ಸುಮಲತಾ ವೋಟ್ ಕಸಿದ್ರಾ ಮೂವರು ಸುಮಲತಾಗಳು?
ಈ ಭಾರಿಯ ಲೋಕಸಾಭ ಚುನಾವಣೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಕ್ಷೇತ್ರ ಮಂಡ್ಯ. ಸ್ವತಂತ್ರ ಅಭ್ಯರ್ಥಿ ಸುಮಲತಾ ಆರಂಭಿಕ ಮುನ್ನಡೆ ಕಂಡರು ನಂತರ ನಿಖಿಲ್ ಕುಮಾರ ಸ್ವಾಮಿ 2 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಆದ್ರೀಗ ಸುಮಲತಾ ಮತ್ತೆ ಮುನ್ನಡೆ ಸಾಧಿಸಿದ್ದಾರೆ.
ಇಬ್ಬರ ನಡುವೆ ತೀರಾ ಪೈಪೋಟಿ ಏರ್ಪಟ್ಟಿದೆ. ಮೊದಲ ಸುಮಲತಾ ಲೀಡ್ ನಲ್ಲಿ ಇದ್ದು ನಂತರ ಮತ್ತೆ ನಿಖಿಲ್ ಮುಂದೆ ಇದ್ದರು ಆದ್ರೀಗ ಸುಮಲತಾ ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದ್ರೆ ದುರಂತ ಅಂದ್ರೆ ಸಮಲತಾ ಹಿನ್ನಡೆಗೆ ಕಾರಣವಾಗಿದ್ದು ಮೂವರು ಸುಮಲತಾಗಳು ಎಂದು ಹೇಳಲಾಗುತ್ತಿದೆ.
ಸುಮಲತಾ ಪಾಲಿನ ವೋಟ್ ಮೂವರು ಸಮಲತಾ ಪಾಲಾಗಿರುವ ಸಾಧ್ಯತೆ ಇದೆ. ಕೆಲವೆ ಅಂತರಗಳ ನಡುವೆ ನಿಖಿಲ್ ಮತ್ತು ಸುಮಲತಾ ನಡುವೆ ಪೈಪೋಟಿ ನಡೆಯುತ್ತಿದೆ. ಬೆಳಗ್ಗೆಯಿಂದ ಮುನ್ನಡೆ ಕಾಯ್ದುಕೊಂಡಿದ್ದ ನಿಖಿಲ್ ಗೆ ಈಗ ಹಿನ್ನಡೆಯಾಗಿದೆ. 1300 ಮತಗಳ ಅಂತರದಲ್ಲಿ ಸುಮಲತಾ ಮತ್ತೆ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ ಕ್ಷೇತ್ರ ಇದಾಗಿತ್ತು. ನಿಖಿಲ್ ಮತ್ತು ಸುಮಲತಾ ನಡುವೆ ಕೆಲವೇ ಕೆಲವು ಮತಗಳ ಅಂತರವಿದೆ. ಹಾಗಾಗಿ ಕೊನೆಯದಾಗಿ ಗೆಲುವಿನ ಮಾಲೆ ಯಾರಿಗೆ ಬೀಳುತ್ತೆ ಎನ್ನುವುದು ಕೆಲವೆ ಸಮಯದಲ್ಲಿ ಬಹಿರಂಗವಾಗಲಿದೆ.


Click it and Unblock the Notifications











