ಮೆಗಾ ಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುಮಲತಾ

ಇಂದು ಆಗಸ್ಟ್ 22 ಮೆಗಾಸ್ಟಾರ್ ಚಿರಂಜೀವಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಚಿರು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಜೊತೆಗೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಶುಭ ಕೋರಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಚಿರಂಜೀವಿ ಅವರಿಗೆ ವಿಶ್ ಮಾಡಿರುವ ಸುಮಲತಾ, ಜೊತೆಗೆ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುಮಲತಾ ಹಾಗೂ ಅಂಬರೀಶ್ ಇಬ್ಬರ ಜೊತೆಗೆ ಚಿರಂಜೀವಿ ಇದ್ದಾರೆ.

Recommended Video

Sye Raa Narasimha Reddy Movie: ದಾಖಲೆ ಮೊತ್ತಕ್ಕೆ ಮಾರಾಟವಾದ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು

ಸುಮಲತಾ ಹಾಗೂ ಚಿರಂಜೀವಿ ಜೋಡಿ ತೆಲುಗಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿತ್ತು. 'ಖೈದಿ', 'ಗ್ಯಾಂಗ್ ಲೀಡರ್', 'ಅಗ್ನಿ ಗುಂಡಮ್', 'ಸ್ವಯಂ ಕೃಷಿ' ಚಿರು ಹಾಗೂ ಸುಮಲತಾ ಕಾಂಬಿನೇಶನ್ ನಲ್ಲಿ ಬಂದ ಪ್ರಮುಖ ಸಿನಿಮಾಗಳಾಗಿವೆ.

Sumalatha Wishes For Chiranjeevi Birthday

ಸಿನಿಮಾದ ಹೊರತಾಗಿಯೂ ಅಂಬರೀಶ್ ಮತ್ತು ಸುಮಲತಾರಿಗೆ ಚಿರಂಜೀವಿ ಬಹಳ ಒಳ್ಳೆಯ ಸ್ನೇಹಿತರು. ಬೆಂಗಳೂರಿಗೆ ಬಂದಾಗಲೆಲ್ಲ ಅವರನ್ನು ಭೇಟಿ ಮಾಡುತ್ತಿದ್ದರು. ಇನ್ನು, ಅಂಬರೀಶ್ ಅಂತ್ಯಕ್ರಿಯೆ ಸಮಯದಲ್ಲಿಯೂ ಚಿರಂಜೀವಿ ಭಾಗಿಯಾಗಿದ್ದರು.

ಅಂದಹಾಗೆ, ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಚಿರಂಜೀವಿಗೆ ಒಳ್ಳೆಯದಾಗಲಿ ಹಾಗೂ ಅವರ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ದೊಡ್ಡ ಯಶಸ್ಸು ಕಾಣಲಿ ಎಂದು ಸುಮಲತಾ ಶುಭ ಹಾರೈಸಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಚಿರಂಜೀವಿ ನಟನೆಯ ಸಿನಿಮಾವಾಗಿದ್ದು, ಇತ್ತೀಚಿಗಷ್ಟೆ ಟೀಸರ್ ಬಿಡುಗಡೆಯಾಗಿದೆ.

More from Filmibeat

English summary
Actress and Mandya MP Sumalatha wishes for Mega Star Chiranjeevi birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X