ಅಂಬರೀಶ್ ಪುಣ್ಯಸ್ಮರಣೆ: ಪ್ರೀತಿಯ ಪತಿಗೆ ಹೃದಯಸ್ಪರ್ಶಿ ಪತ್ರ ಬರೆದ ಸುಮಲತಾ

ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿ ಇಂದಿಗೆ (ನವೆಂಬರ್ 24) ಎರಡು ವರ್ಷ ಕಳೆದು ಹೋಯಿತು. ಇಂದು ಅಂಬರೀಶ್ ಅವರ 2ನೇ ವರ್ಷದ ಪುಣ್ಯಸ್ಮರಣೆ. ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ನವೆಂಬರ್ 24, 2018ರಲ್ಲಿ ನಟ ರೆಬಲ್ ಸ್ಟಾರ್ ಅಂಬರೀಶ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.

ಅಂಬರೀಶ್ ಇಲ್ಲದೆ ಎರಡು ವರ್ಷಗಳನ್ನು ಕಳೆದ ಪತ್ನಿ ಸುಮಲತಾ ಅಂಬರೀಶ್ ಭಾವನಾತ್ಮಕ ಪತ್ರ ಬರೆದಿದ್ದಾರೆ. ಪ್ರತಿ ಕ್ಷಣ ಕಾಡುವ ಅಂಬಿ ನೆನಪನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಸುಮಲತಾ ಅಂಬರೀಶ್ ಸದ್ಯ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಮಂಡ್ಯ ಜಿಲ್ಲೆಯ ಸಂಸದೆಯಾಗಿ ಆಳ್ವಿಕೆ ಮಾಡುತ್ತಿದ್ದಾರೆ. ಪತಿಯನ್ನು ಕಳೆದುಕೊಂಡು 2 ವರ್ಷ ಕಳೆದಿರುವ ದುಃಖವನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ನನ್ನ ಹೃದಯ ಮುಚ್ಚಲು ಸಾಧ್ಯವಿಲ್ಲ-ಸುಮಲತಾ

ನನ್ನ ಹೃದಯ ಮುಚ್ಚಲು ಸಾಧ್ಯವಿಲ್ಲ-ಸುಮಲತಾ

ಅಂಬರೀಶ್ ಎರಡನೇ ವರ್ಷದ ಪುಣ್ಯಸ್ಮರಣೆ ದಿನ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪತ್ರ ಬರೆದಿದ್ದಾರೆ. '2 ವರ್ಷಗಳು. ಮತ್ತೆ ನಿಮ್ಮನ್ನು ನೋಡಬೇಕೆಂಬ ಹಂಬಲದಿಂದ ನಾನು ಕಣ್ಣು ಮುಚ್ಚುತ್ತೇನೆ. ನಾನು ಮತ್ತೆ ನಿಮ್ಮ ಮಾತುಗಳನ್ನು ಕೇಳುವಂತೆ ಕಿವಿ ಮುಚ್ಚುತ್ತೇನೆ. ಆದರೆ ನನ್ನ ಹೃದಯ ಮುಚ್ಚಲು ಸಾಧ್ಯವಿಲ್ಲ' ಎಂದಿದ್ದಾರೆ.

'ಪ್ರತಿ ಕ್ಷಣ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ..'

'ಪ್ರತಿ ಕ್ಷಣ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ..'

'ಈ ಅಗಾದ ಪ್ರೀತಿಯನ್ನು ಹಿಡಿದಿಟ್ಟುಕೊಳ್ಳಬೇಕು, ಈ ವಿಶಿಷ್ಟ ಶಕ್ತಿ, ಎಲ್ಲಾ ನೆನಪುಗಳು, ಈ ಎಲ್ಲಾ ಸಮಯವನ್ನು ಈ ಜಗತ್ತಿನಲ್ಲಿ ಯಾವುದೇ ಹೃದಯ ಹಿಡಿದಿಟ್ಟುಕೊಳ್ಳುವಷ್ಟು ದೊಡ್ಡದಾಗಿಲ್ಲ. 2 ವರ್ಷಗಳು ನೀವು ಇಲ್ಲದೆ, ಪ್ರತಿ ಸೆಕೆಂಡ್ ನಿಮ್ಮನ್ನು ನೆನಪಿಸಿಕೊಳ್ಳುವುದು ಮತ್ತು ನಾನು ನಿಮ್ಮೊಂದಿಗೆ ಕಳೆದ ಪ್ರತಿ ಸೆಕೆಂಡಿನ ಮೌಲ್ಯವನ್ನು ಅರಿತುಕೊಳ್ಳಲು ದೇವರು ನನಗೆ ನೀಡಿದ ಎಲ್ಲಾ ಕ್ಷಣಗಳನ್ನು ಮೆಲುಕುಹಾಕುತ್ತೇನೆ.'

ಸವಾಲುಗಳ ಮೂಲಕ ನನಗೆ ಮಾರ್ಗದರ್ಶನ ನೀಡಿದೆ

ಸವಾಲುಗಳ ಮೂಲಕ ನನಗೆ ಮಾರ್ಗದರ್ಶನ ನೀಡಿದೆ

'ನಿಮ್ಮನ್ನು ತಿಳಿದುಕೊಳ್ಳಲು, ನಿಮ್ಮನ್ನು ಮೆಚ್ಚಿಸಲು ನಿಮ್ಮನ್ನು ಪ್ರೀತಿಸಲು, ನಿಮ್ಮನ್ನು ಕಾಳಜಿ ವಹಿಸುವುದು, ಆ ಕ್ಷಣಗಳು ಮತ್ತು ನೆನಪುಗಳು ನಾವು ಹಂಚಿಕೊಂಡ ನಗು ಮತ್ತು ಪ್ರೀತಿ ನೀವು ನನ್ನಲ್ಲಿ ಮೂಡಿಸಿದ ಆಲೋಚನೆಗಳು ಮತ್ತು ನಂಬಿಕೆಗಳು ನನ್ನ ಕೈ ಹಿಡಿದು ಸವಾಲುಗಳ ಮೂಲಕ ನನಗೆ ಮಾರ್ಗದರ್ಶನ ನೀಡಿದೆ, ನನಗೆ ಧೈರ್ಯ ನೀಡಿದೆ.'

Recommended Video

ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada
ಪ್ರತಿ ಉಸಿರಿನಲ್ಲಿ ನೀವು ಇರುತ್ತೀರಿ- ಸುಮಲತಾ ಅಂಬರೀಶ್

ಪ್ರತಿ ಉಸಿರಿನಲ್ಲಿ ನೀವು ಇರುತ್ತೀರಿ- ಸುಮಲತಾ ಅಂಬರೀಶ್

'ನೀವು ಬಿಟ್ಟು ಹೋದ ಪ್ರೀತಿ, ಪರಂಪರೆ, ನನ್ನ ಜೀವನದ ಉಳಿದ ಭಾಗಗಳಲ್ಲಿ ನನ್ನು ಕರೆದೊಯ್ಯುತ್ತದೆೆ. ನಿಮ್ಮ ಒಳ್ಳೆಯತನದ ಹೊಳೆಯುವ ಬೆಳಕು, ಜೀವನದ ಕಷ್ಟದ ಸಮಯದಿಂದ, ನನ್ನ ಕೊನೆಯ ಉಸಿರಿರುವ ವರೆಗೂ ನನ್ನನ್ನು ರಕ್ಷಿಸುತ್ತದೆ. ನಾನು ತೆಗೆದುಕೊಳ್ಳುವ ಪ್ರತಿ ಉಸಿರಿನಲ್ಲಿ ನೀವು ಇರುತ್ತೀರಿ. ನಾನು ನಕ್ಕಾಗ, ಅತ್ತಾಗ, ಎಡವಿ ಬಿದ್ದರೆ ನಿಮ್ಮ ಶಕ್ತಿ ನನ್ನನ್ನು ನೇರವಾಗಿ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಶಾಶ್ವತವಾಗಿ ನನ್ನನ್ನು ರಕ್ಷಿಸುತ್ತದೆ. ಈ ನಾನು ಇರುವುದು ನಾನಲ್ಲ. ನನ್ನ ಮೂಲಕ ನೀವು ಜೀವಿಸುತ್ತಿದ್ದೀರಿ.' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

More from Filmibeat

English summary
Sumalatha Ambareesh pens an emotional letter to Ambareesh for second year death anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X