ಮೇಘನಾ ರಾಜ್ ಹಾಗೂ ಮೊಮ್ಮಗನ ಬಗ್ಗೆ ಸುಂದರ್ ರಾಜ್ ಭಾವುಕ ಮಾತುಗಳು
ಚಿರಂಜೀವಿ ಸರ್ಜಾ ರನ್ನು ಮದುವೆಯಾಗಿದ್ದರೂ ಮೇಘನಾ ರಾಜ್ ರ ಹೆಸರಿನ ಪಕ್ಕ ಸರ್ಜಾ ಹೆಸರದೇ ಇರುವುದಕ್ಕೆ ತಂದೆ ಸುಂದರ್ ರಾಜ್ ಮೇಲಿರುವ ಪ್ರೀತಿಯೇ ಕಾರಣ. ಇದಕ್ಕೆ ಸರ್ಜಾ ಕುಟುಂಬ ಸಹ ಅಡ್ಡಿಪಡಿಸಿರಲಿಲ್ಲ ಎನಿಸುತ್ತದೆ.
Recommended Video
ಚಿರಂಜೀವಿ ಸರ್ಜಾ ಅಂಥಹಾ ಉತ್ತಮ ವರನಿಗೆ ಸಂತೋಶದಿಂದಲೇ ಮಗಳನ್ನು ಮದುವೆ ಮಾಡಿಕೊಟ್ಟಿದ್ದ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಶಾಯ್ ದಂಪತಿಗೆ ಚಿರಂಜೀವಿ ಸರ್ಜಾ ತೀರಿಕೊಂಡಾಗಿ ಬಹು ದೊಡ್ಡ ಆತಂಕವಾಗಿತ್ತು ಮುಂದೆ ಮಗಳ ಸ್ಥಿತಿ ಏನು ಎಂದು.
ಆದರೆ ಈಗ ಮೊಮ್ಮಗ ಹುಟ್ಟಿದ್ದಾನೆ, ಈಗ ಎಲ್ಲ ನೋವಿನ ಕಾರ್ಮೋಡವೂ ಸರಿದು ಸಂತಸದ ಅಲೆ ಎದ್ದಿದೆ. ಸರ್ಜಾ ಹಾಗೂ ರಾಜ್ ಕುಟುಂಬಕ್ಕೆ ಮುಗುಳುನಗೆ ತಂದಿದ್ದಾನೆ ಜೂನಿಯರ್ ಚಿರು.

'ಮಗಳನ್ನು ಈ ಸ್ಥಿತಿಯನ್ನು ನೋಡಲು ಕಷ್ಟವಾಗುತ್ತದೆ'
ಆದರೆ ಚಿರು ಅಗಲಿಕೆ ಸುಂದರ್ ರಾಜ್ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ, ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, 'ಮಗಳನ್ನು ಈ ಸ್ಥಿತಿಯಲ್ಲಿ ನೋಡಲು ಬಹಳ ಕಷ್ಟವಾಗುತ್ತಿದೆ' ಎಂದು ಭಾವುಕರಾಗಿದ್ದಾರೆ.

'ಕೊಟ್ಟಿರುವ ಕಣ್ಣನ್ನು ಕಿತ್ತುಕೊಂಡರೆ ಹೇಗೆ?'
'ದೇವರು ಕಣ್ಣು ಕೊಡದೇಯಿದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಕೊಟ್ಟಿರುವ ಕಣ್ಣನ್ನು ಕಿತ್ತುಕೊಂಡರೆ ಹೇಗಲ್ವಾ? ದೇವರು ಸುಂದರವಾದ ಮಗಳನ್ನು ಕೊಟ್ಟ ಆದರೆ ಸುಂದರವಾದ ಜೀವನ ಕೊಡಲಿಲ್ಲ' ಎಂದು ಭಾವುಕರಾಗಿದ್ದಾರೆ ಸುಂದರ್ ರಾಜ್.

'ಮೊಮ್ಮಗನನ್ನು ಕಾಯುವ ವಾಚ್‌ಮ್ಯಾನ್ ನಾನು'
ಮೇಘನಾ ಅವರ ಮಗುವನ್ನು ಪ್ರೀತಿಯಿಂದ ಚಿಂಟು ಎನ್ನುತ್ತಾರಂತೆ ಸುಂದರ್ ರಾಜ್, ಮೇಘನಾ ತಮ್ಮ ಮಗುವನ್ನು ಪಾಪು ಎನ್ನುತ್ತಾರಂತೆ. ಅರ್ಜುನ್ ಸರ್ಜಾ ರನ್ನು ಜಂಟಲ್ ಮ್ಯಾನ್ ಎಂದು ಕರೆವ ಸುಂದರ್ ರಾಜ್, ತಮ್ಮನ್ನು ತಾವು ಮೊಮ್ಮಗನನ್ನು ಕಾಯುವ ವಾಚ್‌ಮ್ಯಾನ್ ಎಂದು ಕರೆದುಕೊಂಡಿದ್ದಾರೆ.

'ಮೊಮ್ಮಗನ ಜನನ ಸಮಾಧಾನ ತಂದಿದೆ'
ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ ನಟ ಸುಂದರ್ ರಾಜ್. ಚಿರು ಸರ್ಜಾ ಅಗಲಿಕೆಯಿಂದ ಯಾರಿಗೂ ಇನ್ನೂ ಹೊರಬರಲಿಕ್ಕೆ ಸಾಧ್ಯವಾಗಿಲ್ಲ. ಆದರೆ ಮೊಮ್ಮಗನ ಜನನ ಇದ್ದುದರಲ್ಲಿ ತುಸು ಸಮಾಧಾನ ತಂದಿದೆ ಎಂದಿದ್ದಾರೆ.


Click it and Unblock the Notifications











