ಅಂಬಿ ಅಭಿಮಾನಿಯ ವಿಶಿಷ್ಟ ಪ್ರೀತಿ ಕಂಡು ಸಂತಸಗೊಂಡ ಸುಮಲತಾ

ನೆಚ್ಚಿನ ನಟನ ಫೋಟೋ ಇಟ್ಟುಕೊಳ್ಳುವುದು, ಇಷ್ಟದ ನಟನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವುದು, ಆರಾಧ್ಯದೈವನಿಗೆ ಪೂಜೆ ಸಲ್ಲಿಸುವುದು, ಅಭಿಷೇಕ ಮಾಡುವುದನ್ನೆಲ್ಲಾ ನೀವು ನೋಡಿದ್ದೀರಾ.

ಆದರಿಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮೇಲಿನ ಅಭಿಮಾನವನ್ನು ಅಭಿಮಾನಿಯೊಬ್ಬರು ವ್ಯಕ್ತಪಡಿಸಿರುವ ರೀತಿಯೇ ವಿಶಿಷ್ಟ, ವಿಶೇಷ, ವಿಭಿನ್ನ.!

ಅಂಬಿ ಅಭಿಮಾನಿಯೊಬ್ಬರು ನಾಟಿ ಮಾಡುವಾಗ ಹೃದಯದ ಆಕಾರದಲ್ಲಿ ''ಮತ್ತೆ ಹುಟ್ಟಿ ಬಾ ಅಂಬರೀಶಣ್ಣ'' ಎಂದು ಬರೆದಿದ್ದಾರೆ. ಆ ಫೋಟೋಗಳು ಸುಮಲತಾ ಅಂಬರೀಶ್ ಕೈಸೇರಿವೆ. ಅದನ್ನು ನೋಡಿ ಸುಮಲತಾ ಅಂಬರೀಶ್ ಮನಸೋತಿದ್ದಾರೆ.

Sumalatha is deeply touched by Ambareesh fans evergreen love

''ಇದನ್ನೇ ನೋಡಿ ಎವರ್ಗ್ರೀನ್ ಲವ್ ಅಂತ ಕರೆಯುವುದು.! ಎಷ್ಟು ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಹೃದಯ ತುಂಬಿ ಬಂತು'' ಎಂದು ನಟಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

ಸುಮಲತಾ ಅಂಬರೀಶ್ ಮಾಡಿದ ಟ್ವೀಟ್ ನ ರೀ ಟ್ವೀಟ್ ಮಾಡಿದ ಕಿಚ್ಚ ಸುದೀಪ್ ''ಇನ್ನೊಬ್ಬರ ಹೃದಯದಲ್ಲಿ ಜೀವಿಸುವವರಿಗೆ ಯಾವತ್ತೂ ಸಾವಿಲ್ಲ'' ಎಂದಿದ್ದಾರೆ.

ಅದಕ್ಕೆ ಸುಮಲತಾ ಕೂಡ ''ಖಂಡಿತ ನಿಜ. ಅಂಬರೀಶ್ ಅಜಾರಮರ'' ಎಂದು ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

ಮಂಡ್ಯದ ಗಂಡು ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಎರಡು ತಿಂಗಳ ಮೇಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನವಂಬರ್ 24 ರಂದು ರಾತ್ರಿ ವಿಧಿವಶರಾದರು. ಅಂಬರೀಶ್ ನಿಧನದ ಸುದ್ದಿ ಕೇಳಿ ಇಡೀ ಕರುನಾಡೇ ಕಂಬನಿ ಮಿಡಿದಿತ್ತು.

More from Filmibeat

English summary
Sumalatha is deeply touched by Ambareesh fan's evergreen love. Have a look at Sumalatha Ambareesh's tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X