ಗೆಲುವಿನ ನಂತರ ಸುಮಲತಾ ಮೊದಲ ಪ್ರತಿಕ್ರಿಯೆ
ಭಾರಿ ಕುತೂಹಲದ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಜ್ಯದ ಜನರ ಚಿತ್ತ ಸೆಳೆದಿದ್ದ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆಲುವಿನ ಜಯಭೇರಿ ಭಾರಿಸಿದ್ದಾರೆ.
ಗೆಲುವು ಸಾಧಿಸುತ್ತಿದಂತೆ ಸುಮಲತಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಇದು ನನ್ನ ಗೆಲುವಲ್ಲ ಸ್ವಾಭಿಮಾನಿ ಮಂಡ್ಯ ಜನತೆಯ ಗೆಲುವು. ಅಂಬರೀಶ್ ಮೇಲಿನ ಪ್ರೀತಿ ನನ್ನನ್ನು ಜನ ಗೆಲ್ಲಿಸಿದ್ದಾರೆ" ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಸುಮಲತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಗೆಲವು ಸಾಧಿಸಿ ಸಂಸತ್ ಮೆಟ್ಟಿಲು ಹತ್ತುತ್ತಿದ್ದಾರೆ. ಈ ಇದೆ ಸಂತಸದಲ್ಲಿ ಸುಮಲತಾ ಗೆಲ್ಲಿಸಿದ ಜನರಿಗೆ ಸಾಮಾಜಿಕಾ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

"ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನೂ ಮೀರಿ ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ ಕೋಟಿ ಕೋಟಿ ಅನಂತ ಅನಂತ ಅಭಿನಂದನೆಗಳು ಮಂಡ್ಯದ ಜನತೆಗೆ" ಎಂದು ಹೇಳಿದ್ದಾರೆ.
ಮತ ಎಣಿಕೆ ಪ್ರಾರಂಭವಾದಾಗಿನಿಂದ ಭಾರಿ ಕುತೂಹಲ ಕೆರಳಿಸುತ್ತಾ ಬಂದಿತ್ತು ಮಂಡ್ಯ ಕ್ಷೇತ್ರ. ಕೆಲವೆ ಕೆಲವು ಮತಗಳ ಅಂತರದಲ್ಲಿ ಹಾವು ಏಣಿ ಆಟದಂತೆ ಸುಮಲತಾ ಒಮ್ಮೆ ಮುನ್ನಡೆ ಪಡೆದರೆ ಮತ್ತೊಮ್ಮೆ ನಿಖಿಲ್ ಮುನ್ನಡೆ ಸಾಧಿಸುತ್ತಿದ್ದರು. ಆದ್ರೆ ಕೊನೆಯದಾಗಿ ಸುಮಲತಾ ಅವರು ಮಂಡ್ಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.


Click it and Unblock the Notifications











