ದಾಂಪತ್ಯಕ್ಕೆ ಕಾಲಿಟ್ಟ 'ದಿಲ್ವಾಲ' ನಟ ಸುಮಂತ್ ಶೈಲೇಂದ್ರ
ಸ್ಯಾಂಡಲ್ ವುಡ್ ನ ಎರಡು ಜೋಡಿಗಳು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದು ಕಡೆ ದಿಗಂತ್ ಮತ್ತು ಐಂದ್ರಿತಾ ರೈ ಮದುವೆಯಾದ್ರೆ, ಇನ್ನೊಂದು ಕಡೆ 'ದಿಲ್ವಾಲ' ಖ್ಯಾತಿಯ ಸುಮಂತ್ ಶೈಲೇಂದ್ರ ಹೊಸ ಜೀವನಕ್ಕೆ ಹೆಜ್ಜೆಯಿಟ್ಟಿದ್ದಾರೆ.
ಶ್ರೀನಿವಾಸ್ ಮತ್ತು ಚಂದ್ರಕಲಾ ಅವರ ಪುತ್ರಿ ಅನಿತಾ ಜೊತೆ ಸುಮಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ 9.30ರಿಂದ 10.30ರ ಶುಭಲಗ್ನದಲ್ಲಿ ಸುಮಂತ್ ಮತ್ತು ಅನಿತಾ ಸಪ್ತಪದಿ ತುಳಿದಿದ್ದಾರೆ.
ಪ್ರಿಯಾ ಸುದೀಪ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಎಸ್ ನಾರಾಯಣ್, ವಿಜಯ ರಾಘವೇಂದ್ರ ದಂಪತಿ ಸೇರಿದಂತೆ ಹಲವು ಗಣ್ಯರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.

ಇನ್ನು ಮಂಗಳವಾರ ವಸಂತನಗರದಲ್ಲಿರುವ ಬೆಂಗಳೂರು ಮೇನ್ ಪ್ಯಾಲೇಸ್ ನಲ್ಲಿ ಸುಮಂತ್ ಮತ್ತು ಅನಿತಾ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ನಟ ದರ್ಶನ್, ಪುನೀತ್ ರಾಜ್ ಕುಮಾರ್, ಹಿರಿಯ ನಟದೇವರಾಜ್, ಪ್ರಜ್ವಲ್, ವಿನಯ್ ರಾಜ್ ಕುಮಾರ್, ರವಿಶಂಕರ್, ಇಂದ್ರಜಿತ್ ಲಂಕೇಶ್, ಹಂಸಲೇಖ, ಸುನೀಲ್ ಕುಮಾರ್ ದೇಸಾಯಿ, ನಿರೂಪಕ ಅಕುಲ್, ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಸಾರಾ ಗೋವಿಂದು ಸೇರಿದಂತೆ ಹಲವು ಗಣ್ಯರು ಆಗಮಿಸಿ ವಿಶ್ ಮಾಡಿದರು.


Click it and Unblock the Notifications











