For Quick Alerts
  ALLOW NOTIFICATIONS  
  For Daily Alerts

  ಬಿಗ್‌-ಬಿ ಅಮಿತಾಭ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುಮಲತಾ

  |

  ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜನುಮದಿನಕ್ಕೆ ಕೋಟ್ಯಾಂತರ ಅಭಿಮಾನಿಗಳು ಹಾಗು ಸಿನಿಮಾ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ.

  ಕನ್ನಡ ಸಿನಿಮಾ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ಸಹ ಅಮಿತಾಭ್ ಬಚ್ಚನ್‌ ಬರ್ತಡೇಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.

  ಅಮಿತಾಭ್ ಬಚ್ಚನ್ ಬರ್ತಡೇಗೆ ಶುಭಕೋರಿದ ಕನ್ನಡದ ಬಚ್ಚನ್ಅಮಿತಾಭ್ ಬಚ್ಚನ್ ಬರ್ತಡೇಗೆ ಶುಭಕೋರಿದ ಕನ್ನಡದ ಬಚ್ಚನ್

  ಅಮಿತಾಭ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿರುವ ಸುಮಲತಾ ''ಅವರ ಕೆಲಸಕ್ಕೆ ಮಾತ್ರವಲ್ಲ, ಶ್ರೇಷ್ಠ ನಟ ಹಾಗೂ ಶ್ರೇಷ್ಠ ವ್ಯಕ್ತಿಗೂ ನಾನು ಅಭಿಮಾನಿ. ಅಂತಹ ವ್ಯಕ್ತಿ ಜೊತೆ ನಾನು 'ಕಂದಹಾರ್' ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದು ನಿಜಕ್ಕೂ ನನ್ನ ಅದ್ಭುತ ಕ್ಷಣ ಅದು. ಆ ಸಂದರ್ಭಗಳು ನನ್ನೊಂದಿಗೆ ಇದೆ'' ಎಂದು ಟ್ವೀಟ್ ಮಾಡಿದ್ದಾರೆ.

  ಸ್ವತಃ ಸುಮಲತಾ ಅವರೇ ಹೇಳಿರುವಂತೆ ಅಮಿತಾಭ್ ಬಚ್ಚನ್ ಜೊತೆಯಲ್ಲಿ 'ಕಂದಹಾರ್' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಕಂಡಿದ್ದ ಮಲಯಾಳಂ ಚಿತ್ರ ಇದಾಗಿದ್ದು, ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

  ನಾನು ತುಂಬಾ ಸಿಂಪಲ್ ಅಂತ ಮತ್ತೆ ಪ್ರೂವ್ ಮಾಡಿದ Shivanna | Filmibeat Kannada

  ಇನ್ನು ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಮಿತಾಭ್ ಬಚ್ಚನ್ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ಅಂಬರೀಶ್ ನಟನೆ 'ಚಕ್ರವ್ಯೂಹ' ಚಿತ್ರವನ್ನು ಹಿಂದಿಯಲ್ಲಿ ಅಮಿತಾಭ್ ಮಾಡಿದ್ದರು.

  English summary
  Kannada actress and Mandya Mp Sumalatha has Wishes to Bollywood megastar Amitabh bachchan's Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X