ದರ್ಶನ್ ನನ್ನ ದೊಡ್ಡ ಮಗ, ಯಶ್ ಮನೆ ಮಗ: ಸುಮಲತಾ
Recommended Video

ಮಂಡ್ಯ ಲೋಕಸಭೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ಅಖಾಡಕ್ಕೆ ಧುಮುಕಿರುವ ಅಂಬರೀಶ್ ಪತ್ನಿ ಮಂಡ್ಯ ಕ್ಷೇತ್ರದಲ್ಲಿ ಜನರ ಅಭಿಮತ ಪಡೆಯುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತಾರಾ ಎಂಬುದು ಕುತೂಹಲ ಹುಟ್ಟಿಸಿದೆ.
ಸುಮಲತಾ ಅವರು ಹೇಗೆ ಸ್ಪರ್ಧೆ ಮಾಡಿದ್ರು ನಟ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬರ್ತಾರೆ ಎಂಬುದು ಮಂಡ್ಯ ಜನರಲ್ಲಿ ಮತ್ತು ಅಭಿಮಾನಿಗಳಲ್ಲಿದೆ. ಈ ಬಗ್ಗೆ ಸ್ವತಃ ದರ್ಶನ್ ಪ್ರತಿಕ್ರಿಯಿಸಿದ್ದು, 'ಸುಮಲತಾ ಅಮ್ಮ ಏನು ಹೇಳಿದ್ರು ನಾನು ಮಾಡ್ತೀನಿ' ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ನಿಲುವೇನು ಎಂಬುದು ಕುತೂಹಲ ಮೂಡಿಸಿದೆ. ಅದೇ ರೀತಿ ಸುಮಲತಾ ಅವರು ಪ್ರಚಾರಕ್ಕಾಗಿ ದರ್ಶನ್, ಯಶ್ ಅವರನ್ನ ಕರೆತರ್ತಾರಾ ಎಂಬುದನ್ನ ಸ್ವತಃ ಸುಮಲತಾ ಅವರೇ ಉತ್ತರಿಸಿದ್ದಾರೆ. ಹಾಗಿದ್ರೆ, ಸುಮಲತಾ ಅಂಬರೀಶ್ ಏನಂದ್ರು? ಮುಂದೆ ಓದಿ.....

ದರ್ಶನ್ ನನ್ನ ದೊಡ್ಡ ಮಗ
ರೆಬೆಲ್ ಸ್ಟಾರ್ ಅಂಬರೀಶ್ ಇದ್ದಾಗಲೂ ಇದೇ ಮಾತನ್ನ ಹೇಳುತ್ತಿದ್ದರು. 'ದರ್ಶನ್ ನನ್ನ ದೊಡ್ಡ ಮಗ' ಇದ್ದಂತೆ ಅಂತ. ಈಗ ಅದೇ ಮಾತನ್ನ ಸುಮಲತಾ ಅವರು ಹೇಳಿದ್ದಾರೆ. ''ದರ್ಶನ್ ನನ್ನ ದೊಡ್ಡ ಮಗ. ನಾನು ಏನೇ ಕೇಳಿದ್ರು ಮಾಡಿಕೊಡ್ತಾರೆ'' ಎಂದು ಮಂಡ್ಯದಲ್ಲಿ ಹೇಳಿದ್ದಾರೆ.

ಕೇಳಿದ್ದಕ್ಕಿಂತ ಹೆಚ್ಚು ಮಾಡ್ತಾನೆ ದರ್ಶನ್
ದರ್ಶನ್ ಗೆ ನಾನು ನೋಡಪ್ಪ, ನಾನು ಅಭಿಷೇಕ್ ಕಡೆಯಿಂದ ಏನು ಎದುರು ನೋಡುತ್ತೇನೋ ಅದನ್ನ ನಿನ್ನಿಂದಲೂ ಎದುರು ನೋಡುತ್ತೀನಿ ಅಂದ್ರೆ, ಅದಕ್ಕೆ ದರ್ಶನ್ ''ನೀವು ಅಭಿಷೇಕ್ ನಿಂದ ಏನು ಎದುರು ನೋಡುತ್ತೀರೋ ಅದಕ್ಕಿಂತ ಎರಡರಷ್ಟು ನನ್ನಿಂದು ಎದುರು ನೋಡಬೇಕು ಅಂತ ದರ್ಶನ್ ಹೇಳ್ತಾನೆ'' ಎಂದು ಸುಮಲತಾ ಹೇಳಿದ್ರು.

ದರ್ಶನ್ ಮತ್ತು ಯಶ್ ನಮ್ಮ ಮನೆ ಮಕ್ಕಳು
ಕೇವಲ ದರ್ಶನ್ ಮಾತ್ರವಲ್ಲ ಯಶ್ ಕೂಡ ನಮ್ಮ ಮನೆ ಮಗ. ''ದರ್ಶನ್ ಮತ್ತು ಯಶ್ ನಮ್ಮ ಮನೆ ಮಕ್ಕಳು'' ಎಂದು ಸುಮಲತಾ ಅವರು ಹೇಳುವ ಮೂಲಕ, ಮಂಡ್ಯದಲ್ಲಿ ಪ್ರಚಾರ ಮಾಡೋಕೆ ಪಕ್ಕಾ ಇವರಿಬ್ಬರು ಬರ್ತಾರೆ ಎಂದು ಸುಳಿವು ನೀಡಿದ್ದಾರೆ.

ದರ್ಶನ್ ಏನಂದ್ರು?
ಇನ್ನು ಸುಮಲತಾ ಅವರ ಪರವಾಗಿ ಪ್ರಚಾರ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಟ ದರ್ಶನ್ ''ಸುಮಲತಾ ಅವರು ನನಗೆ ಅಮ್ಮ, ಅವರು ಎಲ್ಲೇ ಹೋದರು ಅವರ ಜೊತೆ ನಾನು ಇರ್ತೀನಿ, ನನಗೆ ಯಾವುದೇ ಪಕ್ಷ ಬೇಕಿಲ್ಲ. ನನ್ನವರು ಬೇಕು. ಸೋ, ಸುಮಲತಾ ಅವರ ಜೊತೆ ನಾನಿದ್ದೀನಿ'' ಎಂದು ಹೇಳುವ ಮೂಲಕ ಬಲ ತುಂಬಿದ್ದಾರೆ.


Click it and Unblock the Notifications











