»   » ವಿಜಿ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಲಕ್ಷ್ಮೀ- ಸುಂದರ್

ವಿಜಿ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಲಕ್ಷ್ಮೀ- ಸುಂದರ್

Posted By:
Subscribe to Filmibeat Kannada

ನಿರ್ಮಾಪಕ ಸುಂದರ್ ಜೊತೆಯಲ್ಲಿ ನಾನು ಮದುವೆ ಆಗಿದ್ದೇನೆ. ನಮ್ಮಿಂದ ಯಾರಿಗೂ ತೊಂದರೆ ಆಗುವುದು ಬೇಡ. ನಾವು ಚೆನ್ನಾಗಿರುತ್ತೇವೆ. ನಾನು ಸುಂದರ್ ಅವರನ್ನ ಪ್ರೀತಿಸಿ ಮದುವೆ ಆಗಿದ್ದೇನೆ ಎಂದು ವಿಡಿಯೋ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದ ನವ ಜೋಡಿ ನಿರ್ಮಾಪಕ ಸುಂದರ್ ಹಾಗೂ ಲಕ್ಷ್ಮೀ ನಾಯಕ್ ಇಬ್ಬರು ಪೊಲೀಸರ ಮುಂದೆ ಹಾಜಾರಾಗಿದ್ದಾರೆ.

ನಟ ದುನಿಯಾ ವಿಜಿ ಸುಂದರ್ ಗೌಡ ಹಾಗೂ ಲಕ್ಷ್ಮೀ ನಾಯಕ್ ಅವರನ್ನು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನಿನ್ನೆ ನನ್ನ ಮಗಳು ಕಾಣೆ ಆಗಿದ್ದಾಳೆ ಎಂದು ಶಾಸಕ ಶಿವಮೂರ್ತಿ ನಾಯಕ್ ಪೊಲೀಸರಿಗೆ ದೂರು ನೀಡಿದ್ದರು. ಮಧ್ಯಾಹ್ನದ ವೇಳೆಗೆ ಮಾಸ್ತಿಗುಡಿ ಸಿನಿಮಾ ನಿರ್ಮಾಪಕ ಹಾಗೂ ಲಕ್ಷ್ಮೀ ನಾಯಕ್ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು.

ರಹಸ್ಯ ಮದುವೆ ಬಳಿಕ ವಿಡಿಯೋ ಸಂದೇಶ ಕಳುಹಿಸಿದ ಶಾಸಕನ ಪುತ್ರಿ

Sundar P Gowda and Lakshmi Nayak has attend to the police station

ಲಕ್ಷ್ಮೀ ನಾಯಕ್ ಅವರಿಗೆ ಮನೆಯಲ್ಲಿ ಹುಡುಗನನ್ನ ನೋಡಿ ನಿಶ್ಚಿತಾರ್ಥಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು. ಆದರೆ ಲಕ್ಷ್ಮೀ ನಾಯಕ್ ಮತ್ತು ಸುಂದರ್ ಸಾಕಷ್ಟು ದಿನಗಳಿಂದ ಪ್ರೀತಿ ಮಾಡುತ್ತಿದ್ದು ಈ ವಿಚಾರವನ್ನ ಮನೆಯಲ್ಲೂ ಪ್ರಸ್ತಾಪ ಮಾಡಿದ್ದರು. ಮನೆಯಲ್ಲಿ ಅಂತರ ಜಾತಿ ವಿವಾಹವನ್ನ ವಿರೋಧ ಮಾಡಿದ ಹಿನ್ನಲೆಯಲ್ಲಿ ಲಕ್ಷ್ಮೀ ಸುಂದರ್ ಜೊತೆ ಮೈಸೂರಿಗೆ ಹೋಗಿ ಗುಟ್ಟಾಗಿ ಮದುವೆ ಆಗಿದ್ದರು.

ಸದ್ಯ ಯಲಹಂಕ ಪೊಲೀಸ್ ಠಾಣೆಗೆ ದುನಿಯಾ ವಿಜಿ ಜೊತೆ ಆಗಮಿಸಿರುವ ನವ ಜೋಡಿ ನಾನು ಪರಸ್ಪರ ಒಪ್ಪಿಗೆಯಿಂದಲೇ ಮದುವೆ ಆಗಿರುವುದಾಗಿ ಹೇಳಿಕೆ ನೀಡುವ ಸಾಧ್ಯತೆಗಳಿವೆ.

English summary
Producer Sundar P Gowda and Lakshmi Nayak has attend to the Yelahanka police station today (march 9)along with Kannada actor Duniya Viji. Sundar Gowda Lakshmi Nayak Both were secretly married yesterday in Mysore. Lakshmi Nayak, daughter of Mayakonda MLA Shivamurthy Nayak.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada