»   » ಸೆನ್ಸಾರ್‌ನತ್ತ ‘ವಾಲಿ’, ‘ಸುಂದರಕಾಂಡ’ಕ್ಕೆ ಮನ್ನಣೆ

ಸೆನ್ಸಾರ್‌ನತ್ತ ‘ವಾಲಿ’, ‘ಸುಂದರಕಾಂಡ’ಕ್ಕೆ ಮನ್ನಣೆ

Posted By: Staff
Subscribe to Filmibeat Kannada
Vali
ಬಿ. ಮಂಜು ಅರ್ಪಿಸಿ ರಮೇಶ್‌ಯಾದವ್‌ ನಿರ್ಮಿಸುತ್ತಿರುವ ಎಸ್‌. ಮಹೇಂದರ್‌ ನಿರ್ದೇಶನದ ಚಿತ್ರ 'ವಾಲಿ"ಗೆ, ರೀರಿಕಾರ್ಡಿಂಗ್‌, ಮಿಕ್ಸಿಂಗ್‌, ವಿಶೇಷ ಶಬ್ದಜೋಡಣೆ ಕಾರ್ಯ ಮುಗಿದಿದ್ದು ಸೆನ್ಸಾರ್‌ ಮನ್ನಣೆಗಾಗಿ ತೆರಳಿದೆ. ಈ ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸಂಗೀತ ಇದೆ.

ಸ್ಪರ್ಶ, ಹುಚ್ಚ ಖ್ಯಾತಿಯ ಸುದೀಪ್‌ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯ ಸಾಮರ್ಥ್ಯ ಸಾಬೀತುಪಡಿಸಲು ಈ ಚಿತ್ರದಲ್ಲೂ ಸುದೀಪ್‌ಗೆ ಉತ್ತಮ ಅವಕಾಶ ಇದೆ. ಅಂದಹಾಗೆ ಚಿತ್ರ ಅಕ್ಟೋಬರ್‌ನಲ್ಲೇ ತೆರೆಕಾಣಲಿದೆ.

ಸುಂದರಕಾಂಡ: ತಮಿಳು ಚಿತ್ರರಂಗದ ಹೆಸರಾಂತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಕೆ. ಭಾಗ್ಯರಾಜ್‌ರ ಯಶಸ್ವೀ ಕಥೆ ಆಧಾರಿತ ಕನ್ನಡ ಚಿತ್ರ 'ಸುಂದರಕಾಂಡಕ್ಕೆ" ಸೆನ್ಸಾರ್‌ ಮನ್ನಣೆ ಸಿಕ್ಕಿದೆ.

ಶ್ರೀವೆಂಕಟರಮಣ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ನಿರ್ದೇಶಕರು ಎಂ.ಎಸ್‌. ರಾಜಶೇಖರ್‌. ಕಲ್ಯಾಣರ ಗೀತೆ, ಕೀರ್‌ವಾಣಿ ರಾಗಸಂಯೋಜನೆ, ಪ್ರಸಾದ್‌ಬಾಬು ಛಾಯಾಗ್ರಹಣ ಇರುವ ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ ಒದಗಿಸಿದ್ದಾರೆ.

ತಾರಾಬಳಗದಲ್ಲಿ ಹ್ಯಾಟ್ರಿಕ್‌ಹೀರೋ ಶಿವರಾಜ್‌ಕುಮಾರ್‌, ರೋಜಾ, ಸುಜಿತಾ, ರಮೇಶ್‌ಭಟ್‌, ಪದ್ಮಾವಾಸಂತಿ ಮೊದಲಾದವರಿದ್ದಾರೆ.

ಡ್ಯಾಡಿಗೆ ಚಿತ್ರಣ: ಶ್ರೀನಿವಾಸನಾಯ್ಡು ಅವರು ಭಾರಿವೆಚ್ಚದಲ್ಲಿ ನಿರ್ಮಿಸುತ್ತಿರುವ ಆಕಾಶ್‌ಬಾಬು ನಿರ್ದೇಶನದ ಡ್ಯಾಡಿ ನಂ.1ಗೆ ಸತತವಾಗಿ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಚರಣ್‌ರಾಜ್‌ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ.

ಡ್ಯಾಡಿ ನಂ.1ಗೆ ಬೆಂಗಳೂರು ಸುತ್ತಮುತ್ತ ಸತತವಾಗಿ ಚಿತ್ರೀಕರಣ ಸಾಗಿದೆ. ಈ ಚಿತ್ರದ ಮೂಲಕ ನಾಗಮಂಡಲದ ವಿಜಯಲಕ್ಷ್ಮೀ ಮತ್ತೆ ಮರಳಿದ್ದಾರೆ. ಈ ಚಿತ್ರಕ್ಕಾಗಿ ವಿಜಯಲಕ್ಷ್ಮೀ- ಚರಣ್‌ರಾಜ್‌ ಅಭಿನಯದ ದೃಶ್ಯಗಳನ್ನು ಮಹೀಂದ್ರ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ತಂದೆ ಮಗಳ ಬಾಂಧವ್ಯದ ನಡುವೆ ಬರುವ ವೈಷಮ್ಯಗಳ ಸನ್ನಿವೇಶಗಳಲ್ಲಂತೂ ಚರಣ್‌ರಾಜ್‌ ಅವರು ಗ್ಲಿಸರಿನ್‌ ಇಲ್ಲದೆಯೇ ಅತ್ತಿದ್ದು ಈ ಚಿತ್ರದ ವಿಶೇಷ. ಅಂದಹಾಗೆ ಚಿತ್ರಕ್ಕೆ ಮನೋಹರ್‌ ಸಂಗೀತ, ಸಾಹಿತ್ಯ ಇದೆ. ತಾರಾಗಣದಲ್ಲಿ ಚರಣ್‌ರಾಜ್‌, ವಿಜಯಲಕ್ಷ್ಮೀ, ಮೋಹನ್‌, ರಾಮಕೃಷ್ಣ, ತಾರಾ, ಅವಿನಾಶ್‌, ಶೋಭರಾಜ್‌, ಆಶಾಲತಾ, ಸರಿಗಮ ವಿಜಿ, ಸತ್ಯಜಿತ್‌, ಹರೀಶ್‌ರೈ, ಗುರುಕಿರಣ್‌ ಮೊದಲಾದವರಿದ್ದಾರೆ.

English summary
Vali went to sensor house, dady no.1 shooting in full swing

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada