ಮುಂದಿನ ತಿಂಗಳು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್

By Harshitha

ಕಿಸಕ್ ಅಂತ ನಗು ತರಿಸುವ ಡೈಲಾಗ್ಸ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾವನ್ನ ನೀವೆಲ್ಲಾ ಮಿಸ್ ಮಾಡಿರುವುದಕ್ಕೆ ಚಾನ್ಸೇ ಇಲ್ಲ ಬಿಡಿ.

ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಅದೇ ರೇಂಜ್ ನಲ್ಲಿ, ಅಂಥದ್ದೇ ಚಿನಕುರುಳಿ ಸಂಭಾಷಣೆ ಇರುವ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

Suni directorial 'Simpallag Innond Love Story' release on March 4th

ಮಾರ್ಚ್ ಮೊದಲ ವಾರ ಅಂದ್ರೆ, ಮಾರ್ಚ್ 4 ನೇ ತಾರೀಖು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಕಥನ-ರಚನ-ವಚನ-ಗೀತ ರಚನ-ನಿರ್ದೇಶನ ಮಾಡಿರುವುದು 'ಸಿಂಪಲ್' ಸುನಿ. [ಸದ್ದಿಲ್ಲದೇ ರೆಡಿಯಾಗಿದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ']

ಮೇಘನಾ ಗಾಂವ್ಕರ್ ಮತ್ತು ಪ್ರವೀಣ್ ರವರ ಸಿಂಪಲ್ ಲವ್ ಸ್ಟೋರಿಯೇ ಈ ಸಿನಿಮಾ. ಹೇಳಿ ಕೇಳಿ, ಇದು 'ಸಿಂಪಲ್' ಸುನಿ ರಚನ-ವಚನ ಇರುವ ಸಿನಿಮಾ. ಹಾಗಿದ್ಮೇಲೆ, ಇಲ್ಲಿ ಡಿಸೈನ್ ಡಿಸೈನ್ ಡೈಲಾಗ್ಸ್ ಇರಲೇಬೇಕು. ಅದಕ್ಕೆ ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಸಾಕ್ಷಿ.

Suni directorial 'Simpallag Innond Love Story' release on March 4th

ಭರತ್.ಬಿ.ಜೆ ಹಾಗೂ ಸಾಯಿ ಕಿರಣ್ ಸಂಗೀತ ನಿರ್ದೇಶನದ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಹಾಡುಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಹು ನಿರೀಕ್ಷೆಯೊಂದಿಗೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಮಾರ್ಚ್ 4 ರಂದು ಬಿಡುಗಡೆ ಆಗುತ್ತಿದೆ. ನೋಡೋಕೆ ನೀವು ರೆಡಿನಾ.....

More from Filmibeat

English summary
Simple Suni directorial 'Simpallag Innond Love Story' is all set to release on March 4th. 'Simpallag Innond Love Story' features Meghana Gaonkar and Praveen in the lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X