Don't Miss!
- Sports
ಐಪಿಎಲ್ 2021ರಲ್ಲಿ ಚೊಚ್ಚಲ ವಿಕೆಟ್ ಪಡೆದ ಇಶಾಂತ್ ಶರ್ಮಾ - Automobiles
ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ - News
ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್ - Education
SBI Recruitment 2021: 5237 ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ - Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಏ. 27ರ ಮಾರುಕಟ್ಟೆ ದರ ಇಲ್ಲಿದೆ - Lifestyle
ಮೇ 01ಕ್ಕೆ ವೃಷಭದಲ್ಲಿ ಬುಧ ಸಂಚಾರ: ನಿಮ್ಮ ರಾಶಿಯ ಮೇಲೆ ಬೀರುವ ಪ್ರಭಾವಗಳಿವು - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋವಿಡ್‌ಗೆ ಸುನೇತ್ರ ಪಂಡಿತ್ ಸಹೋದರಿ ಬಲಿ: ಬಿಬಿಎಂಪಿಗೆ ತಿವಿದ ನಟಿ
ನಟಿ ಸುನೇತ್ರ ಪಂಡಿತ್ ಅವರ ಅಕ್ಕ ಇಂದು ಕೊರೊನಾಕ್ಕೆ ಬಲಿಯಾಗಿದ್ದಾರೆ. ಒಂದು ವಾರಕ್ಕೆ ಮುನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುನೇತ್ರ, ಕೆಟ್ಟ ವ್ಯವಸ್ಥೆಯಿಂದಾಗಿ ನನ್ನ ಅಕ್ಕ ಸತ್ತಿದ್ದಾಳೆ. ಬಿಬಿಎಂಪಿಯವರು ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳನ್ನು ಅಲಾಟ್ ಮಾಡುವಾಗ ಅಲ್ಲಿ ಐಸಿಯು ಇದೆಯೇ ಇಲ್ಲವೆ ಎಂಬುದನ್ನು ಖಚಿತಪಡಿಸಿಕೊಂಡು ಅಲಾಟ್ ಮಾಡಲಿ. ಐಸಿಯು ಇಲ್ಲದ ಆಸ್ಪತ್ರೆಗೆ ಅಕ್ಕನನ್ನು ಸೇರಿಸಿದ್ದರಿಂದ ಅಕ್ಕ ಸಾಯುವ ಸ್ಥಿತಿ ಬಂತು' ಎಂದು ಕಣ್ಣೀರು ಹಾಕಿದ್ದಾರೆ ಸುನೇತ್ರ.
'ವಾರದ ಹಿಂದೆ ಬಿಬಿಎಂಪಿ ಹೇಳಿದಂತೆ ಅಕ್ಕನನ್ನು ಮಹಾವೀರ್ ಆಸ್ಪತ್ರೆಗೆ ಸೇರಿಸಿದ್ದೆವು. ಅಕ್ಕನಿಗೆ ಡಯಾಬಿಟೀಸ್ ಇತ್ತು. ಯುಗಾದಿ ಹಬ್ಬದ ವರೆಗೆ ಅಕ್ಕ ಚೆನ್ನಾಗಿ ಇದ್ದಳು. ಆದರೆ ಅದೇ ದಿನ ಬೆಳಿಗ್ಗೆ ಕರೆ ಮಾಡಿ ಐಸಿಯುಗೆ ಶಿಫ್ಟ್ ಮಾಡಬೇಕು ಎಂದರು' ನಡೆದ ಘಟನೆ ವಿವರಿಸಿದರು ಸುನೇತ್ರ.
'ಆದರೆ ಮಹಾವೀರ್ ಆಸ್ಪತ್ರೆಯಲ್ಲಿ ಐಸಿಯು ಇರಲಿಲ್ಲ. ಅಲ್ಲಿ ಆಕ್ಸಿಜನ್ ಸಹ ಇರಲಿಲ್ಲ. ನಂತರ ನಾವೇ ಅಲ್ಲಿ ಇಲ್ಲಿ ಹುಡುಕಿ ಐಸಿಯು ಇರುವ ಆಸ್ಪತ್ರೆಗೆ ದಾಖಲಿಸಿದೆವು ಆದರೆ ಅಷ್ಟರಲ್ಲಿ ಸಮಯ ಮೀರಿ ಆಗಿತ್ತು' ಎಂದು ಕಣ್ಣೀರು ಹಾಕಿದರು.
'ಸರ್ಕಾರಕ್ಕೆ, ಬಿಬಿಎಂಪಿಗೆ, ಕೂಲಿ ಕಾರ್ಮಿಕನಿಗೆ, ಮಾಧ್ಯಮಗಳಿಗೆ, ಕಲಾವಿದರಿಗೆ ಎಲ್ಲರಿಗೂ ಒತ್ತಡ ಇದೆ ಆದರೆ ಅಧಿಕಾರ ಸ್ಥಾನದಲ್ಲಿರುವವರು ರೋಗಿಗಳ ಜೀವವನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಮೊದಲ ದಿನ ಅಕ್ಕನನ್ನು ಐಸಿಯು ಇರುವ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಲು ಸೂಚಿಸಿದ್ದರೆ. ಅಥವಾ ಐಸಿಯು ಇರುವ ಆಸ್ಪತ್ರೆಗಳನ್ನಷ್ಟೆ ಕೋವಿಡ್ ರೋಗಿಗಳಿಗೆ ಮೀಸಲಾಗಿಟ್ಟಿದ್ದಿದ್ದರೆ ಇಂದು ಅಕ್ಕ ಬದುಕಿರುತ್ತಿದ್ದಳು' ಎಂದಿದ್ದಾರೆ ಸುನೇತ್ರ ಪಂಡಿತ್.
ಸುನೇತ್ರ ಪತಿ ರಮೇಶ್ ಪಂಡಿತ್ ಮಾತನಾಡಿ ''ಯಾರೋ ಏನೋ ಸಹಾಯ ಮಾಡ್ತಾರೆ. ಏನೂ ಆಗೊಲ್ಲ ಬಿಡು''. ಇಂಥಹಾ ಬೇಜವಾಬ್ದಾರಿಯನ್ನು ಬಿಟ್ಟು ಎಲ್ಲರೂ ಎಚ್ಚರಿಕೆಯಿಂದಿರಿ, ನಿಲಕ್ಷ್ಯ ಬೇಡವೇ ಬೇಡ. ಕೆಲವರು ಕೊರೊನಾ ಇಲ್ಲ ಎನ್ನುತ್ತಿದ್ದಾರೆ ಅವರಿಗೆ ಕಪಾಳಕ್ಕೆ ಹೊಡೀರಿ. ಅದರ ನೋವು ಅನುಭವಿಸಿದವರಿಗಷ್ಟೆ ಗೊತ್ತು' ಎಂದು ಕೈಮುಗಿದು ಕಣ್ಣೀರು ಹಾಕಿದರು ರಮೇಶ್ ಪಂಡಿತ್.


Click it and Unblock the Notifications






























