For Quick Alerts
  ALLOW NOTIFICATIONS  
  For Daily Alerts

  ಒಟ್ಟಿಗಿದ್ದರೂ ದೂರ-ದೂರ: ಮಗ ಅಭಿಷೇಕ್ ಹಂಚಿಕೊಂಡ ಸುಮಲತಾ ಚಿತ್ರ

  |

  ಕೊರೊನಾ ದೈಹಿಕವಾಗಿ ದೊಡ್ಡ ರೋಗವೇ ಅಲ್ಲ. ಆದರೆ ಮನುಷ್ಯನ ಮನಸ್ಸಿನ ಮೇಲೆ ಮಾಡುವ ಪರಿಣಾಮ ಬಹಳ ದೊಡ್ಡದು. ವ್ಯಕ್ತಿಗಳ ನಡುವೆ ಅಂತರ ತಂದಿಟ್ಟು ಭಾವನಾತ್ಮಕವಾಗಿ, ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ.

  ಅಭಿಮಾನಿಗಳೊಂದಿಗೆ ಖುಷಿ ವಿಚಾರ ಹಂಚಿಕೊಂಡ ಸುಮಲತಾ | Filmibeat Kannada

  ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು, ಸ್ನೇಹಿತರು, ದಂಪತಿಗಳು ಪರಸ್ಪರರನ್ನು ಅನಿವಾರ್ಯವಾಗಿ ನಂಬಬಾರದ ಸ್ಥಿತಿಗೆ ಕೊರೊನಾ ನೂಕುತ್ತದೆ. ಇದು ಮಾನಸಿಕವಾಗಿ ಉಂಟುಮಾಡುವ ನೋವು ದೊಡ್ಡದು.

  ಕೊರೊನಾ ಮುಕ್ತವಾದ ಸಂಸದೆ ಸುಮಲತಾ: ಈಗಲೇ ಹೊರಬರುವುದಿಲ್ಲವಂತೆಕೊರೊನಾ ಮುಕ್ತವಾದ ಸಂಸದೆ ಸುಮಲತಾ: ಈಗಲೇ ಹೊರಬರುವುದಿಲ್ಲವಂತೆ

  ಒಂದೇ ಮನೆಯಲ್ಲಿದ್ದರೂ ಹತ್ತಿರ ಇರುವಂತಿಲ್ಲ, ಮುಟ್ಟುವಂತಿಲ್ಲ, ನೋವಿನಲ್ಲಿರುವ ಭುಜ ತಟ್ಟಿ ಸಮಾಧಾನಿಸುವಂತಿಲ್ಲ. ಕೊರೊನಾ ಬಂದ ಎಲ್ಲರ ಸ್ಥತಿ ಇದೆ.

  ಕೊರೊನಾದಿಂದ ಗುಣಮುಖರಾದ ಸುಮಲತಾ

  ಕೊರೊನಾದಿಂದ ಗುಣಮುಖರಾದ ಸುಮಲತಾ

  ಪ್ರಸ್ತುತ, ನಟಿ, ಸಂಸದೆ ಸುಮಲತಾ ಕೊರೊನಾದಿಂದ ಗುಣಮುಖವಾಗಿದ್ದಾರೆ ಆದರೆ ಮನೆಯಲ್ಲೇ ಕ್ವಾರಂಟೈನ್‌ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಅದೇ ಮನೆಯಲ್ಲಿರುವ ಮಗ ಅಭಿಷೇಕ್‌ಗೆ ಕೊರೊನಾ ಇಲ್ಲ. ಆದರೆ ಒಂದೇ ಮನೆಯಲ್ಲಿದ್ದರೂ ಅಮ್ಮ-ಮಗ ದೂರ-ದೂರ.

  ಅಭಿಷೇಕ್ ತೆಗೆದಿರುವ ಚಿತ್ರ ವೈರಲ್

  ಅಭಿಷೇಕ್ ತೆಗೆದಿರುವ ಚಿತ್ರ ವೈರಲ್

  ಅಮ್ಮ ಅನಾರೋಗ್ಯದಲ್ಲಿದ್ದರೂ ಹತ್ತಿರ ಹೋಗಿ ಸಮಾಧಾನಪಡಿಸದ ಸ್ಥಿತಿ ಮಗ ಅಭಿಷೇಕ್‌ನದ್ದು. ಮಾಸ್ಕ್ ಧರಿಸಿ ದೂರ ನಿಂತ ಅಮ್ಮನ ಚಿತ್ರವನ್ನು ಅಭಿಷೇಕ್ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಈ ಚಿತ್ರ ಅಮ್ಮ-ಮಗನನ್ನು ದೂರ ಮಾಡಿದ ಕೊರೊನಾ ಕತೆಯನ್ನು ಈ ಚಿತ್ರ ಹೇಳುತ್ತಿದೆ.

  ಕೊರೊನಾ ಸೋಂಕಿತರನ್ನ ಅಪರಾಧಿಗಳಂತೆ ಕಾಣುವುದು, ನಿಂದನೆ ಮಾಡೋದು ಸರಿಯಲ್ಲ: ಸುಮಲತಾ ಅಂಬರೀಶ್ಕೊರೊನಾ ಸೋಂಕಿತರನ್ನ ಅಪರಾಧಿಗಳಂತೆ ಕಾಣುವುದು, ನಿಂದನೆ ಮಾಡೋದು ಸರಿಯಲ್ಲ: ಸುಮಲತಾ ಅಂಬರೀಶ್

  ಜುಲೈ 6 ರಂದು ಕೊರೊನಾ ಪಾಸಿಟಿವ್ ವರದಿ

  ಜುಲೈ 6 ರಂದು ಕೊರೊನಾ ಪಾಸಿಟಿವ್ ವರದಿ

  ಸಂಸದೆ ಸುಮಲತಾ ಅವರಿಗೆ ಜುಲೈ 6 ರಂದು ಕೊರೊನಾ ಪಾಸಿಟಿವ್ ಆಗಿರುವ ವರದಿ ಬಂದಿತ್ತು. ವೈದ್ಯರ ಸಲಹೆ ಮೇರೆಗೆ ಅಂದಿನಿಂದಲೂ ಸುಮಲತಾ ಅವರು ಮನೆಯಲ್ಲೇ ಐಸೋಲೇಶನ್‌ಗೆ ಒಳಪಟ್ಟಿದ್ದರು.

  ಇನ್ನೂ ಕೆಲವು ದಿನ ಮನೆಯಲ್ಲೇ ಉಳಿಯಲಿದ್ದಾರೆ

  ಇನ್ನೂ ಕೆಲವು ದಿನ ಮನೆಯಲ್ಲೇ ಉಳಿಯಲಿದ್ದಾರೆ

  ಇದೀಗ ತಾವು ಕೊರೊನಾದಿಂದ ಗುಣಮುಖರಾಗಿರುವುದಾಗಿ ಸುಮಲತಾ ಹೇಳಿದ್ದಾರೆ. ಆದರೆ ವೈದ್ಯರ ಸಲಹೆ ಮೇರೆಗೆ ಇನ್ನೂ ನಾಲ್ಕು ವಾರ ಮನೆಯಲ್ಲೇ ಇರುವುದಾಗಿಯೂ ಸುಮಲತಾ ಹೇಳಿದ್ದು, ಕ್ವಾರಂಟೈನ್‌ ಅನ್ನು ಮುಂದುವರೆಸಲಿದ್ದಾರೆ. ಮನೆಯಲ್ಲೇ ಇದ್ದರೂ ಅಮ್ಮನ ಬಳಿ ಸುಳಿಯಲಾಗದೆ ಪರಿತಪಿಸುತ್ತಿದ್ದಾರೆ ಅಭಿಷೇಕ್.

  ಸುಮಲತಾ ಗೆ ಕೊರೊನಾ ಪಾಸಿಟಿವ್: ಯಾರಿಗೆಲ್ಲಾ ಕೊರೊನಾ ಆತಂಕಸುಮಲತಾ ಗೆ ಕೊರೊನಾ ಪಾಸಿಟಿವ್: ಯಾರಿಗೆಲ್ಲಾ ಕೊರೊನಾ ಆತಂಕ

  English summary
  Abhishek Ambareesh shares his mother Sumalatha photo. She recovered from coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X