twitter
    For Quick Alerts
    ALLOW NOTIFICATIONS  
    For Daily Alerts

    ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಬೆಳ್ಳಿಹೆಜ್ಜೆ

    By Rajendra
    |

    Cinematographer Sundaranath Suvarna
    ಸಿನಿಮಾ ಒಂದರ ಯಶಸ್ಸಿನ ಹಿಂದೆ ಹಲವಾರು ತಂತ್ರಜ್ಞರ ಕೈಚಳಕ ಅಡಗಿರುತ್ತದೆ. ಅವರಲ್ಲಿ ಪ್ರಮುಖವಾಗಿ ಹೆಸರಿಸಬೇಕಾದವರು ನೆರಳು ಬೆಳಕಿನ ಜೊತೆ ಚೆಲ್ಲಾಟವಾಡುವ ಛಾಯಾಗ್ರಾಹಕ. ಕತೆ, ಚಿತ್ರಕತೆಗೆ ಪೂರಕವಾಗಿ ಕಣ್ಮನ ಸೆಳೆಯುವ ಛಾಯಾಗ್ರಹಣ ಬೇಕೇ ಬೇಕು.

    ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಛಾಯಾಗ್ರಾಹಕರ ಕೈಚಳಕ ಮಹತ್ವದ ಪಾತ್ರವಹಿಸುತ್ತದೆ. ಕಲಾವಿದರ ಹಾವಭಾವಗಳು, ಸಂದರ್ಭ ಸನ್ನಿವೇಶಗಳನ್ನು ಸಮರ್ಥವಾಗಿ ತೆರೆಯ ಮೇಲೆ ತರುವ ಜಾಣ್ಮೆ ಅವರಿಗೆ ಇರಬೇಕು. ಹಾಗಿದ್ದರೆ ಮಾತ್ರ ಅವರು ಸಮರ್ಥ ಛಾಯಾಗ್ರಾಹಕರಾಗಲು ಸಾಧ್ಯ.

    ಅಂತಹ ಒಬ್ಬ ಪ್ರತಿಭಾನ್ವಿತ ಛಾಯಾಗ್ರಾಹಕ ಎಂದರೆ ಸುಂದರನಾಥ ಸುವರ್ಣ. 'ಅಪರೂಪದ ಅತಿಥಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಅವರು ಬಳಿಕ ಹಲವಾರು ಚಿತ್ರಗಳಿಗೆ ಅತ್ಯುತ್ತಮ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಸ್ವತಃ ಚಿತ್ರ ನಿರ್ದೇಶಕರೂ ಆಗಿರುವ ಕಾರಣ ಅವರ ಕ್ಯಾಮೆರಾ ಕಣ್ಣು ಬಲು ಚುರುಕು.

    ಆರಂಭ, ಟೈಗರ್, ಅಗ್ನಿ ಪರ್ವ, ಶ್ರೀ ಮಂಜುನಾಥ, ಮುಸ್ಸಂಜೆ ಮಾತು, ಚೆಲ್ಲಾಟ, ಅಮೃತವರ್ಷಿಣಿ, ಗಂಡುಗಲಿ ಕುಮಾರರಾಮ, ಕಿಲಾಡಿ ತಾತ, ಆಪರೇಷನ್ ಅಂತ, ಅನುರಾಗ ಸಂಗಮ, ಲಾಕಪ್ ಡೆತ್, ಗೋಲಿಬಾರ್, ನಮ್ಮರ ಮಂದಾರ ಹೂವೆ...ಹೀಗೆ ಸುವರ್ಣ ಅವರ ಚಿತ್ರಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

    ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವೂ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಮದಲ್ಲಿ ಈಗಾಗಲೆ ಹಲವಾರು ಕಲಾವಿದರು ತಮ್ಮ ಹೆಜ್ಜೆ ಗುರುತುಗಳನ್ನು ತಮ್ಮ ಅಭಿಮಾನಿಗಳ ಜೊತೆ ಮೆಲುಕು ಹಾಕಿದ್ದಾರೆ. ಆದರೆ ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಲು ಅಪರೂಪ ಎನ್ನಬಹುದು.

    ಅಕಾಡೆಮಿ ಅಧಕ್ಷ ಸ್ಥಾನವನ್ನು ತಾರಾ ಅನುರಾಧಾ ಅಲಂಕರಿಸಿದ ಮೇಲೆ 'ಬೆಳ್ಳಿಹೆಜ್ಜೆ' ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಅಕಾಡೆಮಿ ಅಧಕ್ಷರಾಗಿದ್ದ ಟಿ.ಎಸ್.ನಾಗಾಭರಣ ಅವರು ಅಪರೂಪದ 'ಬೆಳ್ಳಿಹೆಜ್ಜೆ' ಕಾರ್ಯಕ್ರಮವನ್ನು ಆರಂಭಿಸಿದ್ದರು.

    ಈ ಬಾರಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬಾದಾಮಿ ಹೌಸ್‌ನ ಪ್ರಿಯದರ್ಶಿನಿ ಹಾಲ್‌ನಲ್ಲಿ ನಡೆಯಲಿದೆ. ಜೂ.23ರಂದು ಸಂಜೆ 5 ಗಂಟೆಗೆ ಸರಿಯಾಗಿ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಬಹುದು. (ಒನ್‌ಇಂಡಿಯಾ ಕನ್ನಡ)

    English summary
    Meet Kannada films successful cinematographer Sundaranath Suvarna at Bangalore (Priyadarshini Hall of Badami House) in Belli Hejje programme of Karnataka Chalanachitra Academy held on 23th June at 5 pm. He started his career from 'Apuroopadha Athitigalu'. He directed films like Golibar, Lock Up Death, Nammura Mandhara Hoove, Rajakiya, Gandugali Kumara Rama etc.
    Friday, June 22, 2012, 16:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X