twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ: ಸಂಸದೆ ಸುಮಲತಾ ಖಂಡನೆ

    |

    ಮಂಡ್ಯದ ಮದ್ದೂರಿನ ತಾಲೂಕಿನಲ್ಲಿ ಹುರುಗಲವಾಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    Recommended Video

    ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

    ಈ ಘಟನೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ''ಈ ಕೃತ್ಯ ನನಗೆ ಸಹಿಸಲಾಗದ ನೋವು ಹಾಗೂ ಆಘಾತ ತಂದಿದೆ'' ಎಂದು ಮರುಗಿದ್ದಾರೆ. ''ಒಂದು ಹೆಣ್ಣಾಗಿ ಹಾಗೂ ಒಬ್ಬ ತಾಯಿಯಾಗಿ ಹುರುಗಲವಾಡಿಯ ಅಮಾನವೀಯ ಕೃತ್ಯ ನನಗೆ ಸಹಿಸಲಾಗದ ನೋವು ಹಾಗೂ ಆಘಾತ ತಂದಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ''ಆ ಮಗಳ ಪೋಷಕರಿಗೆ ಸಾಂತ್ವಾನ ಹಾಗೂ ಪರಿಹಾರ ಕೇವಲ ಒಂದು ಔಪಚಾರಿಕ ಕೆಲಸವಾಗಬಾರದು. ಇಂತಃ ಘಟನೆಗಳು ಮತ್ತೆ ನಡೆಯದಂತೆ ಏನು ಕ್ರಮ ಕೈಗೊಳ್ಳಬಹುದೆಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ.'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

    ಕಠಿಣ ಶಿಕ್ಷೆಯ ಮೂಲಕ ಎಚ್ಚರಿಕೆ ಸಂದೇಶ ನೀಡಬೇಕು

    ಕಠಿಣ ಶಿಕ್ಷೆಯ ಮೂಲಕ ಎಚ್ಚರಿಕೆ ಸಂದೇಶ ನೀಡಬೇಕು

    ಈ ಘಟನೆ ಬಗ್ಗೆ ಸುದೀಪ್ ಟ್ವಿಟ್ಟರ್ ಮೂಲಕ ಖಂಡಿಸಿದ್ದು ''ಈ ಕೇಸ್‌ನಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಭಾವಿಸಿದ್ದೇನೆ. ಈ ಮೂಲಕ ಅತ್ಯಾಚಾರಿಗಳಿಗೆ ಭಯಾನಕ ಸಂದೇಶ ರವಾನೆಯಾಗಲಿದೆ'' ಎಂದಿದ್ದಾರೆ.

    ಮಂಡ್ಯ ಕಬ್ಬಿನ ಗದ್ದೆಯಲ್ಲಿ ಬಾಲಕಿ ಸಾವು: ನ್ಯಾಯಕ್ಕೆ ಒತ್ತಾಯಿಸಿದ ಸುದೀಪ್ಮಂಡ್ಯ ಕಬ್ಬಿನ ಗದ್ದೆಯಲ್ಲಿ ಬಾಲಕಿ ಸಾವು: ನ್ಯಾಯಕ್ಕೆ ಒತ್ತಾಯಿಸಿದ ಸುದೀಪ್

    ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲ

    ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲ

    ''ಮಂಡ್ಯ ಜಿಲ್ಲೆ, ಮದ್ದೂರ್ ತಾಲುಕು, "ಆರತಿ" ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ ಅಸಹ್ಯವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ, ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರು ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು, ಈ ಭೂಮಿಯ ದುರಂತ'' ಎಂದು ನಟ ಸತೀಶ್ ನೀನಾಸಂ ಆಕ್ರೋಶ ಹೊರಹಾಕಿದ್ದಾರೆ.

    ಘಟನೆಯ ವಿವರ

    ಘಟನೆಯ ವಿವರ

    ಮದ್ದೂರಿನ ಹುರುಗಲ ವಾಡಿ ಗ್ರಾಮದ ರೈತ ಚೆಲುವರಾಜ್ ಅವರ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮೂಲದ ಬಾಲಕಿ ಗದ್ದೆಯಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದಳು. ಈ ವೇಳೆ ಆಕೆಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

    ನ್ಯಾಯಕ್ಕಾಗಿ ಗ್ರಾಮಸ್ಥರಿಂದ ಪ್ರತಿಭಟನೆ

    ನ್ಯಾಯಕ್ಕಾಗಿ ಗ್ರಾಮಸ್ಥರಿಂದ ಪ್ರತಿಭಟನೆ

    ಮೃತ ಬಾಲಕಿಯ ದೇಹವನ್ನು ಅಂತ್ಯ ಸಂಸ್ಕಾರಕ್ಕೆಂದು ಹೊಸಪೇಟೆಯ ಮೂಲ ಊರಿಗೆ ತೆಗೆದುಕೊಂಡು ಹೋದಾಗ ಗ್ರಾಮಸ್ಥರು ಬಾಲಕಿ ಶವವನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಡಿಸಿ ನಕುಲ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.

    English summary
    Mandya MP, Actress Sumalatha tweet about mandya girl rape incident.
    Saturday, December 5, 2020, 10:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X