'ಪೈರಸಿ' ವಿರುದ್ಧ ಸಂದೇಶ ಸಾರುತ್ತಿದೆ ನಟಿ ಸುಮನ್ ನಗರ್ಕರ್ ಕಿರುಚಿತ್ರ
'ಪೈರಸಿ' ಈಗ ಕನ್ನಡ ಸೇರಿದಂತೆ ಎಲ್ಲ ಸಿನಿಮಾರಂಗಕ್ಕೆ ದೊಡ್ಡ ಶನಿಯಂತೆ ಕಾಡುತ್ತಿದೆ. ಇತ್ತೀಚಿಗಷ್ಟೆ 'ಭರ್ಜರಿ' ಚಿತ್ರಕ್ಕೂ ಅದೇ ರೀತಿಯ ಸಮಸ್ಯೆ ಎದುರಾಗಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ ನಟಿ ಸುಮನ್ ನಗರ್ಕರ್ ತಮ್ಮ ಕಿರುಚಿತ್ರದ ಮೂಲಕ 'ಪೈರಸಿ' ವಿರುದ್ಧ ಸಂದೇಶ ಸಾರಿದ್ದಾರೆ.
'ಬೆಳದಿಂಗಳ ಬಾಲೆ' ಖ್ಯಾತಿಯ ನಟಿ ಸುಮನ್ ನಗರ್ಕರ್ ಈಗ ಒಂದು ಕಿರುಚಿತ್ರದಲ್ಲಿ ನಟಿಸಿದ್ದಾರೆ. 'ಗ್ರೇ' ಎಂಬ ಹೆಸರಿನ ಈ ಕಿರುಚಿತ್ರ ಪೈರಸಿಯ ಬಗ್ಗೆ ಇದೆ. ಒಂದು ಒಳ್ಳೆಯ ಸಿನಿಮಾವನ್ನು ಪೈರಸಿ ಹೇಗೆ ಕೊಲ್ಲುತ್ತದೆ ಎನ್ನುವುದನ್ನು ವಿಭಿನ್ನ ರೀತಿಯಲ್ಲಿ ಪರಿಣಾಮಕಾರಿಯಾಗಿ ಈ ಕಿರುಚಿತ್ರದಲ್ಲಿ ಹೇಳಲಾಗಿದೆ.

ಸುಜಯ್ ರಾಮಯ್ಯ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕಿರುಚಿತ್ರಕ್ಕೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ 'ಗ್ರೇ' ಕಿರುಚಿತ್ರ ನಂಬರ್ 19ನೇ ಟ್ರೆಂಡಿಂಗ್ ನಲ್ಲಿದೆ.
English summary
Watch Video : Kannada Actress Suman nagarkar's 'Grey' short movie released.


Click it and Unblock the Notifications