ದರ್ಶನ್ ಕುಟುಂಬ ಕಲಹದ ಬಗ್ಗೆ ಸುಮಲತಾ ಪ್ರತಿಕ್ರಿಯೆ
Recommended Video
''ಇಂತಹ ಸುದ್ದಿಗಳು ಬರುತ್ತಲೇ ಇರುತ್ತದೆ. ನಾನು ಇಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ.'' ಎಂದು ದರ್ಶನ್ ಕುಟುಂಬ ಕಲಹದ ಬಗ್ಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವೆ ಮತ್ತೆ ಜಗಳ ಆಗಿದ್ದು, ದರ್ಶನ್ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಇತ್ತು. ಹಿರಿಯ ಪತ್ರಕರ್ತ ರವಿಬೆಳಗೆರೆ ಕೂಡ ಅದೇ ವಿಷಯದ ಬಗ್ಗೆ ಮಾತನಾಡಿದ್ದರು. ಇದರೊಂದಿಗೆ, ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಧಾನ ಸುಮಲತಾ ಮೂಲಕ ನಡೆಯುತ್ತಿದೆ ಎನ್ನಲಾಗಿತ್ತು.
ಆದರೆ, ಈ ಘಟನೆಯ ಬಗ್ಗೆ ಮಾತನಾಡಿರುವ ಸುಮಲತಾ, ಇದೆಲ್ಲ ಸುಳ್ಳು ಎಂದಿದ್ದಾರೆ. ''ನಾನು ಯಾವ ವಿಡಿಯೋವನ್ನು ನೋಡಿಲ್ಲ. ಇಂತಹ ಸುದ್ದಿಗಳು ಬರುತ್ತಲೇ ಇರುತ್ತದೆ. ನಾನು ಇಂತಹ ಸುದ್ದಿಗಳಗೆ ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವರು ಬೇಕು ಅಂತಲೇ ಸೃಷ್ಟಿ ಮಾಡುತ್ತಾರೆ. ಇದರ ಮೂಲಕ ಪ್ರಚಾರ ಪಡೆಯುತ್ತಾರೆ. ಗಂಡ - ಹೆಂಡತಿ ಮಧ್ಯೆ ಇಂತಹ ಸುದ್ದಿ ಹಬ್ಬಿಸುವುದು ತಪ್ಪು ಮನೆ ಮುರಿಸಯುವ ಕೆಲಸಗಳನ್ನು ಯಾರು ಮಾಡಬಾರದು.'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಂಬರೀಶ್ ಅವರ 9ನೇ ತಿಂಗಳ ಪುಣ್ಯ ತಿಥಿ ಇದ್ದ ಕಾರಣ ಅಂಬಿ ಸಮಾಧಿಗೆ ಸುಮಲತಾ ಪೂಜೆ ಸಲ್ಲಿಸಿದರು. ಈ ವೇಳೆ ದರ್ಶನ್ ವಿಚಾರವಾಗಿಯೂ ಮಾಡತನಾಡಿದರು.


Click it and Unblock the Notifications











