For Quick Alerts
  ALLOW NOTIFICATIONS  
  For Daily Alerts

  ನಾಡಿನ ಸಮಸ್ತ ಜನತೆಗೆ ಪತ್ರದ ಮೂಲಕ ಧನ್ಯವಾದ ತಿಳಿಸಿದ ಸುಮಲತಾ-ಅಭಿ

  |
  Ambareesh ; ಒಳ್ಳೆಯ ಮಗ, ಗಂಡ, ನಾಯಕ, ಅಪ್ಪ ಎಲ್ಲದಕ್ಕಿನ್ನ ಮುಖ್ಯವಾಗಿ ಒಬ್ಬ ಒಳ್ಳೆಯ ಮನುಷ್ಯ..!

  ''ಈ ಅತ್ಯಂತ ಕಷ್ಟದ ಮತ್ತು ದುಃಖದ ಹೊತ್ತಿನಲ್ಲಿ ನನ್ನನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ನಾನು ಈ ಮೂಲಕ ಧನ್ಯವಾದವನ್ನು ತಿಳಿಸುತ್ತೇನೆ. ನಿಮ್ಮ ಸಾಂತ್ವನದ ಮಾತುಗಳು ಮತ್ತು ನಿಮ್ಮ ಪ್ರೀತಿಯ ನಡೆಗಳು ಈ ಸಂಕಷ್ಟದ ಹೊತ್ತಿನಲ್ಲಿ ನಮಗೆ ಶಕ್ತಿ ತುಂಬಿದವು'' ಹೀಗೆಂದು ಮಾತು ಆರಂಭಿಸಿದ ಸುಮಲತಾ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

  'ಇದ್ದಾಗ ರಾಜನಂತೆ ಬಾಳಿದರು, ಹೋಗುವಾಗಲು ರಾಜನಂತೆ ಕಳುಹಿಸಿಕೊಟ್ಟಿದ್ದೀರಾ' ಎಂದು ಸುಮಲತಾ ಭಾವನಾತ್ಮಕವಾಗಿ ಮಾತನಾಡಿದ್ದರು. ಅಂಬಿ ಇಲ್ಲ ಎಂಬ ನೋವು ಸುಮ ಅವರನ್ನ ಕಾಡುತ್ತಿದ್ದರೂ, ನಾಡಿನ ಜನತೆ, ಸರ್ಕಾರ, ಅದರಲ್ಲೂ ಮಂಡ್ಯ ಜನರು ನೀಡಿದ ಪ್ರೀತಿಗೆ ಚಿರಋಣಿ ಎಂದಿದ್ದಾರೆ.

  ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ

  ಈ ಬಗ್ಗೆ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ, ಅಂಬರೀಶ್ ಪತ್ನಿ ಎಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ. ಸುಮಲತಾ ಬರೆದಿರುವ ಪೂರ್ತಿ ಪತ್ರ ಓದಿ...

  ನಿಮ್ಮ ಪ್ರೀತಿಗೆ ನಾನು, ಅಭಿ ಚಿರಋಣಿ

  ನಿಮ್ಮ ಪ್ರೀತಿಗೆ ನಾನು, ಅಭಿ ಚಿರಋಣಿ

  ''ನಾನು, ಅಭಿಷೇಕ್ ಮತ್ತು ಅಂಬರೀಶ್ ಇಡೀ ಕುಟುಂಬವು ಕರ್ನಾಟಕದ ಜನತೆಗೆ ಸದಾ ಕಾಲ ಅಭಾರಿಯಾಗಿರುತ್ತೇವೆ. ವಿಶೇಷವಾಗಿ ಅಂಬರೀಶ್ ಅವರನ್ನು ತಮ್ಮ ರಾಜನಂತೆ ಗೌರವರಿಸಿ ಅತ್ಯಂತ ಪ್ರೀತಿಯಿಂದ ಕಳಿಸಿಕೊಟ್ಟ ಮಂಡ್ಯದ ಅಭಿಮಾನಿಗಳು ಮತ್ತು ಎಲ್ಲ ಅಭಿಮಾನಿಗಳಿಗೆ ನಾವುಗಳು ಯಾವಾಗಲು ಚಿರಋಣಿ''

  ಅಂಬರೀಶ್ ಬಲಗೈ ಬಂಟ ಸೀನಣ್ಣ ಬಿಚ್ಚಿಟ್ಟ ಅಪರೂಪದ ಸಂಗತಿಗಳುಅಂಬರೀಶ್ ಬಲಗೈ ಬಂಟ ಸೀನಣ್ಣ ಬಿಚ್ಚಿಟ್ಟ ಅಪರೂಪದ ಸಂಗತಿಗಳು

  ಸಿಎಂ ಮತ್ತು ಸರ್ಕಾರಕ್ಕೆ ಧನ್ಯವಾದ

  ಸಿಎಂ ಮತ್ತು ಸರ್ಕಾರಕ್ಕೆ ಧನ್ಯವಾದ

  ಅಂತ್ಯಕ್ರಿಯೆಗೆ ಬೇಕಾದ ಎಲ್ಲ ವ್ಯವಸ್ತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಡುವುದರ ಜೊತೆಗೆ ಅಂಬರೀಶ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಮಂಡ್ಯದ ಸಂಸದ ಸಿ ಎಸ್ ಪುಟ್ಟರಾಜು ಅವರಿಗೂ, ಇನ್ನಿತರ ಶಾಸಕರು ಮತ್ತು ಸಂಸದರಿಗೂ, ಕರ್ನಾಟಕ ಸರ್ಕಾರಕ್ಕೂ ನಾನು ಈ ಮೂಲಕ ಅಭಿನಂದನೆ ತಿಳಿಸುತ್ತೇನೆ.

  ಪೊಲೀಸ್ ಇಲಾಖೆಗೆ ಥ್ಯಾಂಕ್ಸ್

  ಪೊಲೀಸ್ ಇಲಾಖೆಗೆ ಥ್ಯಾಂಕ್ಸ್

  ''ಮೂರು ದಿನಗಳ ಕಾಲ ಸತತವಾಗಿ ಶ್ರಮವಹಿಸಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡ ಪೋಲಿಸ್ ಇಲಾಖೆಯವರಿಗೂ, ಅರ್ ಎ ಎಫ್ ಸಿಬ್ಬಂದಿಯವರಿಗೂ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಅಧಿಕಾರಿ ವರ್ಗದವರಗೂ ನಾನು ಈ ಮೂಲಕ ಅಭಿನಂದನೆ ತಿಳಿಸಲು ಇಚ್ಚಿಸುತ್ತೇನೆ''

  ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್

  ಮಂಡ್ಯದ ಜನತೆಗೆ ಧನ್ಯವಾದ

  ಮಂಡ್ಯದ ಜನತೆಗೆ ಧನ್ಯವಾದ

  ''ಅಂಬರೀಶ್ ಅವರು ಮೇಲೆ ಸದಾ ಕಾಲ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿದ ಮಂಡ್ಯ ಜನತೆಯ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಅವರು ಬದುಕಿದ್ದಾಗ ಹೇಗೆ ಪ್ರೀತಿ ಅಭಿಮಾನ ತೋರಿಸಿದರೋ ಹಾಗೆಯೇ ಅವರು ಸತ್ತ ನಂತರವು ಪ್ರೀತಿ ಅಭಿಮಾನಕ್ಕೆ ಯಾವುದೇ ಕೊರತೆಯಾಗದಂತೆ ನಡೆದುಕೊಂಡ ಮಂಡ್ಯದ ಜನತೆಗೆ ನಾನು ಸದಾ ಅಭಾರಿ''

  ಅಂಬರೀಶ್ ಅದೃಷ್ಟ ಮಾಡಿದ್ದರು

  ಅಂಬರೀಶ್ ಅದೃಷ್ಟ ಮಾಡಿದ್ದರು

  ''ಅವರೊಬ್ಬ ನಟ, ಕೇಂದ್ರದ ಮಂತ್ರಿ, ರಾಜ್ಯದ ಮಂತ್ರಿ, ಒಬ್ಬ ಸೂಪರ್ ಸ್ಟಾರ್, ಎಲ್ಲರಿಗೂ ಒಬ್ಬ ಒಳ್ಳೆಯ ಗೆಳೆಯರಾಗಿದ್ದರು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ಅವರಿಗೆ ದೊಡ್ಡ ಕಳಶದಂತೆ. ಅಂಬರೀಶ್ ಅವರು ನಮ್ಮ ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅವರಿಗೊಂದು ಅದೃಷ್ಟ. ಹಾಗೆಯೇ ಮಂಡ್ಯದ ಮಣ್ಣಿನ ಮಗ ಎನಿಸಿಕೊಳ್ಳಲು ಅಷ್ಟೇ ಅದೃಷ್ಟ ಮಾಡಿದ್ದರು''

  ಅಂಬಿ-ನಿಖಿಲ್ ಸಿನಿಮಾ ಆಗಬೇಕಿತ್ತು: ಆಗಲಿಲ್ಲ ಎಂಬ ನೋವು ಕಾಡ್ತಿದೆ.!ಅಂಬಿ-ನಿಖಿಲ್ ಸಿನಿಮಾ ಆಗಬೇಕಿತ್ತು: ಆಗಲಿಲ್ಲ ಎಂಬ ನೋವು ಕಾಡ್ತಿದೆ.!

  English summary
  Sumalatha ambareesh has taken her twitter account to said thanks to Government and People.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X