ಡಿಸೆಂಬರ್ 6ಕ್ಕೆ ಸಸ್ಪೆನ್ಸ್, ಥ್ರಿಲ್ಲಿಂಗ್ ತಿರುವುಗಳ 'ಬಬ್ರೂ' ತೆರೆಗೆ
ರಾಕಿಂಗ್ ಸ್ಟಾರ್ ಯಶ್ ಟ್ರೈಲರ್ ರಿಲೀಸ್ ಮಾಡಿದ್ದ 'ಬಬ್ರೂ' ಸಿನಿಮಾ ಡಿಸೆಂಬರ್ 6ಕ್ಕೆ ನಿಮ್ಮ ಮಂದೆ ಬರ್ತಿದೆ. ಬಿಡುಗಡೆಗೂ ಮುಂಚೆ ಬಹಳ ಕುತೂಹಲ ಹುಟ್ಟುಹಾಕಿರುವ ಸಸ್ಪೆನ್ಸ್-ಥ್ರಿಲ್ಲಿಂಗ್ ಸಿನಿಮಾ ಇದಾಗಿದ್ದು, ಟ್ರೈಲರ್ ಮೂಲಕ ಹೆಚ್ಚಿನ ಭರವಸೆ ಮೂಡಿಸಿದೆ.
'ಬೆಳದಿಂಗಳ ಬಾಲೆ' ಖ್ಯಾತಿಯ ಸುಮನ್ ನಗರ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವುದು ಚಿತ್ರದ ಪ್ರಮುಖ ಆಕರ್ಷಣೆ. ಇದೊಂದು ಜರ್ನಿ ಕಥೆಯಾಧರಿತ ಚಿತ್ರವಾಗಿದ್ದು, ಈ ಜರ್ನಿಯಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ಹಾಗೂ ಟ್ವಿಸ್ಟ್ ಗಳ ರೋಚಕತೆ ತುಂಬಿರುವುದು ಪ್ರೇಕ್ಷಕರಿಗೆ ಒಳ್ಳೆಯ ಅನುಭವ ಎಂದು ಹೇಳಲಾಗಿದೆ.
ಸಂಪೂರ್ಣವಾಗಿ ಅಮೇರಿಕದಲ್ಲಿಯೇ ಶೂಟಿಂಗ್ ಆಗಿರುವ ಕನ್ನಡ ಸಿನಿಮಾ ಎಂಬ ವಿಶೇಷ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ. ಇದುವರೆಗೂ ಹಲವು ಸಿನಿಮಾ, ಕಿರುಚಿತ್ರಗಳಲ್ಲಿ ಅಮೇರಿಕ ತೋರಿಸಲಾಗಿದೆ. ಆದರೆ, ಬಬ್ರೂ ಸಿನಿಮಾದಲ್ಲಿ ಈ ಹಿಂದೆಂದೂ ನೋಡದ ಅಮೇರಿಕವನ್ನು ಪೂರ್ಣ ಪ್ರಮಾಣದಲ್ಲಿ ನೋಡಬಹುದು ಎಂದು ಚಿತ್ರತಂಡ ತಿಳಿಸಿದೆ.

'ಯುಗ ಕ್ರಿಯೇಷನ್ಸ್' ಮತ್ತು 'ಸುಮನ್ ನಗರಕರ್ ಪ್ರೊಡಕ್ಷನ್ಸ್' ಅಡಿಯಲ್ಲಿ ಕರ್ನಾಟಕದಲ್ಲಿ ಹುಟ್ಟಿ, ಅಮೇರಿಕದಲ್ಲಿ ನೆಲೆಸಿರುವ ಸಮನ ಮನಸ್ಕರು ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ ಎನ್ನುವುದು ವಿಶೇಷ. ಪೂರ್ಣಚಂದ್ರ ತೇಜಸ್ವಿ ಅವರು ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
ಸುಜಯ್ ರಾಮಯ್ಯ ಈ ಚಿತ್ರಕ್ಕೆ ಕಥೆ-ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಸುಮನ್ ನಗರಕರ್, ಮಹಿ ಹಿರೇಮಠ್, ಸನ್ನಿ ಮೋಜಾ, ಪ್ರಕೃತಿ ಕಶ್ಯಪ್ ಸೇರಿದಂತೆ ಸ್ಪ್ಯಾನಿಶ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











