ಮಂಡ್ಯದಲ್ಲಿ ಸುಮಲತಾ ಭಾಷಣ: ಕೇಬಲ್ ಕಟ್ ಮಾಡಿಸಿದ್ದು ಯಾರಣ್ಣ?
Recommended Video

ನಟಿ ಸುಮಲತಾ ಅಂಬರೀಶ್ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಜನಸಾಗರವೇ ಹರಿದು ಬಂದಿತ್ತು. ನಟರಾದ ದರ್ಶನ್, ಯಶ್, ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುಮಲತಾ ಜೊತೆಯೇ ನಿಂತು ಬೆಂಬಲ ನೀಡಿದರು.
ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್ ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಸುಮಲತಾ ಮಾತನಾಡಿದರು. ಆದರೆ ಈ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ಕರೆಂಟ್ ಇರಲಿಲ್ಲವಂತೆ. ಸುಮಕ್ಕನ ಪರ ನಿಂತ ಜನಸಾಗರ ನೋಡಿ ಭಯ ಬಿದ್ದು ಯಾರೊ ಕೇಬಲ್ ಕಟ್ ಮಾಡಿಸಿದ್ದಾರೆ ಅಂತ ಹೇಳಲಾಗಿತ್ತು. ಈ ಮಾತನ್ನು ವೇದಿಕೆ ಮೇಲಿದ್ದ ಸುಮಲತಾ ಕೂಡ ಹೇಳಿದರು.
ಒಂದೇ ವೇದಿಕೆಯಲ್ಲಿ ಚಿತ್ರರಂಗದ ಘಟಾನುಘಟಿಗಳು ಕುಳಿತಿರುವುದನ್ನು, ಸುಮಲತಾ ಪರ ದೊಡ್ಡ ಮಟ್ಟದಲ್ಲಿ ಜನ ಸೇರಿರುವ ಕಾರ್ಯಕ್ರವನ್ನು ವಾಹಿನಿ ಮೂಲಕ ಜನರು ನೋಡಬಾರದು ಎನ್ನುವುದು ಕೆಲವರ ಪ್ಲಾನ್ ಆಗಿತ್ತು. ಅದೇ ಕಾರಣಕ್ಕೆ ಕೇಬಲ್ ಕಟ್ ಮಾಡಲಾಗಿತಂತೆ.

ಇನ್ನು ಈ ಬಗ್ಗೆ ಮಾತನಾಡಿದ ಸುಮಲತಾ, ''ಇಂದು ಮಂಡ್ಯದಲ್ಲಿ ಕೇಬಲ್ ಕಟ್ ಮಾಡಿದ್ದಾರೆ. ಆದರೆ ಜನರ ಪ್ರೀತಿಯನ್ನು ಕಡಿದು ಹಾಕಲು ಸಾಧ್ಯವಿಲ್ಲ'' ಎಂದು ತಿರುಗೇಟು ನೀಡಿದರು.


Click it and Unblock the Notifications











