ಅಭಿಷೇಕ್ ಕೈಯಲ್ಲಿದೆ ಎರಡು ಸ್ಕ್ರಿಪ್ಟ್ , ಮುಂದಿನ ಸಿನಿಮಾ ಯಾವುದು?

Recommended Video

ಅಭಿಷೇಕ್ ಅಂಬರೀಷ್ ಮುಂದಿನ ಸಿನಿಮಾ ಯಾವುದು ಗೊತ್ತಾ..? | abhishek ambareesh

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಅದ್ಧೂರಿಯಾಗಿ ಬಿಡುಗಡೆ ಆಯಿತು. ಆದರೆ, ನಿರೀಕ್ಷೆಗೆ ತಕ್ಕಂತೆ ಯಶಸ್ಸು ತಂದು ಕೊಡಲಿಲ್ಲ. ಬಟ್, ವೈಯಕ್ತಿಕವಾಗಿ ಅಭಿಷೇಕ್ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.

ಮೊದಲ ಸಿನಿಮಾ ನಂತರ ಎರಡನೇ ಸಿನಿಮಾ ಯಾವುದು, ಯಾವಾಗ ಮಾಡ್ತಾರೆ ಎಂಬ ಕುತೂಹಲ ಕಾಡುತ್ತಿದೆ. ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ನಾಗಶೇಖರ್ ನಂತರ ಮತ್ತೊಬ್ಬ ಸ್ಟಾರ್ ನಿರ್ದೇಶಕ ಅಂಬಿ ಪುತ್ರನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿಗಳು ಹಬ್ಬಿದವು. ಯಾರೂ ಎಂಬ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯಕ್ಕೆ ಎರಡನೇ ಸಿನಿಮಾದ ಕೆಲಸ ಆರಂಭವಾಗಿದ್ಯಾ ಎಂಬ ಕುತೂಹಲಕ್ಕೆ ಉತ್ತರ ಗೊತ್ತಿರಲಿಲ್ಲ.

Sumalatha React About Abhishek Aext Movie

ಇದೀಗ, ಅಭಿಷೇಕ್ ಅವರ ತಾಯಿ ಸುಮಲತಾ ಅವರ ಈ ಬಗ್ಗೆ ಮಾತನಾಡಿದ್ದು, ''ಎರಡ್ಮೂರು ಸ್ಕ್ರಿಪ್ಟ್ ಬಂದಿದೆ, ಇನ್ನು ಅಂತಿಮ ಮಾಡಿಲ್ಲ. ಒಂದನ್ನ ಆಯ್ಕೆ ಮಾಡಿಕೊಳ್ಳಬೇಕಿದೆ'' ಎಂದು ಹೇಳಿದ್ದಾರೆ.

ಇನ್ನು ಅಭಿಷೇಕ್ ರಾಜಕೀಯಕ್ಕೆ ಬರ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ ''ಸದ್ಯಕ್ಕೆ ರಾಜಕೀಯದ ಬಗ್ಗೆ ಯೋಚನೆ ಮಾಡಿಲ್ಲ. ಸಿನಿಮಾಗಳನ್ನ ಮಾಡಲಿ, ಒಂದು ವೇಳೆ ರಾಜಕೀಯಕ್ಕೆ ಬರಲೇಬೇಕು ಅವರು ನಿರ್ಧರಿಸಿದರೇ ಆಮೇಲೆ ನೋಡೋಣ'' ಎಂದರು.

More from Filmibeat

English summary
Mandya Mp Sumalatha Ambarish has clarified about Abhishek next Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X