For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ಅಬ್ಬರಿಸಲಿರುವ ಕನ್ನಡದ ಸುಮಂತ್ ಶೈಲೇಂದ್ರ

  By Bharath Kumar
  |

  ಕನ್ನಡದ ಯುವ ನಟ ಸುಮಂತ್ ಶೈಲೇಂದ್ರ 'ಲೀ' ಚಿತ್ರದ ನಂತರ ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟ್ ಆಗಿದ್ದರು. ಕನ್ನಡದಲ್ಲಿ ಸೈಲೆಂಟ್ ಆಗಿರುವ ಕಾರಣ ಈಗ ಬಹಿರಂಗವಾಗಿದೆ. ಯಾಕಂದ್ರೆ, ಇಲ್ಲಿ ಸೈಲೆಂಟ್ ಆದ ಸುಮಂತ್ ಟಾಲಿವುಡ್ ನಲ್ಲಿ ಸದ್ದು ಮಾಡ್ತಿದ್ದಾರೆ.

  ಹೌದು, ಆಟ, ದಿಲ್ವಾಲಾ, ತಿರುಪತಿ ಎಕ್ಸ್ ಪ್ರೆಸ್, ಬೆತ್ತನಗೆರೆ, ಭಲೇಜೋಡಿ, ಲೀ ಸಿನಿಮಾಗಳ ಮೂಲಕ ತನ್ನದೇ ಬ್ರಾಂಡ್ ಹೊಂದಿರುವ ಸುಮಂತ್, ಈಗ ತೆಲುಗಿನಲ್ಲಿ 'ಬ್ರಾಂಡ್ ಬಾಬು' ಆಗಿದ್ದಾರೆ.

  ಈಗಾಗಲೇ 'ಬ್ರಾಂಡ್ ಬಾಬು' ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಟ್ರೈಲರ್ ಬರಲಿದೆ. ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಬ್ರಾಂಡ್ ಬಾಬು' ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ.

  ಅಂದ್ಹಾಗೆ, ತೆಲುಗಿನಲ್ಲಿ ಈ ಚಿತ್ರವನ್ನ ಸುಮಂತ್ ಅವರ ತಂದೆ ಶೈಲೇಂದ್ರ ಬಾಬು ಅವರೇ ನಿರ್ಮಾಣ ಮಾಡಿದ್ದಾರೆ. ಇದು ಇವರಿಗೆ ಎರಡನೇ ತೆಲುಗು ಸಿನಿಮಾ.

  ಇನ್ನು ಸುಮಂತ್ ಗೆ ನಾಯಕಿಯಾಗಿ ಇಶಾ ರೆಬ್ಬಾ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ಮಾರುತಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ.

  Sumanth Shailendra telugu movie Brand babu

  ಪ್ರಭಾಕರ್ ಎಂಬುವರು ಆಕ್ಷನ್ ಕಟ್ ಹೇಳಿದ್ದಾರೆ. 'ಬಾಹುಬಲಿ' ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಜೀವನ್‌ ಬಾಬು ಅವರು ಸಂಗೀತ ನೀಡಿದ್ದಾರೆ. ಕಾರ್ತಿಕ್‌ ಪಳನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

  English summary
  'Brand babu' telugu movie features of Kannada producer Shailendra Babu’s son Sumanth Shailendra in the lead. Eesha Rebba playing female lead in Brand babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X