ನಿಖಿಲ್ ಮತ್ತು ಅಭಿಷೇಕ್ ನಡೆಯ ಬಗ್ಗೆ ಸುಮಲತಾ ಹೇಳಿದ್ದೇನು?

Recommended Video

ನಿಖಿಲ್ ಕುಮಾರಸ್ವಾಮಿ ಹಾಗು ಅಭಿಷೇಕ್ ಅಂಬರೀಶ್ ಬಗ್ಗೆ ಸುಮಲತಾ ಹೇಳಿದ್ದೇನು? | FILMIBEAT KANNADA

ಅಂಬರೀಶ್ ಇದ್ದಾಗ ಅಭಿಷೇಕ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಆಪ್ತ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ, ಸ್ನೇಹ, ಸಂಬಂಧವಿತ್ತು. ಅಂಬಿ ನಿಧನದ ದಿನವೂ ಅಭಿಷೇಕ್ ಗೆ ಜೊತೆಯಾಗಿ ನಿಂತು ಸಮಾಧಾನ ಮಾಡಿದ್ದರು ನಿಖಿಲ್.

ಆಮೇಲೆ ಮಂಡ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ನಿಖಿಲ್ ಗೆ ತನ್ನ ಸ್ನೇಹಿತನ ತಾಯಿಯೇ ಎದುರಾಳಿ ಆದರು. ಅಲ್ಲಿಂದ ಅಭಿಷೇಕ್ ಜೊತೆಗಿನ ಸ್ನೇಹಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದ ನಿಖಿಲ್ ವಾದ-ಪ್ರತಿವಾದಗಳ ಮೂಲಕ ಮಂಡ್ಯ ಅಖಾಡದಲ್ಲಿ ಎಲೆಕ್ಷನ್ ಎದುರಿಸಿದ್ದರು.

ಫಲಿತಾಂಶವೂ ಬಂತು. ನಿಖಿಲ್ ಸೋತರು, ಸುಮಲತಾ ಗೆದ್ದರು. ಅಮ್ಮ ಗೆದ್ದ ಸಂಭ್ರಮದಲ್ಲಿ ಅಭಿಷೇಕ್ ಇದ್ದರೆ, ಆ ಕಡೆ ನಿಖಿಲ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದೀಗ, ಅಭಿಷೇಕ್ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗುತ್ತಿದೆ.

Sumalatha react on nikhil kumar and abhishek

'ತನ್ನ ಸ್ನೇಹಿತನ ಚಿತ್ರಕ್ಕೆ ಒಳ್ಳೆಯದಾಗಲಿ' ಎಂದು ಶುಭ ಕೋರಿ ಇನ್ಸ್ಟಾಗ್ರಾಂನಲ್ಲಿ ಮನಬಿಚ್ಚಿ ಮಾತನಾಡಿದ ನಿಖಿಲ್ ''ನಾನು ಮಾನವಿಕ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ. ಅಮರ್ ಸಿನಿಮಾ ಚೆನ್ನಾಗಿ ಯಶಸ್ಸು ಕಾಣಲಿ' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಕೂಡ ''ನಿಖಿಲ್ ಮಾತುಗಳನ್ನ ಮೆಚ್ಚಿಕೊಂಡಿದ್ದಾರೆ. ನಿನ್ನ ಮಾತುಗಳು ಎಲ್ಲರಿಗೂ ಸ್ಫೂರ್ತಿ. ನೀನು ಯಾವಾಗಲೂ ನನ್ನ ಸ್ನೇಹಿತ. ಮಂಡ್ಯದ ಅಭಿವೃದ್ದಿ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡೋಣ' ಎಂದಿದ್ದಾರೆ.

Sumalatha react on nikhil kumar and abhishek

ನಿಖಿಲ್ ಕುಮಾರ್ ಮತ್ತು ಅಭಿಷೇಕ್ ಅವರ ಈ ಸಂಭಾಷಣೆ ಬಗ್ಗೆ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಖುಷಿ ವ್ಯಕ್ತಪಡಿಸಿದ್ದಾರೆ. ''ಮುಂದೆ ಸಾಗುತ್ತಿದ್ದಾರೆ, ಇದೊಂದೇ ಮಾರ್ಗ'' ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲಿಗೆ ಮಂಡ್ಯ ಚುನಾವಣೆ ಬಳಿಕ ನಿಖಿಲ್ ಮತ್ತು ಅಭಿಷೇಕ್ ನಡುವಿನ ಸ್ನೇಹ ಮುಂದುವರಿಯುತ್ತಾ ಅಥವಾ ದ್ವೇಷ, ಮನಸ್ತಾದಿಂದ ಮುರಿದುಕೊಳ್ಳತ್ತಾ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ, ಇವರಿಬ್ಬರ ಮಾತುಕತೆ ನೋಡಿದ್ಮೇಲೆ ಈ ಇಬ್ಬರು ಒಟ್ಟಾಗಿ ಹೆಜ್ಜೆ ಇಡ್ತಾರೆ ಎನ್ನುವುದು ಖಾತ್ರಿಯಾಗುತ್ತಿದೆ.

More from Filmibeat

English summary
Mandya Mp sumalatha react on nikhil kumar and abhishek conversation. nikhil kumar has wish to amar movie and abhishek said thank to nikhil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X