»   » 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್ ಯಾವಾಗ?

'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್ ಯಾವಾಗ?

Posted By:
Subscribe to Filmibeat Kannada

'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಮಾರ್ಚ್ ಮೊದಲ ವಾರ, ಅಂದ್ರೆ ಮಾರ್ಚ್ 4ನೇ ತಾರೀಖು ತೆರೆಗೆ ಬರಲಿದೆ ಅಂತ ಈ ಹಿಂದೆ ಸುದ್ದಿ ಆಗಿತ್ತು. ಅದನ್ನ ನೀವೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ಓದಿದ್ರಿ.

ಆದ್ರೀಗ, ಮಾರ್ಚ್ 4ನೇ ತಾರೀಖು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ತೆರೆ ಕಾಣುವುದು ಅನುಮಾನ. ಯಾಕಂದ್ರೆ, ಮಾರ್ಚ್ 4 ರಂದು ಬಿಡುಗಡೆ ಆಗಲು ಕಾಯುತ್ತಿರುವ ಕನ್ನಡ ಚಿತ್ರಗಳ ಕ್ಯೂ ಕೊಂಚ ದೊಡ್ಡದಾಗಿದೆ.[ಮುಂದಿನ ತಿಂಗಳು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್]

Suni directorial 'Simpallag Innond Love Story' release date changed

ಇನ್ನೊಂದು ಪ್ರಮುಖ ಅಂಶ ಅಂದ್ರೆ, 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ.

ಮೂರು ವರ್ಷಗಳ ಹಿಂದೆ (2013) ಮಾರ್ಚ್ 8 ರಂದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಬಿಡುಗಡೆ ಆಗಿತ್ತು. ಆ ದಿನಾಂಕದ ಹಿಂದೆ ಮುಂದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ತೆರೆಗೆ ತರಬೇಕು ಎನ್ನುವುದು 'ಸಿಂಪಲ್' ಸುನಿ ಸೆಂಟಿಮೆಂಟ್.[ಸದ್ದಿಲ್ಲದೇ ರೆಡಿಯಾಗಿದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ']

ಹೀಗಾಗಿ, ಮಾರ್ಚ್ 4 ರಂದು ಆಗದೇ ಇದ್ದರೂ, ಅಷ್ಟರೊಳಗೆ ಸೆನ್ಸಾರ್ ಆದರೆ, ಮಾರ್ಚ್ 11 ರಂದು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್ ಪಕ್ಕಾ ಅಂತಾರೆ ನಿರ್ದೇಶಕ ಸುನಿ.

ಅಂದ್ಹಾಗೆ, 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದಲ್ಲಿ ಮಾತಿನ ಪಟಾಕಿ ಸಿಡಿಸುವವರು ನಟಿ ಮೇಘನಾ ಗಾಂವ್ಕರ್ ಹಾಗೂ ನಟ ಪ್ರವೀಣ್.

English summary
Simple Suni directorial 'Simpallag Innond Love Story' is all set to release on March 11th. 'Simpallag Innond Love Story' features Meghana Gaonkar and Praveen in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada