»   » ಸುಂದರಪಾಂಡ್ಯನ್ ರೀಮೇಕ್ ನಲ್ಲಿ ರಾಕಿಂಗ್ ಸ್ಟಾರ್

ಸುಂದರಪಾಂಡ್ಯನ್ ರೀಮೇಕ್ ನಲ್ಲಿ ರಾಕಿಂಗ್ ಸ್ಟಾರ್

Posted By:
Subscribe to Filmibeat Kannada
ತಮಿಳು, ತೆಲುಗಿನ ಯಶಸ್ವಿ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿ ಒಂದಷ್ಟು ಚಿತ್ರಗಳು ಆನೆಪಟಾಕಿ ತರಹ ಸೌಂಡ್ ಮಾಡಿದರೆ ಇನ್ನೂ ಕೆಲವು ಠುಸ್ ಎನ್ನುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಈಗ ತಮಿಳಿನ ಮತ್ತೊಂದು ಯಶಸ್ವಿ ಚಿತ್ರ 'ಸುಂದರಪಾಂಡ್ಯನ್' ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಪಕ್ಕಾ ಕಾಮಿಡಿ ಚಿತ್ರ ಇದಾಗಿದ್ದು ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.

ಈ ಹಿಂದೆ ಯಶ್ ಅವರು ತಮಿಳಿನ ಯಶಸ್ವಿ ಚಿತ್ರ 'ಕಲಾವಣಿ'ಯ ಕನ್ನಡ ರೀಮೇಕ್ 'ಕಿರಾತಕ' ಚಿತ್ರದಲ್ಲಿ ಅಭಿನಯಿಸಿದ್ದರು. ಆ ಚಿತ್ರ ಹಿಟ್ ಪಟ್ಟಿ ಸೇರಿತು. ಈಗ ರೀಮೇಕ್ ಆಗುತ್ತಿರುವ 'ಸುಂದರಪಾಂಡ್ಯನ್' ಚಿತ್ರಕ್ಕೆ ಇನ್ನೂ ಕನ್ನಡದ ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರಕ್ಕೆ ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳಲಿದ್ದಾರೆ.

ಚಿತ್ರ ರೀಮೇಕ್ ಆದರೂ ಚಿತ್ರಕಥೆಯಲ್ಲಿ ಹೊಸತನವಿದೆ. ಹಾಗಾಗಿ ರೀಮೇಕ್ ಆದರೂ ಪರ್ವಾಗಿಲ್ಲ ಎಂದು ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಯಶ್ ತಿಳಿಸಿದ್ದಾರೆ. ಇನ್ನು 'ಸುಂದರಪಾಂಡ್ಯನ್' ಚಿತ್ರದ ವಿಚಾರಕ್ಕೆ ಬರುವುದಾದರೆ ತಮಿಳಿನ ಶಶಿಕುಮಾರ್, ಲಕ್ಷ್ಮಿ ಮೆನನ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರ.

ಕನ್ನಡದ 'ಸುಂದರಪಾಂಡ್ಯನ್' ಚಿತ್ರದ ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ತಮಿಳು ನಟ ಶಶಿಕುಮಾರ್ ಅವರ ನಾಡೋಡಿಗಳ್, ಸುಬ್ರಮಣ್ಯಪುರಂ, ಪೊರಾಳಿ ಚಿತ್ರಗಳು ಕ್ರಮವಾಗಿ ಹುಡುಗರು, ಪ್ರೇಮ್ ಅಡ್ಡ ಹಾಗೂ ಯಾರೇ ಕೂಗಾಡಲಿ ಹೆಸರಲ್ಲಿ ರೀಮೇಕ್ ಆಗಿವೆ. ಈಗ ಸುಂದರಪಾಂಡ್ಯನ್ ಕೂಡ ರೀಮೇಕ್ ಆಗುತ್ತಿದೆ. (ಏಜೆನ್ಸೀಸ್)

English summary
Tamil Sundarapandian, a comedy drama film directed by debutant Prabhakaran to be remade in Kannada Rocking Star Yash as the hero of the film directing by Guru Deshpande. The film is yet to be titled in Kannada.
Please Wait while comments are loading...