ಉದ್ಯಮಿ ಜೊತೆ ನಟಿ ಸುಮನ್ ರಂಗನಾಥನ್ ವಿವಾಹ
Recommended Video
ಕನ್ನಡದ ಪ್ರತಿಭಾವಂತ ನಟಿ, ಚಿರಕಾಲದ ಚಲುವೆ ಸುಮನ್ ರಂಗನಾಥನ್ ಅಭಿಮಾನಿಗಳಗೆ ಶುಭ ಸುದ್ದಿ ನೀಡಿದ್ದಾರೆ. ಉದ್ಯಮಿ ಸುಜನ್ ಜೊತೆಗೆ ಸುಮನ್ ರಂಗನಾಥ್ ಮದುವೆ ಆಗಿದ್ದಾರೆ.
ಹೀರೋಯಿನ್ ಗಳಿಗೆ ಚಿತ್ರರಂಗದಲ್ಲಿ ಆಯಸ್ಸು ಕಡಿಮೆ ಎನ್ನುವ ಮಾತಿದೆ. ಆದರೆ. 1989 ರಿಂದ 2019ರ ವರೆಗೆ ಸುಮನ್ ರಂಗನಾಥನ್ ಚಿತ್ರರಂಗದಲ್ಲಿ ಇದ್ದಾರೆ. ಈ ವರ್ಷ ಕೂಡ ಅವರ ನಟನೆಯ ಎರಡ್ಮೂರು ಸಿನಿಮಾಗಳು ಬಿಡುಗಡೆ ಆಗಬೇಕಿದೆ.
ಸಿನಿಮಾಗಳ ನಡುವೆ ಈಗ ತಮ್ಮ ವೈವಾಹಿಕ ಜೀವನದಲ್ಲಿ ಮಹತ್ವದ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಮದುವೆಯಾಗುವ ಮೂಲಕ ಹೊಸ ಜೀವನವನ್ನು ಶುರು ಮಾಡಿದ್ದಾರೆ. ಮುಂದೆ ಓದಿ....

ಸುಜನ್ ಉದ್ಯಮಿ ಜೊತೆ ಮದುವೆ
ನಟಿ ಸುಮನ್ ರಂಗನಾಥನ್ ಉದ್ಯಮಿ ಸುಜನ್ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಅವರ ಮದುವೆ ಕಳೆದ ಸೋಮವಾರ ನಡೆದಿದೆ. ಸರಳವಾಗಿ ಮದುವೆ ಕಾರ್ಯಕ್ರಮ ಜರುಗಿದ್ದು, ಹತ್ತಿರದ ಸ್ನೇಹಿತರು ಹಾಗೂ ಸಂಬಂಧಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ.

8 ತಿಂಗಳ ಹಿಂದೆ ಪರಿಚಯ
ಸುಜನ್ ಹಾಗೂ ಸುಮನ್ ರಂಗನಾಥನ್ ನಡುವೆ 8 ತಿಂಗಳ ಹಿಂದೆ ಪರಿಚಯ ಆಗಿತಂತೆ. ನಂತರ ಕೆಲವು ದಿನ ಡೇಟಿಂಗ್ ನಡೆದಿದೆ. ಬಳಿಕ ಇಬ್ಬರು ಪ್ರೀತಿಸಿ ಈಗ ಮದುವೆಗೆ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಕೂಡ ಒಂದೇ ರೀತಿಯ ಅಭಿರುಚಿ ಹೊಂದಿದ್ದು, ಒಟ್ಟಿಗೆ ಬದುಕುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಸರಳವಾಗಿ ಮದುವೆ
''ನಾವಿಬ್ಬರು ಹೆಚ್ಚಾಗಿ ಯಾರೊಂದಿಗೂ ಬೇರೆಯುವುದಿಲ್ಲ. ಹೆಚ್ಚು ಖಾಸಗಿಯಾಗಿ ಇರಲು ಬಯಸುತ್ತೇವೆ. ಪತಿ ಸುಜನ್ ಸರಳ ವ್ಯಕ್ತಿ'' ಎಂದಿರುವ ಸುಮನ್ ಸರಳ ಮದುವೆಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. ಸುಜನ್ ಹಾಗೂ ಸುಮನಾ ರಂಗನಾಥನ್ ನಿರ್ಧಾರಕ್ಕೆ ಎರಡು ಕುಟುಂಬದವರು ಕೂಡ ಒಪ್ಪಿದ್ದಾರೆ.

ಬಹುಭಾಷೆಯಲ್ಲಿ ನಟಿಸಿರುವ ಸುಮನ್
ನಟಿ ಸುಮನ್ ರಂಗನಾಥನ್ ಬಹು ಭಾಷೆಯಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ. ಅಂದಿನ ಸಿ.ಬಿ.ಐ ಶಂಕರ್, ಡಾಕ್ಟರ್ ಕೃಷ್ಣ, ನಮ್ಮೂರ ಹಮ್ಮೀರ ಚಿತ್ರಗಳಿಂದ ಇಂದಿನ ಸಿದ್ಲಿಂಗು, ನೀರ್ ದೋಸೆ, ಕವಲುದಾರಿ, ದಂಡುಪಾಳ್ಯ 4 ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 'ಸಿದ್ಲಿಂಗು' ಚಿತ್ರಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ.


Click it and Unblock the Notifications











