ಅಂಬಿಗೆ ಇದ್ದ ಕೊನೆಯ ಆಸೆ ಬಗ್ಗೆ ಹೇಳಿಕೊಂಡ ಸುಮಲತಾ

ನಟ ಅಂಬರೀಶ್ ಜೀವನವನ್ನು ಅದಷ್ಟೂ ಖುಷಿಯಾಗಿ ಕಳೆದವರು. ಜೀವನದ ಪ್ರತಿ ಕ್ಷಣ ಕೂಡ ನಗುತ್ತಿದ್ದ ಮನುಷ್ಯ. ಸುಮಲತಾ ಅವರೇ ಹೇಳುಬಂತೆ ಅಂಬರೀಶ್ ರಾಜನಾಗಿ ಬಂದು ರಾಜನಾಗಿಯೇ ಹೋದರು.

ಅಂಬರೀಶ್ ತಮ್ಮ ಎಲ್ಲ ಕನಸುಗಳನ್ನು ಎಲ್ಲ ಆಸೆಗಳನ್ನು ಪೂರೈಸಿಕೊಂಡಿದ್ದಾರೆ. ಸಿನಿಮಾ ನಾಯಕನಾಗಿ, ಜನ ನಾಯಕನಾಗಿ ಇದ್ದ ಅವರು ಬಳಿ ಎಲ್ಲವೂ ಇತ್ತು. ಅಭಿಮಾನಿಗಳ ಮತ್ತು ಕುಟುಂಬದವರ ಪ್ರೀತಿ ಅವರ ಜೀವನದ ದೊಡ್ಡ ಆಸೆಯಾಗಿತ್ತು.

ಹೀಗಿದ್ದರೂ, ಅಂಬರೀಶ್ ಅವರ ಬದುಕಿನ ಒಂದು ಆಸೆ ನೆರವೇರುವುದಕ್ಕೆ ಮುಂಚೆಯೇ ಅವರು ಈ ಲೋಕದಿಂದ ನಿರ್ಗಮಿಸಿದರು. ಹೌದು, ಅಂಬಿಯ ಈ ಒಂದು ಆಸೆ ಪೂರೈಸುವ ಮುನ್ನವೇ ವಿಧಿ ತನ್ನ ಆಟ ನಡೆದು ಹೋಗಿದೆ. ಮುಂದೆ ಓದಿ...

ಮಗನ ಸಿನಿಮಾ ನೋಡುವ ಆಸೆ

ಮಗನ ಸಿನಿಮಾ ನೋಡುವ ಆಸೆ

ಅಂಬರೀಶ್ ಅವರಿಗೆ ತಮ್ಮ ಮಗ ಅಭಿಷೇಕ್ ಮೊದಲ ಸಿನಿಮಾ ನೋಡುವ ಆಸೆ ಇತ್ತಂತೆ. ಈ ವಿಷಯವನ್ನು ಇಂದು ಸುಮಲತಾ ಹೇಳಿಕೊಂಡಿದ್ದಾರೆ. ಅಂಬಿ ನಿಧನನ ನಂತರ ಇಂದು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸುಮಲತಾ ಈ ಮಾತನ್ನು ಹಂಚಿಕೊಂಡಿದ್ದಾರೆ.

'ಅಮರ್' ಸಿನಿಮಾದ ಬಗ್ಗೆ ಕನಸು

'ಅಮರ್' ಸಿನಿಮಾದ ಬಗ್ಗೆ ಕನಸು

ಅಭಿಷೇಕ್ ಮೊದಲ ಸಿನಿಮಾ 'ಅಮರ್' ಬಗ್ಗೆ ಅಂಬಿ ನೂರಾರೂ ಕನಸು ಇಟ್ಟುಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆಯಷ್ಟೇ ಸಿನಿಮಾದ ಮುಹೂರ್ತ ನಡೆದಿದ್ದು, ಮುಹೂರ್ತ ಕಾರ್ಯಕ್ರಮವನ್ನು ಅಂಬಿ ಮುಂದೆ ನಿಂತು ಮಾಡಿದ್ದರು. ಆದರೆ, ಆ ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಅವರು ನಿಧನರಾದರು.

ಮಗನ ಮೇಲೆ ಆಶೀರ್ವಾದ ಇರಲಿ

ಮಗನ ಮೇಲೆ ಆಶೀರ್ವಾದ ಇರಲಿ

ಅಂಬಿ ನಿಧನ ಬಳಿಕ ಮೊದಲ ಬಾರಿಗೆ ಸುಮಲತಾ ಮಾತನಾಡಿದರು. ''ಅವರಿಗೆ ಮಗನ ಸಿನಿಮಾ ನೋಡಬೇಕು ಎಂಬ ಆಸೆ ಇತ್ತು. ಅವರ ಮಗ ಅಭಿಷೇಕ್ ಮೇಲೆ ಕೂಡ ನಿಮ್ಮ ಆಶೀರ್ವಾದ ಇರಲಿ.'' ಎಂದು ಅಭಿಮಾನಿಗಳಿಗೆ ನಮಸ್ಕಾರ ಮಾಡಿದರು.

'ಅಮರ್' ಚಿತ್ರದ ಬಗ್ಗೆ

'ಅಮರ್' ಚಿತ್ರದ ಬಗ್ಗೆ

'ಅಮರ್' ಸಿನಿಮಾದ ಮೂಲಕ ಅಭಿಷೇಕ್ ಅಂಬರೀಶ್ ಚಿತ್ರರಂಗಕ್ಕೆ ಲಾಂಚ್ ಆಗುತ್ತಿದ್ದಾರೆ. ಈ ಸಿನಿಮಾವನ್ನು ಅಂಬಿ ಆಪ್ತ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಹೆಗಲ ಮೇಲೆ ನಿರ್ದೇಶನದ ಜವಾಬ್ದಾರಿ ಇದೆ. ಅಭಿಷೇಕ್ ಇಲ್ಲಿ ಬೈಕ್ ರೇಸರ್ ಪಾತ್ರ ಮಾಡುತ್ತಿದ್ದಾರೆ.

ಈ ಸಿನಿಮಾಗಳನ್ನು ನೋಡಬೇಕಿತ್ತು

ಈ ಸಿನಿಮಾಗಳನ್ನು ನೋಡಬೇಕಿತ್ತು

'ಅಮರ್' ಜೊತೆಗೆ 'ಕುರುಕ್ಷೇತ್ರ' ಹಾಗೂ 'ಕೆ ಜಿ ಎಫ್' ಸಿನಿಮಾವನ್ನು ಅಂಬರೀಶ್ ನೋಡಬೇಕಿತ್ತು. 'ಕುರುಕ್ಷೇತ್ರ' ಸಿನಿಮಾದಲ್ಲಿ ಬೀಷ್ಮನ ಪಾತ್ರ ಮಾಡಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಇತ್ತು. 'ಕೆ ಜಿ ಎಫ್' ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ್ದ ಅಂಬಿ ಆ ಸಿನಿಮಾ ಬರುವ ಮೊದಲೇ ವಿಧಿವಶರಾದರು.

More from Filmibeat

English summary
Actress Sumalatha's shared his husband Ambareesh's last desire. Actor Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X