twitter
    For Quick Alerts
    ALLOW NOTIFICATIONS  
    For Daily Alerts

    'ಅಂಬಿ ಸ್ಮಾರಕ ಮನವಿ ಪತ್ರ ಮುಖಕ್ಕೆ ಎಸೆದ್ರು': ಎಚ್‌ಡಿಕೆ ಮಾಡಿದ ಅವಮಾನ ಬಿಚ್ಚಿಟ್ಟ ಸುಮಲತಾ

    |

    ''ಅಂಬರೀಶ್ ಸ್ಮಾರಕ ವಿಚಾರವಾಗಿ ಅಂದಿನ ಸಿಎಂ ಎಚ್ ಡಿ ಕುಮಾರಸ್ವಾಮಿ ಬಳಿ ಮನವಿ ಪತ್ರ ತೆಗೆದುಕೊಂಡು ಹೋದಾಗ ಮುಖಕ್ಕೆ ಎಸೆದು ಹೋಗಿದ್ದರು'' ಎಂದು ಮಂಡ್ಯ ಸಂಸದೆ ಸುಮಲತಾ ಆರೋಪಿಸಿದ್ದಾರೆ.

    ಸಂಸದೆ ಸುಮಲತಾ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಜೋರಾದ ಸಂದರ್ಭದಲ್ಲೆಲ್ಲಾ ದಿವಂಗತ ನಟ ಅಂಬರೀಶ್ ಸ್ಮಾರಕ ವಿಚಾರ ಚರ್ಚೆಗೆ ಬರುತ್ತದೆ. ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರಲು ಕಾರಣ ಯಾರು? ಎನ್ನುವ ವಿಷಯವೂ ಪದೇ ಪದೇ ಉಲ್ಲೇಖವಾಗುತ್ತದೆ.

    Breaking:ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಸುಮಲತಾ ಅಂಬರೀಶ್ ಆಕ್ರೋಶ

    ಈ ಬಗ್ಗೆ ಇತ್ತೀಚಿಗಷ್ಟೆ ಮಾತನಾಡಿದ್ದ ಕುಮಾರಸ್ವಾಮಿ 'ಅಂಬರೀಶ್ ಸ್ಮಾರಕದಲ್ಲಿ ನನ್ನ ದುಡಿಮೆ ಇದೆ, ಮಂಡ್ಯಗೆ ಪಾರ್ಥಿವ ಶರೀರ ತಂದಿದ್ದು ನಾನು' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ 'ಅಂಬಿ ಸ್ಮಾರಕಕ್ಕೆ ಮನವಿ ಕೊಡಲು ಹೋದಾಗ ಏಕವಚನದಲ್ಲಿ ಮಾತನಾಡಿ, ಪತ್ರವನ್ನು ಮುಖಕ್ಕೆ ಎಸೆದಿದ್ದನ್ನು ಸೋ ಕಾಲ್ಡ್ ಸ್ನೇಹಿತ ಮರೆತಿರಬಹುದು' ಎಂದು ತಿರುಗೇಟು ಕೊಟ್ಟಿದ್ದಾರೆ. ಮುಂದೆ ಓದಿ...

    ಸ್ಮಾರಕದಲ್ಲಿ ಎಚ್‌ಡಿಕೆ ಪಾತ್ರವಿಲ್ಲ

    ಸ್ಮಾರಕದಲ್ಲಿ ಎಚ್‌ಡಿಕೆ ಪಾತ್ರವಿಲ್ಲ

    'ಅಂಬಿ ಸ್ಮಾರಕ ನಿರ್ಮಾಣದಲ್ಲಿ ನನ್ನ ದುಡಿಮೆ ಇದೆ' ಎಂದು ಕುಮಾರಸ್ವಾಮಿ ಹೇಳಿದ್ದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸುಮಲತಾ ''ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರ ಯಾವುದೇ ಪಾತ್ರ ಇಲ್ಲ. ಹಾಲಿ ಸಿಎಂ ಯಡಿಯೂರಪ್ಪ ಅವರು ಸಹಿ ಹಾಕಿ ಸ್ಮಾರಕ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು'' ಎಂದಿದ್ದಾರೆ.

    ಪತ್ರ ಮುಖಕ್ಕೆ ಎಸೆದು ಹೋಗಿದ್ದರು

    ಪತ್ರ ಮುಖಕ್ಕೆ ಎಸೆದು ಹೋಗಿದ್ದರು

    ''ಸ್ಮಾರಕ ನಿರ್ಮಾಣ ವಿನ್ಯಾಸದ ಕುರಿತು ಮನವಿ ಕೊಡಲು ಹಿರಿಯ ನಟ ದೊಡ್ಡಣ್ಣ, ಶಿವರಾಮಣ್ಣ ವಿಧಾನಸೌಧಕ್ಕೆ ಹೋದಾಗ, ಕುಮಾರಸ್ವಾಮಿ ಅವರು ಅಂಬರೀಶ್‌ ಬಗ್ಗೆ ಏಕವಚನದಲ್ಲಿ ಮಾತನಾಡಿ, ಮನವಿ ಪತ್ರವನ್ನು ಮುಖಕ್ಕೆ ಎಸೆದರು. ನಾನ್ ಏಕೆ ಅವನ ಸ್ಮಾರಕ ಮಾಡಬೇಕು, ಅವನೇನು ಮಾಡಿದ್ದಾನೆ ಎಂದು ಪ್ರಶ್ನಿಸಿದ್ದನ್ನು ಮರೆತಿರಬಹುದು'' ಎಂದು ಸುಮಲತಾ ಟೀಕಿಸಿದ್ದಾರೆ.

    ದೊಡ್ಡಣ್ಣ ಕಣ್ಣೀರು ಹಾಕಿದ್ದರು

    ದೊಡ್ಡಣ್ಣ ಕಣ್ಣೀರು ಹಾಕಿದ್ದರು

    ಈ ಘಟನೆ ಆದ್ಮೇಲೆ ಹಿರಿಯ ನಟ ದೊಡ್ಡಣ್ಣ ಅವರು ನನ್ನ ಬಳಿ ಕಣ್ಣೀರು ಹಾಕಿದ್ದರು. ನನ್ನ ಇಷ್ಟು ವರ್ಷದ ವೃತ್ತಿ ಬದುಕಿನಲ್ಲಿ ಇಂತಹ ಅವಮಾನ ಎಲ್ಲಿಯೂ ಆಗಿರಲಿಲ್ಲ. ಬಹಳ ಅವಮಾನ ಮಾಡಿದರು ಎಂದು ಅತ್ತಿದ್ದರು ಎನ್ನುವ ವಿಚಾರ ಸುಮಲತಾ ಬಹಿರಂಗಪಡಿಸಿದರು. ದೊಡ್ಡಣ್ಣ ಕಣ್ಣೀರು ಹಾಕಿದ್ದನ್ನು ರಾಕ್‌ಲೈನ್ ವೆಂಕಟೇಶ್ ಸಹ ಹೇಳಿದರು.

    ವಿಷ್ಣು ಸ್ಮಾರಕ ಗೊಂದಲ ಏಕೆ?

    ವಿಷ್ಣು ಸ್ಮಾರಕ ಗೊಂದಲ ಏಕೆ?

    ''ಅಂಬರೀಶ್ ಸ್ಮಾರಕಕ್ಕೂ ಮೊದಲೇ ವಿಷ್ಣುವರ್ಧನ್ ಸ್ಮಾರಕ ಕೆಲಸ ನಡೆಯುತ್ತಿದೆ. ಜಾಗದಲ್ಲಿ ಗೊಂದಲ ಇತ್ತು. ಆಮೇಲೆ ಕುಟುಂಬದವರ ಆಸೆಯಂತೆ ಮೈಸೂರಿನಲ್ಲಿ ಬಹಳ ದೊಡ್ಡದಾಗಿ ಆಗ್ತಿದೆ. ಅಂಬಿ ಸ್ಮಾರಕಕ್ಕೂ ಮೊದಲೇ ವಿಷ್ಣುವರ್ಧನ್ ಸ್ಮಾರಕ ರೆಡಿಯಾಗುವ ಸಾಧ್ಯತೆ ಇದೆ. ಇದರಲ್ಲಿ ಏಕೆ ಗೊಂದಲ ಸೃಷ್ಟಿಸುತ್ತಿದ್ದಾರೆ'' ಎಂದು ಸುಮಲತಾ ಪ್ರಶ್ನಿಸಿದ್ದಾರೆ.

    Recommended Video

    Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Filmibeat Kannada
    ಕುಮಾರಸ್ವಾಮಿ ಆರೋಪ ಏನಾಗಿತ್ತು?

    ಕುಮಾರಸ್ವಾಮಿ ಆರೋಪ ಏನಾಗಿತ್ತು?

    ''ಅಂಬರೀಶ್ ನಿಧನದ ಸಮಯದಲ್ಲಿ ಸುಮಲತಾ ಅವರು ಮಂಡ್ಯಗೆ ತೆಗೆದುಕೊಂಡು ಹೋಗುವುದು ಬೇಡ ಎಂದಿದ್ದರು. ಕೇಂದ್ರ ಸಚಿವರ ಬಳಿ ಒಪ್ಪಿಗೆ ತೆಗೆದುಕೊಂಡು ಹೋಗಿದ್ದು ನಾನು. ಅಂಬಿ ಸ್ಮಾರಕ ನಿರ್ಮಾಣದಲ್ಲೂ ನನ್ನ ದುಡಿಮೆ ಇದೆ'' ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

    English summary
    Mandya MP Sumalatha revealed HD Kumaraswamy reaction when asked about Ambareesh Memorial.
    Friday, July 9, 2021, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X