ಅಂಬಿ ನಿಧನದ ನಂತರ ಸುಮಲತಾ ಮೊದಲ ಮಾತು!

Recommended Video

Ambareesh : ತಂದೆ ಜೊತೆಗಿನ ಬಾಲ್ಯದ ನೆನಪುಗಳನ್ನ ಹಂಚಿಕೊಂಡ ಮಗ ಅಭಿಷೇಕ್

''ನನಗೆ ಅವರು ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಇವತ್ತು ಅವರು ಎಲ್ಲಿಯೇ ಇದ್ದರೂ ನಗು ನಗುತ್ತಾ ಆಶೀರ್ವಾದ ಮಾಡುತ್ತಿರುತ್ತಾರೆ.'' ಹೀಗೆ ಹೇಳುತ್ತ ಒಂದು ಕ್ಷಣಕ್ಕೆ ಎಲ್ಲರನ್ನು ಮೌನವಾಗುವಂತೆ ಮಾಡಿದರು ನಟಿ ಸುಮಲತಾ.

ಅಂಬರೀಶ್ ಅವರನ್ನು ಕಳೆಕೊಂಡಿರುವ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್ ಅವರಿಗೆ ದಿಕ್ಕೆ ತೋಚದಾಗಿದೆ. ಪ್ರೀತಿಯ ಬಾಳ ಸಂಗತಿ ಮರೆಯಾಗಿದ್ದು, ಆ ನೋವನ್ನು ಈಗ ಅವರು ಹಂಚಿಕೊಂಡಿದ್ದಾರೆ.

ನಟ ಅಂಬರೀಶ್ ಅವರ ಅಗಲಿಕೆಯ ನಂತರ ಇಂದು ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಲತಾ ತಮ್ಮ ಪ್ರೀತಿಯ ಪತಿ ಅಂಬರೀಶ್ ಅವರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು. ಅವರ ಮಾತುಗಳು ಮುಂದಿವೆ ಓದಿ...

ಭಗವತ್ ಗೀತೆಯಂತೆ ಬದುಕು

ಭಗವತ್ ಗೀತೆಯಂತೆ ಬದುಕು

''ಭಗವತ್ ಗೀತೆಯಲ್ಲಿ ದೇವರು ಮನುಷ್ಯಗೆ ಹೇಳುತ್ತಾನಂತೆ, ನೀನು ಬರುವಾಗ ಏನು ತೆಗೆದುಕೊಂಡು ಬರಲ್ಲ.. ಹೋಗುವಾಗಲೂ ಏನು ತೆಗೆದುಕೊಂಡು ಹೋಗಲ್ಲ.. ಇಲ್ಲಿ ಯಾವುದು ಶಾಶ್ವತ ಅಲ್ಲ ಅಂತ. ಆಗ ಮನುಷ್ಯ ಉತ್ತರಿಸುತ್ತಾನಂತೆ, ನೀನು ನನ್ನನ್ನು ಇಲ್ಲಿ ಕಳುಹಿಸುವಾಗ ಒಂದೇ ಒಂದು ಹೃದಯ ಕೊಟ್ಟು ಕಳುಹಿಸಿದ್ದೀಯಾ ಆದರೆ, ನಾನು ಇಲ್ಲಿಂದ ಹೋಗುವಾಗ ಲಕ್ಷಾಂತರ ಜನರ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾನೆ ಅಂತ. ಆ ರೀತಿಯ ಒಬ್ಬ ಮನುಷ್ಯರಾಗಿದ್ದವರು ನಮ್ಮ ನಿಮ್ಮ ಪ್ರೀತಿಯ ಅಂಬರೀಶ್.'' - ಸುಮಲತಾ, ನಟಿ, ಅಂಬರೀಶ್ ಪತ್ನಿ

ಅವರ ಬಗ್ಗೆ ಏನು ಹೇಳುವುದು

ಅವರ ಬಗ್ಗೆ ಏನು ಹೇಳುವುದು

''ಅಂಬರೀಶ್ ಅವರ ಬಗ್ಗೆ ಏನು ಹೇಳುವುದು. 27 ವರ್ಷಗಳಿಂದ ನಾನು ಅವರನ್ನು ನೋಡಿದ್ದನ್ನು ಹೇಗೆ ಹೇಳುವುದು. ಅವರ ಇಷ್ಟು ವರ್ಷದ ಸಿನಿಮಾ ಬದುಕಿನಲ್ಲಿ ಅವರಿಗೆ ಅನ್ನದಾತರಾಗಿದ್ದ ನಿರ್ಮಾಪಕರಿಗೆ, ಒಳ್ಳೆ ಒಳ್ಳೆಯ ಪಾತ್ರಗಳನ್ನು ನೀಡಿ ಮೇರು ನಟನನ್ನಾಗಿ ಮಾಡಿದ್ದ ನಿರ್ದೇಶಕರಿಗೆ, ಸಹ ಕಲಾವಿದರಿಗೆ ಎಲ್ಲರಿಗಿಂತ ಹೆಚ್ಚಾಗಿ ಅವರನ್ನು ಬೆಳೆಸಿದ ಅಭಿಮಾನಿಗಳಿಗೆ ನನ್ನ ವಂದನೆಗಳು.'' - ಸುಮಲತಾ, ನಟಿ, ಅಂಬರೀಶ್ ಪತ್ನಿ

He was people's man

He was people's man

''ಅಂಬರೀಶ್ ಅವರ ಬಗ್ಗೆ ಹೇಳಲು ಏನು ಅಂತ ಪದಗಳನ್ನು ಹುಡುಕಲಿ. ಅವರು ಒಬ್ಬ ಒಳ್ಳೆಯ ಮಗ, ಸಹೋದರ, ಗಂಡ, ತಂದೆ, ಸ್ನೇಹಿತ, ನಟ, ರಾಜಕೀಯ ನಾಯಕ, ಸಮಾಜ ಸೇವಕ ಹೀಗೆ ಅವರಿಗೆ ಎಷ್ಟೊಂದು ವೈವಿದ್ಯತೆ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ಒಬ್ಬ ಮನುಷ್ಯನಾಗಿದ್ದರು. He was people's man'' - ಸುಮಲತಾ, ನಟಿ, ಅಂಬರೀಶ್ ಪತ್ನಿ

ರಾಜನಾಗಿ ಬಾಳಿದರು, ರಾಜನಾಗಿಯೇ ಹೋದರು

ರಾಜನಾಗಿ ಬಾಳಿದರು, ರಾಜನಾಗಿಯೇ ಹೋದರು

''ಅವರು ಒಬ್ಬ ರಾಜನಾಗಿ ಬಾಳಿದರು. ರಾಜನಾಗಿಯೇ ಹೋದರು. ಅವರ ಇಂತಹ ಪ್ರಯಾಣದಲ್ಲಿ ಬೆಂಬಲ ನೀಡಿದವರಿಗೆ ನನ್ನ ಧನ್ಯವಾದಗಳು. ಅವರ ಅಂತಿಮ ಪ್ರಯಾಣವನ್ನು ಕೂಡ ಅರಸನಾಗಿಯೇ ಕಳುಹಿಸಿಕೊಟ್ಟಿದ್ದೀರ. ಅದಕ್ಕೆ ಕುಮಾರಣ್ಣನಿಗೆ ಕೈ ಮುಗಿದು ನಮಸ್ಕಾರ ಹೇಳುತ್ತಾನೆ.'' - ಸುಮಲತಾ, ನಟಿ, ಅಂಬರೀಶ್ ಪತ್ನಿ

ಮಂಡ್ಯದ ಜನ ಇದನ್ನು ಮರೆಯುವುದಿಲ್ಲ

ಮಂಡ್ಯದ ಜನ ಇದನ್ನು ಮರೆಯುವುದಿಲ್ಲ

''ನನಗೆ ಅವರು ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಅವರು ಎಲ್ಲರಿಗೆ ಬೇಕಾದ ಅಂಬರೀಶ್. ಮಂಡ್ಯಗೆ ಅವರನ್ನು ಕರೆದುಕೊಂಡು ಹೋಗಿ, ಅಲ್ಲಿನ ಜನರು ಅಂತಿಮ ದರ್ಶನ ಮಾಡುವಂತೆ ಮಾಡಿದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮಂಡ್ಯದ ಜನ ಇದನ್ನು ಮರೆಯುವುದಿಲ್ಲ. ಪೊಲೀಸ್ ಇಲಾಖೆಗೆ, ಚಿತ್ರರಂಗದ ಕುಟುಂಬದವರಿಗೆ, ಮಾಧ್ಯಮದವರಿಗೆ ನನ್ನ ಧನ್ಯವಾದಗಳು.'' - ಸುಮಲತಾ, ನಟಿ, ಅಂಬರೀಶ್ ಪತ್ನಿ

ನಗುತ್ತಾ ಆಶೀರ್ವಾದ ಮಾಡುತ್ತ ಇರುತ್ತಾರೆ

ನಗುತ್ತಾ ಆಶೀರ್ವಾದ ಮಾಡುತ್ತ ಇರುತ್ತಾರೆ

''ಇವತ್ತು ಅವರು ಎಲ್ಲಿಯೇ ಇದ್ದರೂ ನಗು ನಗುತ್ತಾ ಆಶೀರ್ವಾದ ಮಾಡುತ್ತ ಇರುತ್ತಾರೆ. ಅವರಿಗೆ ಅವರ ಮಗ ಅಭಿಷೇಕ್ ನ ಮೊದಲ ಸಿನಿಮಾ ನೋಡಬೇಕು ಎಂಬ ಆಸೆ ಇತ್ತು. ಅವರ ಮಗ ಅಭಿಷೇಕ್ ಮೇಲೆ ಕೂಡ ನಿಮ್ಮ ಆಶೀರ್ವಾದ ಇರಲಿ. ಎಲ್ಲರಿಗೆ ಧನ್ಯವಾದ.'' - ಸುಮಲತಾ, ನಟಿ, ಅಂಬರೀಶ್ ಪತ್ನಿ

More from Filmibeat

English summary
Actress Sumalatha's emotional talk about his husband Ambareesh death. Actor Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X