'ಬೆಟ್ಟಿಂಗ್ ಆಡಬೇಡಿ ಪ್ಲೀಸ್' ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಮನವಿ
Recommended Video
ಮಂಡ್ಯ ಚುನಾವಣೆ ಅಭ್ಯರ್ಥಿಗಳಿಗೆ ಮಾತ್ರ ಪ್ರತಿಷ್ಠೆಯಾಗಿಲ್ಲ, ಮಂಡ್ಯ ಜನರಿಗೂ ಬಹುದೊಡ್ಡ ಪ್ರತಿಷ್ಠೆ. ಈ ಪ್ರತಿಷ್ಠೆಯ ಪ್ರತಿರೂಪವಾಗಿ ಮಂಡ್ಯ ಕ್ಷೇತ್ರದಲ್ಲಿ ಬೆಟ್ಟಿಂಗ್ ಸದ್ದು ಜೋರಾಗಿ ಕೇಳಿಬರುತ್ತಿದೆ. ನಿಖಿಲ್ ಮತ್ತು ಸುಮಲತಾ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂದು ಬಾಜಿ ಶುರುವಾಗಿದೆ.
ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟುತ್ತಿರುವ ಬೆಂಬಲಿಗರು, ಹಣ, ಜಮೀನು ಸೇರಿದಂತೆ ಇತರೆ ವಸ್ತುಗಳನ್ನ ಬಾಜಿಗೆ ಇಡುತ್ತಿದ್ದಾರಂತೆ. ಈ ಬಗ್ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ''ಇದನ್ನ ನಾನು ಖಂಡಿಸುತ್ತೇನೆ'' ಎಂದಿದ್ದಾರೆ.
'ದಯವಿಟ್ಟು ಯಾರೂ ಬೆಟ್ಟಿಂಗ್ ಆಡಬೇಡಿ. ನಿಮ್ಮ ಜೀವನವನ್ನ ರಿಸ್ಕ್ ನಲ್ಲಿ ಇಡಬೇಡಿ. ನಿಮ್ಮ ಲೈಫ್ ಬಗ್ಗೆ ನೀವು ನೋಡಬೇಕು. ಒಮ್ಮೆ ಕಳೆದುಕೊಂಡಿದ್ದನ್ನ ಮತ್ತೆ ಪಡೆಯೋಕೆ ಆಗಲ್ಲ. ಇದು ಆರೋಗ್ಯಕರ ಬೆಳವಣಿಗೆಯಲ್ಲ'' ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಶೇಕಡಾ 80ರಷ್ಟು ಮತದಾನವಾಗಿದ್ದು, ಫಲಿತಾಂಶದ ಮೇಲೆ ಭಾರಿ ಕುತೂಹಲವಿದೆ. ಇಲ್ಲಿಯವರೆಗೂ ಯಾರೊಬ್ಬರು ಗೆಲ್ಲುವ ಅವಕಾಶ ಇದೆ ಎಂಬುದೇ ಗೊತ್ತಾಗದಷ್ಟು ಪೈಪೋಟಿ ಮಂಡ್ಯದಲ್ಲಿದೆ.
ಮತ್ತೊಂದೆಡೆ ಚುನಾವಣೆ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡವರ ವಿರುದ್ಧ ಗೂಂಡಾ ಅಥವಾ ಕೋಕಾ ಕಾಯ್ದೆ ಜಾರಿಗೊಳಿಸುವಂತೆ ಡಿಜಿಪಿ ನೀಲಮಣಿ ಎನ್ ರಾಜು ಅವರು ಆದೇಶ ಹೊರಡಿಸಿದ್ದಾರೆ.


Click it and Unblock the Notifications











