉಡುಗೊರೆಯಾಗಲಿದೆ.ಮುಂದೆ ಓದಿ..

ಒಲವಿನ ಉಡುಗೊರೆ ನೀಡಿದ ಸುಮಲತಾ

ಒಲವಿನ ಉಡುಗೊರೆ ನೀಡಿದ ಸುಮಲತಾ

ಸುಮಲತಾ ಈ ರೀತಿಯ ಉಡುಗೊರೆಯನ್ನು ನೀಡುತ್ತಾರೆ ಎಂದು ಅಂಬರೀಶ್ ಎಂದು ಅಂದುಕೊಂಡಿರಲ್ಲಿಲ್ಲ ಅನಿಸುತ್ತೆ. ಅಂತಹ ಗಿಫ್ಟ್ ಅನ್ನು ಈ ಬಾರಿಯ ಹುಟ್ಟುಹಬ್ಬಕ್ಕೆ ನೀಡುತ್ತಿದ್ದಾರೆ ಸುಮಲತಾ. ಇದೇ ತಿಂಗಳು 29 ಅಂಬರೀಶ್ ಹುಟ್ಟುಹಬ್ಬ. ಅಂಬಿ ಇಲ್ಲದ ಮೊದಲ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಪತ್ನಿ ಸುಮಲತಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಪೆಡೆಯುವ ಮೂಲಕ ಅಂಬಿಗೆ ಒಲವಿನ ಉಡುಗೊರೆಯಾಗಿ ನೀಡುತ್ತಿದ್ದಾರೆ.

ಬರ್ತಿದೆ ಡಾಟರ್ ಆಫ್ ಪಾರ್ವತಮ್ಮ

ಬರ್ತಿದೆ ಡಾಟರ್ ಆಫ್ ಪಾರ್ವತಮ್ಮ

ಮೊದಲ ಗೆಲುವು ಸಾಧಿಸಿರುವ ಸುಮಲತಾ ಅಭಿನಯದ ಮೊದಲ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನಾಳೆ(ಮೇ-24) 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ನಟಿ ಹರಿಪ್ರಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾಯಿಯ ಪಾತ್ರದಲ್ಲಿ ಸುಮಲತಾ ಮಿಂಚಿದ್ದಾರೆ. ಸಂಸದೆಯಾದ ನಂತರ ಸುಮಲತಾ ಮೊದಲ ಭಾರಿಗೆ ತೆರೆಮೇಲೆ ಮಿಂಚುತ್ತಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳು

ತಿಂಗಳ ಕೊನೆಯಲ್ಲಿ ಮಗನ ಸಿನಿಮಾ

ತಿಂಗಳ ಕೊನೆಯಲ್ಲಿ ಮಗನ ಸಿನಿಮಾ

ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾ ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಚಿತ್ರಾಭಿಮಾನಿಗಳ ಗಮನ ಸಳೆದಿರುವ 'ಅಮರ್' ಸಿನಿಮಾ ಇದೇ ತಿಂಗಳು 31ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಮಗನ ಮೊದಲ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವ ಭಯ ಇರುವುದು ಸಹಜ. ಆದ್ರೂ ಮೊದಲ ರಾಜಕೀಯ ಗೆಲುವು ಪಡೆದಿರುವ ಸಂತಸದಲ್ಲಿ ಅಂಬಿ ಕುಟುಂಬವಿದೆ.

ಅಂಬಿ ಸಮಾಧಿಗೆ ಭೇಟಿ

ಅಂಬಿ ಸಮಾಧಿಗೆ ಭೇಟಿ

ಭರ್ಜರಿ ಗೆಲುವು ಪಡೆಯುತ್ತಿದ್ದಂತೆ ಸುಮಲತಾ ಕಂಠೀರವ ಸ್ಟುಡಿಯೋದಲ್ಲಿರುವ ರೆಬೆಲ್ ಸ್ಟಾರ್ ಅಂಬರೀಶ್ ಸಮಾಧಿಗೆ ಭೇಟಿ ನೀಡಲಿದ್ದಾರಂತೆ. ಚುನಾವಣೆಗೆ ನಿಂತಾಗಲು ಪತಿಯ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿ ಬಂದಿದ್ದರು. ಈಗ ಗೆದ್ದ ಬಳಿಕ ಸಂಸದೆಯಾಗಿ ಪತಿಯ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

More from Filmibeat

English summary
mandya loksabha election 2019 sumalatha won by over 1,00,000 votes against nikhil kumar. Sumalatha has give big gift to his husband ambareesh birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X