twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ ಅಭಿಮಾನಿಯ ವಿಶಿಷ್ಟ ಪ್ರೀತಿ ಕಂಡು ಸಂತಸಗೊಂಡ ಸುಮಲತಾ

    |

    ನೆಚ್ಚಿನ ನಟನ ಫೋಟೋ ಇಟ್ಟುಕೊಳ್ಳುವುದು, ಇಷ್ಟದ ನಟನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವುದು, ಆರಾಧ್ಯದೈವನಿಗೆ ಪೂಜೆ ಸಲ್ಲಿಸುವುದು, ಅಭಿಷೇಕ ಮಾಡುವುದನ್ನೆಲ್ಲಾ ನೀವು ನೋಡಿದ್ದೀರಾ.

    ಆದರಿಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮೇಲಿನ ಅಭಿಮಾನವನ್ನು ಅಭಿಮಾನಿಯೊಬ್ಬರು ವ್ಯಕ್ತಪಡಿಸಿರುವ ರೀತಿಯೇ ವಿಶಿಷ್ಟ, ವಿಶೇಷ, ವಿಭಿನ್ನ.!

    ಧಣಿ ಅಂಬಿ ಇಲ್ಲದ ಮನೆಯಲ್ಲಿ ಶ್ವಾನಗಳು ಮೌನ: ಮಂಕಾದ ಕನ್ವರ್ ಲಾಲ್ಧಣಿ ಅಂಬಿ ಇಲ್ಲದ ಮನೆಯಲ್ಲಿ ಶ್ವಾನಗಳು ಮೌನ: ಮಂಕಾದ ಕನ್ವರ್ ಲಾಲ್

    ಅಂಬಿ ಅಭಿಮಾನಿಯೊಬ್ಬರು ನಾಟಿ ಮಾಡುವಾಗ ಹೃದಯದ ಆಕಾರದಲ್ಲಿ ''ಮತ್ತೆ ಹುಟ್ಟಿ ಬಾ ಅಂಬರೀಶಣ್ಣ'' ಎಂದು ಬರೆದಿದ್ದಾರೆ. ಆ ಫೋಟೋಗಳು ಸುಮಲತಾ ಅಂಬರೀಶ್ ಕೈಸೇರಿವೆ. ಅದನ್ನು ನೋಡಿ ಸುಮಲತಾ ಅಂಬರೀಶ್ ಮನಸೋತಿದ್ದಾರೆ.

    Sumalatha is deeply touched by Ambareesh fans evergreen love

    ಆಫ್ ದಿ ರೆಕಾರ್ಡ್ : ಯಾವಾಗಲೂ ಗದರುತ್ತಿದ್ದ ಅಂಬಿ ಆ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು ಆಫ್ ದಿ ರೆಕಾರ್ಡ್ : ಯಾವಾಗಲೂ ಗದರುತ್ತಿದ್ದ ಅಂಬಿ ಆ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು

    ''ಇದನ್ನೇ ನೋಡಿ ಎವರ್ಗ್ರೀನ್ ಲವ್ ಅಂತ ಕರೆಯುವುದು.! ಎಷ್ಟು ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಹೃದಯ ತುಂಬಿ ಬಂತು'' ಎಂದು ನಟಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

    ಸುಮಲತಾ ಅಂಬರೀಶ್ ಮಾಡಿದ ಟ್ವೀಟ್ ನ ರೀ ಟ್ವೀಟ್ ಮಾಡಿದ ಕಿಚ್ಚ ಸುದೀಪ್ ''ಇನ್ನೊಬ್ಬರ ಹೃದಯದಲ್ಲಿ ಜೀವಿಸುವವರಿಗೆ ಯಾವತ್ತೂ ಸಾವಿಲ್ಲ'' ಎಂದಿದ್ದಾರೆ.

    ಅಂಬರೀಶ್ ನೆನೆದು ಭಾವುಕರಾದ ನಟ ಬಾಲಯ್ಯಅಂಬರೀಶ್ ನೆನೆದು ಭಾವುಕರಾದ ನಟ ಬಾಲಯ್ಯ

    ಅದಕ್ಕೆ ಸುಮಲತಾ ಕೂಡ ''ಖಂಡಿತ ನಿಜ. ಅಂಬರೀಶ್ ಅಜಾರಮರ'' ಎಂದು ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

    ಮಂಡ್ಯದ ಗಂಡು ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಎರಡು ತಿಂಗಳ ಮೇಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನವಂಬರ್ 24 ರಂದು ರಾತ್ರಿ ವಿಧಿವಶರಾದರು. ಅಂಬರೀಶ್ ನಿಧನದ ಸುದ್ದಿ ಕೇಳಿ ಇಡೀ ಕರುನಾಡೇ ಕಂಬನಿ ಮಿಡಿದಿತ್ತು.

    English summary
    Sumalatha is deeply touched by Ambareesh fan's evergreen love. Have a look at Sumalatha Ambareesh's tweet.
    Saturday, February 9, 2019, 14:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X