For Quick Alerts
  ALLOW NOTIFICATIONS  
  For Daily Alerts

  ಸಂಸದೆಯಾದ ನಂತರ ಸುಮಲತಾ ನಟಿಸಿದ ಮೊದಲ ಸಿನಿಮಾವಿದು

  |

  ನಟಿ, ಸುಮಲತಾ ಚುನಾವಣೆಯಲ್ಲಿ ಗೆದ್ದು ಮಂಡ್ಯ ಸಂಸದೆಯಾಗಿದ್ದಾರೆ. ಸಂಸದೆ ಆದರೂ, ಸಿನಿಮಾಗಳ ನಂಟು ಬಿಡದ ಸುಮಲತಾ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಸೆನ್ಸಾರ್ ಮುಗಿದಿದೆ.

  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದಲ್ಲಿ ಸುಮಲತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಂಸದೆಯಾದ ನಂತರ ಸುಮಲತಾ ನಟಿಸಿರುವ ಮೊದಲ ಸಿನಿಮಾ ಇದಾಗಿದೆ. ಈ ವಿಷಯವನ್ನು ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ತಮ್ಮ ಕೆಲಸಗಳ ನಡುವೆಯೂ ಸಿನಿಮಾದಲ್ಲಿ ನಟಿಸಿದ್ದ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಸಂತಸ ವ್ಯಕ್ತ ಪಡಿಸಿದರು.

  ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್

  ಇನ್ನು ಸಿನಿಮಾದ ಟೈಟಲ್ ಬಗ್ಗೆಯೂ ಮಾತನಾಡಿದ್ದಾರೆ. ಸಿನಿಮಾಗೆ ಮೊದಲು 'ಅಕ್ಷಾಂಶ ರೇಖಾಂಶ' ಎನ್ನುವ ಹೆಸರನ್ನು ಇಟ್ಟಿದ್ದು, ನಂತರ ಬದಲು ಮಾಡಿದರಂತೆ. ಹೆಚ್ಚು ಜನರಿಗೆ ಅದನ್ನು ಉಚ್ಚಾರ ಮಾಡಲು ಕಷ್ಟ ಆದ ಕಾರಣ 'ಇಂಡಿಯಾ V/S ಇಂಗ್ಲೆಂಡ್' ಎಂದು ಹೊಸ ಹೆಸರನ್ನು ಇಟ್ಟರಂತೆ.

  ಸಿನಿಮಾ ಜನವರಿ 2020ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾಗೆ ಮುಖ್ಯ ಚಿತ್ರಮಂದಿರವಾಗಿ ತ್ರಿವೇಣಿ ಥಿಯೇಟರ್ ಸಿಕ್ಕಿದೆ. ವಿಶೇಷ ಅಂದರೆ, ನಾಗತಿಹಳ್ಳಿ ಚಂದ್ರಶೇಖರ್ ಮೊದಲ ನಿರ್ದೇಶನದ 'ಉಂಡುಹೋದ ಕೊಂಡುಹೋದ ಸಿನಿಮಾ ಕೂಡ ಅಲ್ಲಿಯೇ ಬಿಡುಗಡೆ ಆಗಿತ್ತು.

  ''ಸಿನಿಮಾ ಸಾಮೂಹಿಕ ಕಲೆಯಾಗಿಯೇ ಉಳಿಯಬೇಕು ''- ನಾಗತಿಹಳ್ಳಿ ಚಂದ್ರಶೇಖರ್ ''ಸಿನಿಮಾ ಸಾಮೂಹಿಕ ಕಲೆಯಾಗಿಯೇ ಉಳಿಯಬೇಕು ''- ನಾಗತಿಹಳ್ಳಿ ಚಂದ್ರಶೇಖರ್

  'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಸೆನ್ಸಾರ್ ಮುಗಿದಿದೆ. ವಸಿಷ್ಟ ಎನ್ ಸಿಂಹ, ಮಾನ್ವಿತಾ ಕಾಮತ್, ಪ್ರಕಾಶ್ ಬೆಳವಾಡಿ, ಸುಮಲತಾ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  English summary
  Sumalatha played a important role in 'India vs England' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X