'ಕವಲುದಾರಿ'ಯಲ್ಲಿ ಸುಮನ್ ರಂಗನಾಥ್ ಕ್ಯಾಬರೆ ನೃತ್ಯ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಿಂದ ಬರುತ್ತಿರುವ ಮೊದಲ ಸಿನಿಮಾ 'ಕವಲುದಾರಿ' ರಿಲೀಸ್ ಗೆ ರೆಡಿಯಾಗಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಚಿತ್ರಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ 'ಕವಲುದಾರಿ'ಯಿಂದ ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಹೊರಬಿದ್ದಿದೆ.
ನಟಿ ಸುಮನ್ ರಂಗನಾಥ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕವಲುದಾರಿ'ಯ 'ಖಾಲಿ ಖಾಲಿ ಅನಿಸೋ ಕ್ಷಣಕ್ಕೆ...' ಎನ್ನುವ ಹಾಡಿಗೆ ಸುಮನ್ ಕ್ಯಾಬರೆ ಶೈಲಿಯ ನೃತ್ಯ ಮಾಡಿದ್ದಾರಂತೆ. ಈ ಹಾಡಿನ ಲಿರಿಕಲ್ ವೀಡಿಯೋ ಇಂದು ಸಂಜೆ ರಿಲೀಸ್ ಆಗುತ್ತಿದೆ. ಮಾಧುರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಮನ್ ಈ ಹಾಡಿನಲ್ಲಿ ಕೆಂಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ವಿಶ್ವಕಿರಣ್ ನೃತ್ಯ ಸಂಯೋಜನೆ ಇರುವ ಈ ಹಾಡು ವಿಭಿನ್ನವಾಗಿದ್ದು ಎಲ್ಲರಿಗೂ ಇಷ್ಟವಾಗಲಿದೆ ಎನ್ನುವುದು ಚಿತ್ರತಂಡದ ನಂಬಿಕೆ.
ಸಸ್ಪೆನ್ಸ್ ಥ್ರಿಲ್ಲರ್ ಕವಲುದಾರಿ ಚಿತ್ರದಲ್ಲಿ ನಟ ರಿಷಿ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅನಂತ್ ನಾಗ್ ಅಭಿನಯಿಸಿದ್ದಾರೆ. ಅಂದಹಾಗೆ 'ಕವಲುದಾರಿ' ನಿರ್ದೇಶಕ ಹೇಮಂತ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ.

ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ 'ಕವಲುದಾರಿ' ಏಪ್ರಿಲ್ 12ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











