'ಕುರುಕ್ಷೇತ್ರ' ಚಿತ್ರ ನೋಡಿ ಸುಮಲತಾ, ದರ್ಶನ್ ಬಗ್ಗೆ ಹೇಳಿದ್ದು ಹೀಗೆ

Recommended Video

Kurukshetra Movie : ಕುರುಕ್ಷೇತ್ರ ಸಿನಿಮಾ ನೋಡಿದ ನಂತರ ದರ್ಶನ್ ಬಗ್ಗೆ ಸುಮಲತಾ ಹೇಳಿದ್ದೇನು?

ಕನ್ನಡ ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿದ್ದ ಕುರುಕ್ಷೇತ್ರ ಇಂದು ರಿಲೀಸ್ ಆಗಿದೆ. ಮಧ್ಯ ರಾತ್ರಿಯಿಂದನೆ ಕುರುಕ್ಷೇತ್ರ ಪ್ರದರ್ಶನವಾಗುತ್ತಿದ್ದು ಅಭಿಮಾನಿಗಳು ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದಾರೆ. ಡಿ ಬಾಸ್ ದುರ್ಯೋಧನನ ಅಭಿನಯಕ್ಕೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.

ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿರುವ ಕುರುಕ್ಷೇತ್ರ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಈಗಾಗಲೆ ಬೆಂಗಳೂರಿನ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಚಿತ್ರತಂಡ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು.

ನಿನ್ನೆ ರಾತ್ರಿ ಏರ್ಪಡಿಸಿದ್ದ ಪ್ರೀಮಿಯರ್ ಶೋನಲ್ಲಿ ನಟಿ ಮತ್ತು ಸಂಸದೆ ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಅನೇಕರು ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿ ಹೊರಬಂದ ಸುಮಲತಾ, ದರ್ಶನ್ ಅಭಿನಯವನ್ನು ಹಾಡಿಹೊಗಳಿದ್ದಾರೆ.

ಬರಿ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್

ಬರಿ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್

"ನನಗೆ ಇವತ್ತು ತುಂಬಾ ಹೆಮ್ಮೆ ಎನಿಸುತ್ತಿದೆ. ನನ್ನ ಮಗ ದರ್ಶನ್ ಅವರ ಕ್ಯಾಲಿಬರ್ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬರಿ ಡಿ ಬಾಸ್ ಅಲ್ಲ. ದುರ್ಯೋಧನ ಬಾಸ್ ಇವತ್ತಿಂದ" ಎಂದು ಹೇಳಿದ್ದಾರೆ. "ಮಹಾಭಾರತ ಎನ್ನುವುದು ನಮ್ಮ ಜನ್ಮದಲ್ಲೆ ಇರುವ ಕಥೆ. ಹಾಗಾಗೆ ಎಷ್ಟು ಭಾರಿ ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ. ಕನ್ನಡದಲ್ಲಿ ಕುರುಕ್ಷೇತ್ರ ನೋಡುವುದೆ ಒಂದು ಅದೃಷ್ಟ" ಎಂದು ಸುಮಲತಾ ಹೇಳಿದ್ದಾರೆ.

ದರ್ಶನ್ ಗೆ ಮೈಲ್ ಸ್ಟೋನ್ ಸಿನಿಮಾ

ದರ್ಶನ್ ಗೆ ಮೈಲ್ ಸ್ಟೋನ್ ಸಿನಿಮಾ

"ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ದರ್ಶನ್ ಗೆ ಮತ್ತೊಂದು ಲ್ಯಾಂಡ್ ಮಾರ್ಕ್ ಮತ್ತು ಮೈಲ್ ಸ್ಟೋನ್ ಸಿನಿಮಾ. ದುರ್ಯೋದನ ಅಂದ್ರೆ ದರ್ಶನ್ ಅಂದ್ರೆ ದುರ್ಯೋದನ ಅನ್ನುವಷ್ಟು ಪರ್ಫೆಕ್ಟ್. ಎಕ್ಸ್ ಪ್ರೆಶನ್, ವಾಕ್, ಡೈಲಾಗ್ ಡೆಲೆವರಿ ಪ್ರತಿಯೊಂದು ಅದ್ಭುತವಾಗಿ ಅಭಿನಯಿಸಿದ್ದಾರೆ. ತುಂಬಾ ಖುಷಿಯಾಗುತ್ತೆ. ಕರ್ನಾಟಕ ಪ್ರೇಕ್ಷಕರು ನೂರು ವರ್ಷ ನೆನಪಿಸಿಕೊಳ್ಳುವಂತಹ ಸಿನಿಮಾ" ಎಂದು ದರ್ಶನ್ ನನ್ನು ಹಾಡಿಹೊಗಳಿದ್ದಾರೆ ಸುಮಲತಾ.

ಕುರುಕ್ಷೇತ್ರ ನನಗೆ ಭಾವನಾತ್ಮಕ ಅನುಭವ

ಕುರುಕ್ಷೇತ್ರ ನನಗೆ ಭಾವನಾತ್ಮಕ ಅನುಭವ

ಕುರುಕ್ಷೇತ್ರ ನನಗೆ ಭಾವನಾತ್ಮಕ ಸಿನಿಮಾ. ಅಂಬರೀಶ್ ಅವರನ್ನು ಕೊನೆ ಬಾರಿಗೆ ಸ್ಕ್ರೀನ್ ನಲ್ಲಿ ನೋಡುವಂತಹ ಅವಕಾಶ ಇದು. ಅಂಬರೀಶ್ ಅವರನ್ನು ಈ ಸಿನಿಮಾ ಅಭಿನಯಿಸುವಂತೆ ವಲವಂತ ಮಾಡಿದ್ರು ಮುನಿರತ್ನ. ಅಭಿನಯಿಸಲ್ಲ ಎಂದು ಹಠ ಮಾಡಿದ್ರು ಬಿಡದೆ ಅವರಿಗೆ ಬಣ್ಣ ಹಚ್ಚಿಸಿದ್ದಾರೆ. ಇದರಿಂದ ಕೊನೆಯ ಬಾರಿ ಅವರನ್ನು ನೋಡುವ ಅವಕಾಶ ಸಿಕ್ತು" ಎಂದು ಅಂಬರೀಶ್ ನೆನೆದು ಭಾವುಕರಾಗಿದ್ದಾರೆ.

ನಿಖಿಲ್ ಅಭಿನಯ ಅದ್ಭುತ

ನಿಖಿಲ್ ಅಭಿನಯ ಅದ್ಭುತ

ಅರ್ಜುನ್ ಸರ್ಜಾ ಅವರ ನಟನೆ ಹಾರ್ಟ್ ಟಚ್ಚಿಂಗ್ ಆಗಿದೆ. ಅದ್ಭುತವಾಗಿ ಅಭಿನಯಿಸಿದ್ದಾರೆ. ನಿಖಿಲ್ ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ತುಂಬಾ ದೊಡ್ಡ ಸ್ಟಾರ್ ಕಾಸ್ಟ್ ಇದೆ. ರವಿಚಂದ್ರನ್ ಅವರ ಕೃಷ್ಣನ ಪಾತ್ರ ಕೂಡ ಚೆನ್ನಾಗಿದೆ. ಎಲ್ಲರಿಗೂ ಕೂಡ ಹೇಗೆ ಸೂಟ್ ಆಗಬಹುದು ಅಂತಾನೆ ಇತ್ತು. ಆದ್ರೆ ಅದ್ಭುತವಾಗಿದೆ. ಇನ್ನು ಚಿತ್ರದ ಡೈಲಾಗ್ ಚಿತ್ರದ ಮತ್ತೊಂದು ಹೀರ" ಎಂದು ಕುರುಕ್ಷೇತ್ರ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ

More from Filmibeat

English summary
Actress and MP Sumalatha watched Kurukshetra and appreciate Darshan acting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X