ಚಿತ್ರರಂಗದಿಂದ ಯಾರ್ ಯಾರು ಬರ್ತಾರಂತಾ ಮಾರ್ಚ್ 18ಕ್ಕೆ ನೋಡಿ

By ಯಶಸ್ವಿನಿ ಎಂಕೆ

Recommended Video

ಅಧಿಕೃತವಾಗಿ ಅಖಾಡಕ್ಕೆ ಇಳಿದ ಅಭಿಷೇಕ್ ಅಂಬರೀಷ್..? | Oneindia Kannada

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧಿಸುವುದು ಬಹುತೇಕ ಖಚಿತ. ಆದ್ರೆ, ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ, ಸುಮಲತಾ ಪರ ಸಿನಿಮಾ ಇಂಡಸ್ಟ್ರಿಯ ಯಾವೆಲ್ಲಾ ಕಲಾವಿದರು ಪ್ರಚಾರಕ್ಕೆ ಬರ್ತಾರೆ ಎಂಬುದು ಸದ್ಯದ ಕುತೂಹಲ.

ಈ ಕುತೂಹಲಕ್ಕೆ ಸುಮಲತಾ ಅವರ ಬಳಿ ಸದ್ಯಕ್ಕೆ ಉತ್ತರವಿಲ್ಲ. ಮಾರ್ಚ್ 18ಕ್ಕೆ ಕಾದುನೋಡಿ ಎಂದು ಅಂಬರೀಶ್ ಪತ್ನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗಾಗಿ, ಮಾರ್ಚ್ 18ರಂದು ಏನಾಗಲಿದೆ ಎಂಬುದು ಎಲ್ಲರ ಗಮನ ಮಂಡ್ಯ ಕಡೆ ಬಿದ್ದಿದೆ.

ಮಾರ್ಚ್ 18ಕ್ಕೆ ಸುಮಲತಾ ಸುದ್ದಿಗೋಷ್ಠಿ ಮಾಡಲಿದ್ದು, ಆ ದಿನ ಸ್ಯಾಂಡಲ್ ವುಡ್ ಇಂಡಸ್ಟ್ರಿಯಿಂದ ಯಾರು ಬೆಂಬಲಿಸಲಿದ್ದಾರೆ ಎಂಬುದು ಅಧಿಕೃತವಾಗಿ ಘೋಷಿಸಲಿದ್ದಾರಂತೆ. ಈ ಬಗ್ಗೆ ಮಳವಳ್ಳಿಯಲ್ಲಿ ಸುಮಲತಾ ಹೇಳಿದ್ದಾರೆ. ಹಾಗಿದ್ರೆ, ಈ ದಿನ ಸುಮಲತಾ ಅವರ ಪ್ರಚಾರ ಹೇಗಿತ್ತು? ಮುಂದೆ ಓದಿ....

ದ್ವೇಷ, ಮೋಸ, ಜಾತಿ ರಾಜಕಾರಣ ಬೇಡ

ದ್ವೇಷ, ಮೋಸ, ಜಾತಿ ರಾಜಕಾರಣ ಬೇಡ

ಮಳ್ಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ದ್ವೇಷ, ಮೋಸ, ಜಾತಿ ರಾಜಕಾರಣದಿಂದ ಜನತೆ ಬೇಸತ್ತಿದ್ದಾರೆ. ಒಳ್ಳೆಯತನದಿಂದ ರಾಜಕೀಯ ಸಾಬೀತುಪಡಿಸಬೇಕಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದೇನೆ ಎಂದು ಸುಮಲತಾ ತಿಳಿಸಿದ್ದಾರೆ.

ಮಂಡ್ಯ ಜನಕ್ಕೆ ಅಂಬರೀಶ್ ಮೇಲೆ ವಿಶೇಷ ಪ್ರೀತಿ

ಮಂಡ್ಯ ಜನಕ್ಕೆ ಅಂಬರೀಶ್ ಮೇಲೆ ವಿಶೇಷ ಪ್ರೀತಿ

ಇನ್ನು ತಮಗೆ ಮಂಡ್ಯ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿರುವುದಕ್ಕೆ ಸುಮಲತಾ ಸಂತಸ ವ್ಯಕ್ತಪಡಿಸಿದರು. ತಮಗೆ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅಭಿಷೇಕ್ ಇಂದಿನಿಂದ ಪ್ರಚಾರಕ್ಕೆ ಇಳಿದಿದ್ದಾರೆ. ನಮ್ಮ ಮಾವನ ಹೆಸರೇ ಮಳವಳ್ಳಿ ಹುಚ್ಚೇಗೌಡ. ಅಂಬರೀಷ್ ಚಿಕ್ಕ ವಯಸ್ಸಿನಲ್ಲಿ ಇಲ್ಲಿಯೇ ಹಲವಾರು ವರ್ಷಗಳ ಕಾಲ ಇದ್ದರು. ಹಾಗಾಗಿ ಇಲ್ಲಿನ ಜನರಿಗೆ ಅಂಬರೀಷ್ ಮೇಲೆ ವಿಶೇಷ ಪ್ರೀತಿ ಎಂದರು.

ಮಾರ್ಚ್ 18ಕ್ಕೆ ನನ್ನ ನಿರ್ಧಾರ ಘೋಷಣೆ

ಮಾರ್ಚ್ 18ಕ್ಕೆ ನನ್ನ ನಿರ್ಧಾರ ಘೋಷಣೆ

ಇದೇ ವೇಳೆ, ದಕ್ಷಿಣ ಭಾರತದ ಚಿತ್ರನಟರು ಹೈಕಮಾಂಡ್ ಬಳಿ ಸುಮಲತಾರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ ಬಗ್ಗೆ ಪ್ರಸ್ತಾಪಿಸಿದ ಸುಮಲತಾ, ಈ ಬಗ್ಗೆ ನನಗೆ ಯಾರಿಂದಲೂ ಮಾಹಿತಿ ಬಂದಿಲ್ಲ. ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರಲ್ಲದೇ, ನಾನು ನನ್ನ ಸ್ಪರ್ಧೆ ವಿಚಾರವನ್ನು ಮಾರ್ಚ್ 18 ರಂದು ತಿಳಿಸುತ್ತೇನೆ. ಪ್ರಚಾರಕ್ಕೆ ಸ್ಯಾಂಡಲ್ ವುಡ್ ನಟರು ಬರುವುದು ನಂತರ ಗೊತ್ತಾಗುತ್ತದೆ ಎಂದರು.

ನನ್ನ ತಂದೆ-ತಾಯಿಗೋಸ್ಕರ ಬಂದಿದ್ದೇನೆ

ನನ್ನ ತಂದೆ-ತಾಯಿಗೋಸ್ಕರ ಬಂದಿದ್ದೇನೆ

ಇದೇ ವೇಳೆ ಅಭಿಷೇಕ್ ಮಾತನಾಡಿ, ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನತೆ ಮುಂದೆ ಹೆಜ್ಜೆ ಇಡಿ, ಹಿಂದಕ್ಕೆ ಇಡಬೇಡಿ ಎಂದು ಹೇಳುತ್ತಿದ್ದಾರೆ ಎಂದರು. ನನಗೆ ಪ್ರಚಾರ ಹೊಸದಲ್ಲ, ಈ ಹಿಂದೆ ಅಪ್ಪನ ಜೊತೆ ಬಂದಿದ್ದೇನೆ. ಈ ಊರಿನಲ್ಲಿ ಅಪ್ಪನ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ನಮ್ಮ ತಾತ ಕೂಡ ಮಳವಳ್ಳಿಯವರು. ಅವರ ಆಶೀರ್ವಾದವೂ ಇದೆ ಎಂದರು. ನಮಗೆ ರಾಜಕೀಯ ಗೊತ್ತಿಲ್ಲ. ನಾವು ಏನೇ ತೀರ್ಮಾನ ಕೈಗೊಂಡರೂ ಅದನ್ನು ಜನರ ಮುಂದೆ ಇಟ್ಟು ತೀರ್ಮಾನಿಸುತ್ತೇವೆ. ನನ್ನ ತಂದೆ, ತಾಯಿಗೋಸ್ಕರ ಇಲ್ಲಿಗೆ ಬಂದಿದ್ದೇನೆ.

More from Filmibeat

English summary
Sumalatha son Abhishek ambarish started lokasbaha election Campaign in Mandya to support Mother. Sumalatha will announced her decision on march 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X