»   » ಸದ್ದಿಲ್ಲದೇ ರೆಡಿಯಾಗಿದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'

ಸದ್ದಿಲ್ಲದೇ ರೆಡಿಯಾಗಿದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'

Posted By: ಹರಾ
Subscribe to Filmibeat Kannada

ಅದು 2013...ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಸಂಚಲನ ಶುರುವಾದ ವರ್ಷ. ಹೊಸ ಪ್ರತಿಭೆಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಮನ್ನಣೆ ಸಿಕ್ಕ ವರುಷ. ಅದಕ್ಕೆ ಕಾರಣ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ.

ಸಿನಿಮಾ ಹಿಟ್ ಆಗ್ಬೇಕಂದ್ರೆ 'ಸ್ಟಾರ್ ಹೀರೋ'ಗಳೇ ಬೇಕಿಲ್ಲ. ಹೊಸ ಮುಖಗಳಿದ್ದರೂ, ಕಚಗುಳಿ ಇಡುವ ಡೈಲಾಗ್ಸ್, ಕಿವಿಗೆ ಇಂಪು ನೀಡುವ ಸಂಗೀತ ಇದ್ದರೆ, ಸಿನಿಮಾ 'ಸಿಂಪ್ಲೀ' ಸೂಪರ್ ಹಿಟ್ ಆಗುವುದು ಗ್ಯಾರೆಂಟಿ ಅಂತ ನಿರೂಪಿಸಿದ ಸಿನಿಮಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'.

simpallag-innond-love-story

ಸಿಂಪಲ್ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾ ಶತದಿನೋತ್ಸವ ಆಚರಿಸಿತು. ಸ್ಯಾಂಡಲ್ ವುಡ್ ನಲ್ಲಿ ನಾಯಕ ರಕ್ಷಿತ್ ಶೆಟ್ಟಿ, ನಾಯಕಿ ಶ್ವೇತಾ ಶ್ರೀವಾತ್ಸವ್ ಮತ್ತು ನಿರ್ದೇಶಕ ಸುನಿಗೆ ಭದ್ರ ನೆಲೆ ಕಟ್ಟಿಕೊಡ್ತು. [ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ವಿಮರ್ಶೆ]

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ನಂತರ 'ಬಹುಪರಾಕ್' ನಂತಹ ಹೊಸ ಪ್ರಯೋಗ ಮಾಡಿದ ನಿರ್ದೇಶಕ ಸುನಿ ಇದೀಗ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ರೆಡಿ ಮಾಡಿದ್ದಾರೆ.

ಅದಾಗಲೇ, ಸದ್ದಿಲ್ಲದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಶೂಟಿಂಗ್ ಕೂಡ ಬಹುತೇಕ ಕಂಪ್ಲೀಟ್ ಆಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.

ಅಂದ್ಹಾಗೆ, 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದಲ್ಲಿರುವ ನಾಯಕ-ನಾಯಕಿ ಯಾರು? ಅದಿನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಚಿತ್ರದಲ್ಲಿ ನಟಿಸಿರುವವರೆಲ್ಲಾ ಹೊಸಬರು.!

ಹೊಸಬರನ್ನೇ ಇಟ್ಕೊಂಡು ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿರುವ 'ಸಿಂಪಲ್' ಸುನಿ ಹೊಸ ವರ್ಷಕ್ಕೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಎಲ್ಲರೂ ನಿರೀಕ್ಷೆ ಮಾಡುವ ಹಾಗೆ, ಈ ಚಿತ್ರದಲ್ಲೂ 'ಕಿಸಕ್' ಅಂತ ನಗುವ ಡೈಲಾಗ್ಸ್ ಇರಲಿವೆ.

English summary
Simple Suni directorial 'Simpallag Innond Love Story' shooting is almost complete. Movie trailer will release in January 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada